Viral Video : ಹುಲಿ ಕಾಡುಹಂದಿ ಭಯಾನಕ ಕಾದಾಟದಲ್ಲಿ ಮುಂದೆ ಆಗಿದ್ದೇನು ?

ಈ ವೀಡಿಯೊದಲ್ಲಿ, ಹುಲಿ ಹಂದಿಯ ಕುತ್ತಿಗೆಯನ್ನು ಹಿಡಿದುಕೊಂಡು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತಿದೆ. ಮತ್ತೊಂದೆಡೆ ಹಂದಿ ಕೂಡಾ, ಹುಲಿಯ ದಾಳಿಯಿಂದ ಹೊರ ಬರಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. 

Written by - Ranjitha R K | Last Updated : Jan 31, 2022, 02:24 PM IST
  • ಹುಲಿ ಹಂದಿ ಕಾಳಗದ ವಿಡಿಯೋ
  • ವೈರಲ್ ಆಯಿತು ಕಾಳಗದ ವಿಡಿಯೋ
  • ಕಾಳಗದಲ್ಲಿ ಗೆದ್ದವರ್ಯಾರು, ಸೋತವರ್ಯಾರು
Viral Video : ಹುಲಿ ಕಾಡುಹಂದಿ ಭಯಾನಕ ಕಾದಾಟದಲ್ಲಿ ಮುಂದೆ ಆಗಿದ್ದೇನು ?  title=
ಹುಲಿ ಹಂದಿ ಕಾಳಗದ ವಿಡಿಯೋ (photo twitter)

ನವದೆಹಲಿ : ರಾಜಸ್ಥಾನದ ರಾಷ್ಟ್ರೀಯ ಉದ್ಯಾನವನದಲ್ಲಿ (Rajastan National Park) ಹುಲಿಯೊಂದು ಕಾಡುಹಂದಿಯನ್ನು ಅಟ್ಟಿಸಿಕೊಂಡು ಹೋಗುವ ವಿಡಿಯೋವಿದು. ಈ ವಿಡಿಯೋದಲ್ಲಿ (Video) ಹುಲಿ ತನ್ನ ಆಹಾರಕ್ಕಾಗಿ ಬೇಟೆಯಾಡಿದರೆ,  ಕಾಡು ಹಂದಿ ಹುಲಿಯ ಕಪಿ ಮುಷ್ಟಿಯಿಂದ ತಪ್ಪಿಸಿಕೊಳ್ಳಲು ಹೋರಾಡುತ್ತಿದೆ. ಈ ವಿಡಿಯೋವನ್ನು  ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆ ಹಿಡಿಯಲಾಗಿದೆ. ಸುಮಾರು 20 ಸೆಕೆಂಡುಗಳ ಅವಧಿಯ ಈ ವಿಡಿಯೋದಲ್ಲಿ(Viral video), ಹುಲಿ ಮತ್ತು ಕಾಡು ಹಂದಿಯ ನಡುವಿನ ಕಾದಾಟವನ್ನು ನೋಡಬಹುದು.  

ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ (Social media) ವೈರಲ್ ಆಗುತ್ತಿದೆ.  ಈ ವೀಡಿಯೊದಲ್ಲಿ (Video), ಹುಲಿ ಹಂದಿಯ ಕುತ್ತಿಗೆಯನ್ನು ಹಿಡಿದುಕೊಂಡು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತಿದೆ. ಮತ್ತೊಂದೆಡೆ ಹಂದಿ ಕೂಡಾ, ಹುಲಿಯ ದಾಳಿಯಿಂದ ಹೊರ ಬರಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. 

ಇದನ್ನೂ ಓದಿ : Viral Video: ತನ್ನ ಮರಿಯ ಪ್ರಾಣ ರಕ್ಷಣೆಗಾಗಿ ಹಾವಿನ ಜೊತೆ ಸೆಣೆಸಾಡಿ ಗೆದ್ದ ಇಲಿ

ಈ ಕಾಳಗದಲ್ಲಿ ಕೊನೆಗೆ ಹುಲಿ ಕಾಡು ಹಂದಿಯನ್ನು (Animal video) ಬೇಟೆಯಾಯಿತು ಎನ್ನಲಾಗಿದೆ.  ಕಾಡು ಹಂದಿಯ ಮೇಲೆ ದಾಳಿ ಮಾಡಿದ ಹುಲಿಗೆ ನೂರ್ ಎಂದು ಹೆಸರಿಡಲಾಗಿದೆ. 2012 ರಿಂದ 2016 ರವರೆಗೆ  ನೂರ್, ಹಲವಾರು ಮರಿಗಳನ್ನು ಹಾಕಿದೆ ಎನ್ನಲಾಗಿದೆ. 

 

ಭಾರತದಲ್ಲಿ ಕಾಡುಹಂದಿಗಳು ಹುಲಿಯ ಮುಖ್ಯ ಬೇಟೆಯಾಗಿದೆ. 2018 ರ ವರದಿಯ ಪ್ರಕಾರ, ಸುಮಾರು 2,967 ಹುಲಿಗಳು ಈಗ ಭಾರತದಲ್ಲಿವೆ ಎಂದು ಅಂದಾಜಿಸಲಾಗಿದೆ. ಜಾಗತಿಕವಾಗಿ, ನಾಲ್ಕನೇ ಒಂದು ಭಾಗದಷ್ಟು ಹುಲಿಗಳು ಭಾರತದಲ್ಲಿವೆ.

ಇದನ್ನೂ ಓದಿ : David Warner: ‘ಪುಷ್ಪ’ ಸಿನಿಮಾದಲ್ಲಿ ಕಾಣಿಸಿಕೊಂಡ ಆಸ್ಟ್ರೇಲಿಯ ಕ್ರಿಕೆಟಿಗ ಡೇವಿಡ್ ವಾರ್ನರ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ  ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News