Four Eared Cat: ನಾಲ್ಕು ಕಿವಿಗಳುಳ್ಳ ಬೆಕ್ಕನ್ನು ಎಂದಾದರೂ ನೋಡಿದ್ದೀರಾ? ಈ ಬೆಕ್ಕಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ಫಾಲೋವರ್ಸ್

Four Eared Cat - ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಬೆಕ್ಕಿನ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಈ ಬೆಕ್ಕಿಗೆ ಎರಡಲ್ಲ ಒಟ್ಟು 4 ಕಿವಿಗಳಿವೆ. ಈ ವಿಶಿಷ್ಟ ಬೆಕ್ಕನ್ನು ನೋಡಿದ ಜನರು ಬೆರಗಾಗುತ್ತಿದ್ದಾರೆ. 

Written by - Nitin Tabib | Last Updated : Nov 16, 2021, 04:23 PM IST
  • ವಿಶಿಷ್ಟ ಬೆಕ್ಕು ಟರ್ಕಿಯಲ್ಲಿ ವಾಸಿಸುತ್ತಿದೆ.
  • ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರಾರು ಅನುಯಾಯಿಗಳು.
  • ದಿನವಿಡೀ ನಿದ್ರಿಸುವ ಮಿಡಾಸ್, ರಾತ್ರಿಯಿಡಿ ಎಚ್ಚರದಿಂದ ಇರುತ್ತದೆ.
Four Eared Cat: ನಾಲ್ಕು ಕಿವಿಗಳುಳ್ಳ ಬೆಕ್ಕನ್ನು ಎಂದಾದರೂ ನೋಡಿದ್ದೀರಾ? ಈ ಬೆಕ್ಕಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ಫಾಲೋವರ್ಸ್  title=
Four Eared Cat (File Photo)

ನವದೆಹಲಿ: Four Eared Cat - ಈ ಜಗತ್ತಿನಲ್ಲಿ ಅನೇಕ ಸಂಗತಿಗಳು ಬಹಳ ವಿರಳವಾಗಿವೆ ಅವುಗಳನ್ನು ನೋಡಿದರೆ  ಆಶ್ಚರ್ಯವಾಗುತ್ತದೆ. ಅಂತಹ ವಿಶಿಷ್ಟ ಬೆಕ್ಕು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ (Social Media) ಸಾಕಷ್ಟು ಚರ್ಚೆಯಲ್ಲಿದೆ. ವಾಸ್ತವವಾಗಿ, ಈ ಬೆಕ್ಕಿಗೆ ನಾಲ್ಕು ಕಿವಿಗಳಿವೆ. ಅದಕ್ಕಾಗಿಯೇ ಇದು ಸಾಕಷ್ಟು ಹೆಡ್ಲೈನ್ (Bizarre News) ಗಿಟ್ಟಿಸುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬೆಕ್ಕು ಫೇಮಸ್
ಈ ಬೆಕ್ಕು ಟರ್ಕಿಯಲ್ಲಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಖ್ಯಾತಿ ಪಡೆದಿದೆ. 4 ತಿಂಗಳ ವಯಸ್ಸಿನ ಈ ಬೆಕ್ಕಿನ ಹೆಸರು ಮಿಡಾಸ್ (Midas) ಮತ್ತು ಇದು ತನ್ನದೇ ಆದ ಇನ್‌ಸ್ಟಾಗ್ರಾಮ್ (Instagram Account) ಪುಟವನ್ನು ಸಹ ಹೊಂದಿದೆ, ಇದನ್ನು 46 ಸಾವಿರಕ್ಕೂ ಹೆಚ್ಚು ಜನರು ಅನುಸರಿಸುತ್ತಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಈ ಮುದ್ದಾದ ಬೆಕ್ಕಿನ ಕಿವಿಗಳು ನಿಮಗೆ ಆಶ್ಚರ್ಯಕ್ಕೀಡು ಮಾಡುತ್ತದೆ. ಈ ಬೆಕ್ಕಿನ  ಎದೆಯ ಮೇಲೆ ಬಿಳಿ ಬಣ್ಣದ  ಜನ್ಮ ಗುರುತು ಇದ್ದು, ಅದು ಹೃದಯದ ಆಕಾರದಲ್ಲಿದೆ.

ಮಿಡಾಸ್ ವೈದ್ಯಕೀಯ ತಪಾಸಣೆಯಲ್ಲಿ ಫಿಟ್ ಆಗಿದೆ
ಟರ್ಕಿಯಲ್ಲಿ (Turkey) ವಾಸಿಸುವ ಮಹಿಳೆ (Turkish woman adopted 4 ear cat) ಕ್ಯಾನಿಸ್ ಡೋಸೆಮೆಸಿ (Canis Dosemeci) ಮತ್ತು ಅವರ ಸಂಗಾತಿ ಬೆಕ್ಕನ್ನು ದತ್ತು ತೆಗೆದುಕೊಂಡಿದ್ದಾರೆ. ಕ್ಯಾನಿಸ್ ಅವರು ಬೆಕ್ಕನ್ನು ಪ್ರಾಣಿಗಳ ವೈದ್ಯರಿಂದ  ಪರೀಕ್ಷಿಸಿರುವುದಾಗಿ ಹೇಳುತ್ತಾರೆ. ಅದು ಸಂಪೂರ್ಣವಾಗಿ ಆರೋಗ್ಯವಂತವಾಗಿದೆ.  ಬೆಕ್ಕಿನ ತಪಾಸಣೆ ಕೆಲವು ತಿಂಗಳುಗಳವರೆಗೆ ಮುಂದುವರೆಯಲಿದೆ.

ಇದನ್ನೂ ಓದಿ-Hardik Pandya ಅವರ ಕೋಟ್ಯಾಂತರ ಬೆಲೆ ವಾಚ್ ಗಿಂತಲೂ ದುಬಾರಿಯಾಗಿವೆ ಈ ಐದು ಗಡಿಯಾರಗಳು

ಮಿಡಾಸ್ ತುಂಬಾ ಚಂಚಲವಾಗಿದೆ
ಕ್ಯಾನಿಸ್ ಬೆಕ್ಕಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಮಿಡಾಸ್ ತನ್ನ ಹೊಸ ಮನೆಯಲ್ಲಿ ತುಂಬಾ ಚೆನ್ನಾಗಿ ವಾಸಿಸುತ್ತಿದೆ ಎಂದು ಹೇಳಿದ್ದಾರೆ. ಅವಳು ತನ್ನ ಹಾಸಿಗೆಯಲ್ಲಿ ಚಿಕ್ಕನಿದ್ರೆ ತೆಗೆದುಕೊಂಡು ನಂತರ ತನ್ನ ಆಟಿಕೆಗಳೊಂದಿಗೆ ಆಡುತ್ತಾಳೆ. ಮಿಡಾಸ್ ತುಂಬಾ ತಮಾಷೆಯ ಬೆಕ್ಕು ಎಂದು ಅವರು ಕ್ಯಾನಿಸ್ ಹೇಳುತ್ತಾರೆ. ಅವಳು ಅತ್ಯಂತ ಪ್ರೀತಿಯಿಂದ  ಎಲ್ಲರನ್ನು ಭೇಟಿಯಾಗುತ್ತಾಳೆ. ಇದಲ್ಲದೆ, ಅವಳು ಇಡೀ ದಿನ ಮಲಗುತ್ತಾಳೆ ಮತ್ತು ರಾತ್ರಿಯಿಡೀ ಎಚ್ಚರವಾಗಿರುತ್ತಾಳೆ.

ಇದನ್ನೂ ಓದಿ-Kartik Purnima 2021: ಕಾರ್ತಿಕ ಹುಣ್ಣಿಮೆಯ ಸ್ನಾನಕ್ಕೆ ಯಾಕಿಷ್ಟು ಮಹತ್ವ? ಇಲ್ಲಿ ತಿಳಿಯಿರಿ

ನಾಯಿಗಳೊಂದಿಗೆ ಸ್ನೇಹ
ಕ್ಯಾನಿಸ್ ತನ್ನ ಬೆಕ್ಕು ತನ್ನ ತೊಡೆಯ ಮೇಲೆ ಮಲಗಲು ಇಷ್ಟಪಡುತ್ತದೆ ಎಂದು  ಹೇಳುತ್ತಾರೆ. ಇದಲ್ಲದೇ ಮನೆಯಲ್ಲಿ ಸಾಕಿರುವ ಶ್ವಾನಗಳೊಂದಿಗೆ ಮಿಡಾಸ್ ಗೆಳೆತನ ಬೆಳೆಸಿದ್ದು, ಅವುಗಳ ಜೊತೆ ಸುತ್ತಾಡಲು ತುಂಬಾ ಇಷ್ಟ ಎಂದು ಅವರು ಹೇಳುತ್ತಾರೆ. ಮಿಡಾಸ್ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಜನರು ಸಹ ಬೆಕ್ಕುಗಳನ್ನು ತುಂಬಾ ಇಷ್ಟಪಡುತ್ತಾರೆ.

ಇದನ್ನೂ ಓದಿ-Yezdi Bike: ರಾಯಲ್ ಎನ್‌ಫೀಲ್ಡ್‌ಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ ಶಕ್ತಿಶಾಲಿ ಬೈಕ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News