Zika Virus Update: ಉತ್ತರ ಪ್ರದೇಶದ ಕಾನ್ಪುರ್ ನಲ್ಲಿ ಝೀಕಾ ವೈರಸ್ ಮೊದಲ ಪ್ರಕರಣ ಪತ್ತೆ, ತನಿಖೆಗಾಗಿ ಕಾನ್ಪುರ್ ತಲುಪಿದ ದೆಹಲಿ ತಜ್ಞರ ತಂಡ

Zika Virus Update - ಉತ್ತರ ಪ್ರದೇಶದ (Uttar Pradesh) ಕಾನ್ಪುರ್ ನಲ್ಲಿ (Kanpur) ಝೀಕಾ ವೈರಸ್ ನ (Jhika Virus) ಮೊದಲ ಪ್ರಕರಣ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಲೇ ದೆಹಲಿಯ ತಜ್ಞರ ತಂಡವು ಕಾನ್ಪುರ್ ತಲುಪಿದೆ ಮತ್ತು ರೋಗಿಯ ಸಂಪರ್ಕಕ್ಕೆ ಬಂದ ಜನರ ಮಾದರಿಗಳನ್ನು ಪಡೆದುಕೊಂಡಿದೆ. 

Written by - Nitin Tabib | Last Updated : Oct 24, 2021, 08:19 PM IST
  • ಉತ್ತರ ಪ್ರದೇಶದ ಕಾನ್ಪುರ್ ನಲ್ಲಿ ಝೀಕಾ ವೈರಸ್ ನ ಮೊದಲ ಪ್ರಕರಣ ಪತ್ತೆ.
  • ಕಾನ್ಪುರಕ್ಕೆ ದೌಡಾಯಿಸಿದ ದೆಹಲಿ ತಜ್ಞರ ತಂಡ
  • ರೋಗ ಹರಡುವಿಕೆ ತಡೆಗಟ್ಟಲು 10 ತಂಡಗಳ ರಚನೆ
Zika Virus Update: ಉತ್ತರ ಪ್ರದೇಶದ ಕಾನ್ಪುರ್ ನಲ್ಲಿ ಝೀಕಾ ವೈರಸ್ ಮೊದಲ ಪ್ರಕರಣ ಪತ್ತೆ, ತನಿಖೆಗಾಗಿ ಕಾನ್ಪುರ್ ತಲುಪಿದ ದೆಹಲಿ ತಜ್ಞರ ತಂಡ title=
Zhika Virus In Uttar Pradesh (File Photo)

Zhika Virus In Uttar Pradesh - ಉತ್ತರ ಪ್ರದೇಶಕ್ಕೆ ಜ್ಹೀಕಾ ವೈರಸ್ ಪ್ರವೇಶಿಸಿದೆ. ವಾಸ್ತವವಾಗಿ, ರಾಜ್ಯದಲ್ಲಿ ಝೀಕಾ ವೈರಸ್‌ನ ಮೊದಲ ರೋಗಿಯನ್ನು ಕಾನ್ಪುರದಲ್ಲಿ ಪತ್ತೆ ಮಾಡಲಾಗಿದೆ. ಝೀಕಾ ವೈರಸ್ ರೋಗಿ ಪತ್ತೆಯಾದ ನಂತರ, ದೆಹಲಿಯ ತಜ್ಞರ ತಂಡವು ಕಾನ್ಪುರ ತಲುಪಿದೆ ಮತ್ತು ರೋಗಿಯ ಸಂಪರ್ಕಕ್ಕೆ ಬಂದ ಜನರ ಮಾದರಿಗಳನ್ನು ತೆಗೆದುಕೊಂಡಿದೆ. ಬಳಿಕ ಎಲ್ಲ ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ರೋಗಿಯು ವಾಯುಪಡೆ ನಿಲ್ದಾಣದ ಉದ್ಯೋಗಿ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಸ್ತುತ ರೋಗಿಯನ್ನು ಏರ್ ಫೋರ್ಸ್ ಆಸ್ಪತ್ರೆಗೆ ಭರ್ತಿ ಮಾಡಲಾಗಿದೆ. ಲಕ್ಷಣಗಳ ಆಧಾರದ ಮೇಲೆ ಆಸ್ಪತ್ರೆಯ ಸಿಬ್ಬಂದಿ ಆತನ ಸ್ಯಾಂಪಲ್ ಅನ್ನು ತನಿಖೆಗಾಗಿ ಪುಣೆಗೆ ಕಳುಹಿಸಿದೆ. ಝೀಕಾ ವೈರಸ್ ಸೋಂಕಿತ ವಾಯುಸೇನೆಯ ಅಧಿಕಾರಿ ಕಳೆದ ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ವೈರಸ್ ನ ಪ್ರಸಾರದ ತನಿಖೆ ನಡೆಸಲು ಒಟ್ಟು ಹತ್ತು ತಂಡಗಳನ್ನು ರಚಿಸಲಾಗಿದೆ.

ಇದನ್ನೂ ಓದಿ-Benefits of Dates : ಮಹಿಳೆಯರಿಗೆ ಈ ಸಮಯದಲ್ಲಿ 6 ಖರ್ಜೂರ ತುಂಬಾ ಪ್ರಯೋಜನಕಾರಿ : ಹೇಗೆ? ಅದರ ಬಗ್ಗೆ ತಿಳಿಯಿರಿ

ರೋಗ ಹರಡುವಿಕೆ ತಡೆಯಲು 10 ತಂಡಗಳನ್ನು ರಚಿಸಲಾಗಿದೆ
ಕಾನ್ಪುರದಲ್ಲಿ ಝೀಕಾ ವೈರಸ್ ರೋಗಿಯು ದೃಢಪಟ್ಟ ತಕ್ಷಣ, ಈ ವೈರಸ್ ಹರಡುವಿಕೆ ತಡೆಗಟ್ಟುವಿಕೆಗಾಗಿ ಮತ್ತು ಹೆಚ್ಚಿನ ತನಿಖೆಗಾಗಿ 10 ತಂಡಗಳನ್ನು ಕಾನ್ಪುರಕ್ಕೆ ಕಳುಹಿಸಲಾಗಿದೆ. ವೈರಸ್ ಹರಡುವುದನ್ನು ತಡೆಯಲು ಮತ್ತು ವೈರಸ್ ಹೇಗೆ ಹರಡುತ್ತದೆ ಎಂಬುದನ್ನು ಕಂಡುಹಿಡಿಯಲು ಈ ತಂಡಗಳು ಕಾರ್ಯನಿರ್ವಹಿಸಲಿವೆ.  ಉತ್ತರ ಪ್ರದೇಶದಲ್ಲಿ ವಾಯುಪಡೆಯ ವಾರಂಟ್ ಅಧಿಕಾರಿ ಎಂಎಂ ಅಲಿ ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಅವರನ್ನು ಪರೀಕ್ಷಿಸಿದ ಬಳಿಕ ಅವರ ಸ್ಯಾಂಪಲ್ ಅನ್ನು ಪುಣೆಗೆ ಕಳುಹಿಸಿದಾಗ ಅವರಲ್ಲಿ ಝಿಕಾ ವೈರಸ್ ಇರುವುದು ದೃಢಪಟ್ಟಿದೆ. ಝಿಕಾ ವೈರಸ್‌ನಿಂದ ಬಳಲುತ್ತಿರುವ ಎಂಎಂ ಅಲಿ ಪೋರಖ್ ಪುರ ನಿವಾಸಿ.ಯಾಗಿದ್ದಾರೆ.

ಇದನ್ನೂ ಓದಿ-Lose Weight Foods : ಈ ಆಹಾರಗಳು ನಿಮ್ಮ ತೂಕ ಇಳಿಸುವಲ್ಲಿ ಬಹಳ ಪರಿಣಾಮಕಾರಿ : ಯಾವವು ಇಲ್ಲಿದೆ ನೋಡಿ!

ತುರ್ತು ಸಭೆ ಕರೆದ ಜಿಲ್ಲಾಧಿಕಾರಿ
ಈ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಖ್ ಅವರು ಏರ್ ಫೋರ್ಸ್ ಆಸ್ಪತ್ರೆ ಸೇರಿದಂತೆ ಹಲವು ವೈದ್ಯಕೀಯ ಕಾಲೇಜುಗಳ ಆರೋಗ್ಯ ತಜ್ಞರೊಂದಿಗೆ ಸಭೆ ನಡೆಸಿದ್ದಾರೆ. ಇದರ ಹೊರತಾಗಿ, ಫಾಗಿಂಗ್ ಮತ್ತು ಸೊಳ್ಳೆ ನಿವಾರಕವನ್ನು ಸಿಂಪಡಿಸುವಂತೆ ಜಿಲ್ಲಾಧಿಕಾರಿಗಳು ನಗರಸಭೆಗೆ ಹೇಳಿದ್ದಾರೆ. ಇದು ರಾಜ್ಯದ ಮೊದಲ ಪ್ರಕರಣ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ-Benefits of Sesame Oil: ಚಳಿಗಾಲದಲ್ಲಿ ಈ ಕಾರಣದಿಂದ ಎಳ್ಳೆಣ್ಣೆ ಬಳಸಿ, ಇಲ್ಲಿವೆ ಅದರ ಐದು ಲಾಭಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News