'ವಿಶ್ವಾಸ'ವಿಲ್ಲದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ

    

Last Updated : May 19, 2018, 04:55 PM IST
'ವಿಶ್ವಾಸ'ವಿಲ್ಲದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ  title=

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. 

ಕೊನೆಗೂ ಕರ್ನಾಟಕ ರಾಜ್ಯ ರಾಜಕಾರಣ ನಾಟಕಕ್ಕೆ ತೆರೆ ಬಿದ್ದಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ವಿಶ್ವಾಸಮತ ಯಾಚನೆ ಮಾಡದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ದೀರ್ಘ ಭಾಷಣ ಮಾಡಿದ ಯಡಿಯೂರಪ್ಪ ತಮಗೆ ಬಹುಮತ ಇಲ್ಲದಿರುವುವಿಕೆ ಬಗ್ಗೆ  ಖಚಿತವಾದ ಹಿನ್ನಲೆಯಲ್ಲಿ  ಭಾವುಕರಾಗಿ ಸದನದಲ್ಲಿ ಭಾಷಣ ಮಾಡಿದ  ಯಡಿಯೂರಪ್ಪ  ಕೊನೆಗೂ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಕೇವಲ 55 ಗಂಟೆಗಳ ಅವಧಿಯಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿದಿದ್ದಾರೆ.

ತಮ್ಮ ಭಾಷಣದೂದ್ದಕ್ಕೂ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು  ಮುಂಬರುವ ದಿನಗಳಲ್ಲಿ  ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಪಕ್ಷವನ್ನು ಸಂಘಟನೆ ಮಾಡುವುದಾಗಿ ತಿಳಿಸಿದರು. ಅಲ್ಲದೆ ಮುಂಬರುವ  ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಿ ಪ್ರಧಾನಿ ಮೋದಿಗೆ ಕೊಡುಗೆ ನೀಡುವುದಾಗಿ ವಚನ ನೀಡಿದರು.

Trending News