ನವದೆಹಲಿ: ಶಾರುಖ್ ಖಾನ್ ತನ್ನ ಮಗ ಅಬ್ರಾಮ್ ಬಿಟ್ಟು ಎಲ್ಲಿ ಹೋಗುವುದಿಲ್ಲ. ಅದು ಕ್ರಿಕೆಟ್ ಪಂದ್ಯಗಳಿಂದ ಹಿಡಿದು ಚಿತ್ರೀಕರಣಕ್ಕೆ ಮತ್ತು ರಜೆಗೆ, ಇಬ್ಬರೂ ಒಟ್ಟಾಗಿಯೇ ಹೋಗುತ್ತಾರೆ.ಇದು ಭಾನುವಾರ ರಾತ್ರಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿಯೂ ಮುಂದುವರೆದಿತ್ತು.
ಈಗ ಮಗನ ಕುರಿತ ಭವಿಷ್ಯದ ಬಗ್ಗೆ ಮಾತನಾಡುತ್ತಾ ಶಾರುಖ್ ಖಾನ್ "ಅವರು ಇನ್ನೂ ಕ್ರಿಕೆಟ್ ಆಡಲು ಪ್ರಾರಂಭಿಸಲಿಲ್ಲ, ಆದರೆ ಇದೀಗ ಅವರು ಅಲ್ಪ ಸ್ವಲ್ಪ ಫುಟ್ಬಾಲ್ ಆಡುತ್ತಿದ್ದಾನೆ ಮತ್ತು ಭಾರತಕ್ಕೆ ಹಾಕಿ ಆಡಲು ಬಯಸುತ್ತೇನೆ" ಎಂದು ಶಾರುಖ್ ಖಾನ್ ಪಿಟಿಐಗೆ ತಿಳಿಸಿದ್ದಾರೆ.
ಅಷ್ಟಕ್ಕೂ ಶಾರುಖ್ ಖಾನ್ ರವರ ಹಾಕಿ ಪ್ರೀತಿ ಹೊಸದೇನಲ್ಲ, 2007 ರ ಚಲನಚಿತ್ರ ಚಕ್ ದೇ! ಇಂಡಿಯಾ ದಲ್ಲಿ ಅವರು ಹಾಕಿ ಕೋಚ್ ಆಗಿ ಪಾತ್ರ ನಿರ್ವಹಿಸಿದ್ದರು.