Benefits of Cashew Nuts : ವಿವಾಹಿತ ಪುರುಷರ ಆರೋಗ್ಯಕ್ಕೆ ಗೋಡಂಬಿ : ಇಲ್ಲಿದೆ ನೋಡಿ ಅದರ ಅದ್ಬುತ ಪ್ರಯೋಜನಗಳು

ಗೋಡಂಬಿಯಲ್ಲಿರುವ ಪೌಷ್ಟಿಕಾಂಶದ ಅಂಶಗಳು ದೇಹಕ್ಕೆ ಹಲವು ರೋಗಗಳಿಂದ ರಕ್ಷಣೆ ನೀಡುತ್ತದೆ. ಇಂದು ನಾವು ನಿಮಗಾಗಿ ಗೋಡಂಬಿಯಿಂದ ಪುರುಷರಿಗೆ ಆಗುವ ಅರೋಗ್ಯ ಪ್ರಯೋಜನಗಳನ್ನು ತಂದಿದ್ದೇವೆ ನೋಡಿ.

Written by - Channabasava A Kashinakunti | Last Updated : Aug 17, 2021, 10:19 AM IST
  • ಗೋಡಂಬಿಯ ಸೇವನೆಯು ವಿವಾಹಿತ ಪುರುಷರಿಗೆ ತುಂಬಾ ಪ್ರಯೋಜನಕಾರಿ
  • ಪುರುಷರ ಲೈಂಗಿಕ ಆರೋಗ್ಯವು ಎಲ್ಲಾ ರೀತಿಯಲ್ಲಿ ಶಕ್ತಿ ನೀಡಲು ತುಂಬಾ ಸಹಾಯಕ
  • ಗೋಡಂಬಿಯನ್ನು ಸೇವಿಸುವುದರಿಂದ ಹೊಟ್ಟೆ ಬೇಗ ತುಂಬುತ್ತದೆ
Benefits of Cashew Nuts : ವಿವಾಹಿತ ಪುರುಷರ ಆರೋಗ್ಯಕ್ಕೆ ಗೋಡಂಬಿ : ಇಲ್ಲಿದೆ ನೋಡಿ ಅದರ ಅದ್ಬುತ ಪ್ರಯೋಜನಗಳು title=

ಒಣ ಹಣ್ಣುಗಳ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಅದರಲ್ಲಿಯೂ ಗೋಡಂಬಿಯ ಸೇವನೆಯು ವಿಶೇಷವಾಗಿ ವಿವಾಹಿತ ಪುರುಷರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಕಾರಣದಿಂದಾಗಿ, ಪುರುಷರ ಲೈಂಗಿಕ ಆರೋಗ್ಯವು ಎಲ್ಲಾ ರೀತಿಯಲ್ಲಿ ಶಕ್ತಿ ನೀಡಲು ತುಂಬಾ ಸಹಾಯಕವಾಗಿದೆ. ಗೋಡಂಬಿಯಲ್ಲಿರುವ ಪೌಷ್ಟಿಕಾಂಶದ ಅಂಶಗಳು ದೇಹಕ್ಕೆ ಹಲವು ರೋಗಗಳಿಂದ ರಕ್ಷಣೆ ನೀಡುತ್ತದೆ. ಇಂದು ನಾವು ನಿಮಗಾಗಿ ಗೋಡಂಬಿಯಿಂದ ಪುರುಷರಿಗೆ ಆಗುವ ಅರೋಗ್ಯ ಪ್ರಯೋಜನಗಳನ್ನು ತಂದಿದ್ದೇವೆ ನೋಡಿ.

ವಿವಾಹಿತ ಪುರುಷರು ಪ್ರತಿದಿನ ಗೋಡಂಬಿ ಸೇವನೆ

ಗೋಡಂಬಿ(Cashew Nuts) ಸೇವಿಸುವುದರಿಂದ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳುವ ಮೊದಲು, ಪುರುಷರು ಪ್ರತಿದಿನ ಎಷ್ಟು ಗೋಡಂಬಿಯನ್ನು ಸೇವಿಸಬೇಕು ಎಂಬುವುದರ ಬಗ್ಗೆ ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಹೇಳಿದ್ದಾರೆ, ವಿವಾಹಿತ ಪುರುಷರು ಪ್ರತಿದಿನ ಒಂದು ಹಿಡಿ ಗೋಡಂಬಿಯನ್ನು ಸೇವಿಸಬೇಕು. ಬೆಳಿಗ್ಗೆ ಅಥವಾ ಸಂಜೆ ಗೋಡಂಬಿಯ ಸೇವನೆಯು ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ. ಬೆರಳೆಣಿಕೆಯಷ್ಟು ಗೋಡಂಬಿಯು ದೇಹಕ್ಕೆ ಅಗತ್ಯವಾದ ಪ್ರೋಟೀನ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಫೋಲೇಟ್, ಪೊಟ್ಯಾಸಿಯಮ್, ಸೋಡಿಯಂ, ಸತು, ವಿಟಮಿನ್ ಬಿ ಮತ್ತು ಸಿ ಅನ್ನು ಒದಗಿಸುತ್ತದೆ.

ಇದನ್ನೂ ಓದಿ : ನೇರಳೆ ಹಣ್ಣು ತಿಂದ ನಂತರ ತಪ್ಪಿಯೂ ಈ ವಸ್ತುಗಳನ್ನು ಸೇವಿಸಬೇಡಿ

ವಿವಾಹಿತ ಪುರುಷರಿಗೆ ಗೋಡಂಬಿ ಸೇವನೆಯ ಲಾಭಗಳು

ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಪುರುಷರ ಲೈಂಗಿಕ ಆರೋಗ್ಯ ಮತ್ತು ರಕ್ತ ಪರಿಚಲನೆಯ ನಡುವೆ ಆಳವಾದ ಸಂಬಂಧವಿದೆ. ಗೋಡಂಬಿಯಲ್ಲಿ ಮೆಗ್ನೀಶಿಯಂ, ಪೊಟ್ಯಾಶಿಯಂ ಮತ್ತು ಇತರ ಅಗತ್ಯ ಪೋಷಕಾಂಶಗಳು ರಕ್ತದ ಹರಿವಿಗೆ ಪ್ರಯೋಜನಕಾರಿ. ಈ ಕಾರಣದಿಂದಾಗಿ ವಿವಾಹಿತ ಪುರುಷರು(Men) ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು.

1. ಗೋಡಂಬಿ ಸೇವನೆಯು ನಿಮಿರುವಿಕೆಯನ್ನು ಹೆಚ್ಚಿಸುತ್ತದೆ

ಆರೋಗ್ಯಕರ ಲೈಂಗಿಕತೆ(Sexual Health) ಮತ್ತು ಕಾರ್ಯಕ್ಷಮತೆಗಾಗಿ ಪುರುಷರು ನಿಮಿರುವಿಕೆಯನ್ನು ಹೊಂದಿರುವುದು ಬಹಳ ಮುಖ್ಯ. ಇದರಲ್ಲಿ ನೈಟ್ರಿಕ್ ಆಕ್ಸೈಡ್ ಇರುತ್ತದೆ ಎಂದು ಹಲವು ಸಂಶೋಧನೆಗಳಲ್ಲಿ ಸಾಬೀತಾಗಿದೆ. ನೈಟ್ರಿಕ್ ಆಮ್ಲಕ್ಕೆ ಅರ್ಜಿನೈನ್ ಅಮೈನೋ ಆಸಿಡ್ ಬೇಕು, ಇದು ಗೋಡಂಬಿಯಲ್ಲಿ ಕಂಡುಬರುತ್ತದೆ.

2. ಪುರುಷ ಫಲವತ್ತತೆಯನ್ನು ಹೆಚ್ಚಿಸುತ್ತದೆ

ತಂದೆಯಾಗಲು ಯೋಜಿಸುತ್ತಿರುವ ವಿವಾಹಿತ ಪುರುಷರು(Married Man) ಗೋಡಂಬಿಯನ್ನು ಸೇವಿಸಬೇಕು. ಏಕೆಂದರೆ, ಗೋಡಂಬಿಯಲ್ಲಿ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಸತು ಸಹಕಾರಿಯಾಗಿದೆ. ಗೋಡಂಬಿ ಪುರುಷರ ಜೊತೆಗೆ ಮಹಿಳೆಯರ ಫಲವತ್ತತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ : Skin Care: ಫೇಸ್ ವಾಶ್ ವೇಳೆ ಎಂದಿಗೂ ಇಂತಹ ತಪ್ಪುಗಳನ್ನು ಮಾಡಬೇಡಿ

3. ಪುರುಷರಿಗೆ ಗೋಡಂಬಿ  ತಿನ್ನುವುದರಿಂದ ಸ್ನಾಯುಗಳ ಬಲ ಹೆಚ್ಚಿಸುತ್ತದೆ

ಗೋಡಂಬಿಯನ್ನು ಸೇವಿಸುವುದರಿಂದ ಹೊಟ್ಟೆ ಬೇಗ ತುಂಬುತ್ತದೆ. ಏಕೆಂದರೆ, ಗೋಡಂಬಿಯು ಸ್ನಾಯುಗಳು ಮತ್ತು ಮೂಳೆಗಳನ್ನು(Bones) ಬಲಪಡಿಸಲು ಸಹಾಯ ಮಾಡುತ್ತದೆ. ಏಕೆಂದರೆ, ಇದು ಪ್ರೋಟೀನ್, ವಿಟಮಿನ್ ಕೆ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಇದು ಮೂಳೆಗಳು ಮತ್ತು ಸ್ನಾಯುಗಳಿಗೆ ಉತ್ತಮ ಆಹಾರವಾಗಿದೆ.

4. ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ

ಹಾರ್ಮೋನ್ ಟೆಸ್ಟೋಸ್ಟೆರಾನ್ ಪುರುಷರ ಲೈಂಗಿಕ ಆರೋಗ್ಯ(Men Sexual Health)ದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಈ ಕಾರಣದಿಂದಾಗಿ, ಲೈಂಗಿಕ ಪ್ರಚೋದನೆಯ ಜೊತೆಗೆ ಕೂದಲು ಉದುರುವಿಕೆ, ಸ್ನಾಯು ಸೆಳೆತ ಇತ್ಯಾದಿಗಳ ಸಮಸ್ಯೆಯೂ ಆರಂಭವಾಗುತ್ತದೆ. ಆದರೆ ಗೋಡಂಬಿಯಲ್ಲಿರುವ ಸೆಲೆನಿಯಮ್ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಈ ಎಲ್ಲ ಸಮಸ್ಯೆಗಳು ದೂರವಾಗುತ್ತವೆ.

ಇದನ್ನೂ ಓದಿ : Herbs For Hair: ನಿಮ್ಮ ಕೂದಲಿಗೆ ಹೊಸ ಲೈಫ್ ನೀಡುತ್ತೆ ಈ 5 ಗಿಡಮೂಲಿಕೆಗಳು

5. ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟುವುದು

ಪುರುಷರಲ್ಲಿ ಹೆಚ್ಚಾಗಿ ಕಂಡು ಬರುವ ಪ್ರಾಸ್ಟೇಟ್ ಕ್ಯಾನ್ಸರ್(Prostate Cancer) ಅಪಾಯವನ್ನು ಕಡಿಮೆ ಮಾಡಲು ಗೋಡಂಬಿ ಸಹಕಾರಿಯಾಗಿದೆ. ಏಕೆಂದರೆ ಇದರಲ್ಲಿ ಹೇರಳವಾಗಿರುವ ವಿಟಮಿನ್‌ಗಳು ಮತ್ತು ಖನಿಜಗಳು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಫ್ರೀ ಯಾಡಿಕಲ್ ಹಾನಿಯಿಂದ ಉಂಟಾಗುತ್ತದೆ. ಆದ್ದರಿಂದ, ಗೋಡಂಬಿಯ ಸೇವನೆಯು ಪುರುಷರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News