ಕೆಟ್ಟ ಸಮಯ ನಡೆಯುತ್ತಿದೆ ಎಂದಾದರೆ, ಜೀವನದಲ್ಲಿ ಒಂದರ ನಂತರ ಒಂದರಂತೆ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ.
ನವದೆಹಲಿ : ಗ್ರಹಗಳು ಮತ್ತು ನಕ್ಷತ್ರಪುಂಜಗಳು ವ್ಯಕ್ತಿಯ ಜೀವನದ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತವೆ. ಗ್ರಹಗಳ ಮತ್ತು ನಕ್ಷತ್ರಪುಂಜಗಳ ಚಲನೆ ವ್ಯಕ್ತಿಯ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಕೆಟ್ಟ ಸಮಯ ನಡೆಯುತ್ತಿದೆ ಎಂದಾದರೆ, ಜೀವನದಲ್ಲಿ ಒಂದರ ನಂತರ ಒಂದರಂತೆ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಸ್ಯೆಗಳನ್ನು ತೊಡೆದುಹಾಕಲು ಕೆಲವು ತಂತ್ರಗಳು ಸಹಕಾರಿಯಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಸಿಪ್ಪೆ ಇರುವ ತೆಂಗಿನಕಾಯಿಯನ್ನು 21 ಬಾರಿ ಒಡೆದು ದೇವಸ್ಥಾನದ ಹವನಕುಂಡಕ್ಕೆ ಅರ್ಪಿಸಬೇಕು. ಮಂಗಳವಾರ ಅಥವಾ ಶನಿವಾರದಂದು ಈ ಕೆಲಸ ಮಾಡಬೇಕು. 5 ಶನಿವಾರದಂದು ಹೀಗೆ ಮಾಡುವುದರಿಂದ ಜೀವನದಲ್ಲಿ ಎದುರಾದ ಸಮಸ್ಯೆಗಳು ಬಗೆಹರಿಯುತ್ತವೆ.
ಹಿಟ್ಟಿನ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಅವುಗಳನ್ನು ನದಿ ಅಥವಾ ಕೊಳದಲ್ಲಿರುವ ಮೀನು ಮತ್ತು ಆಮೆಗಳಿಗೆ ನೀಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಎದುರಾಗುವ ತೊಂದರೆಗಳನ್ನು ತಪ್ಪಿಸಬಹುದು.
ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸಲು ಪ್ರಾರಂಭಿಸಿ. ಸಂಧ್ಯಾವಂದನೆಯೊಂದಿಗೆ ಪ್ರತಿದಿನ ಹನುಮಾನ್ ಚಾಲೀಸವನ್ನು ಓದಿ. ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಆರತಿ ಬೆಳಗಿ. ಸತತ 5 ಮಂಗಳವಾರಗಳ ಕಾಲ ಆಂಜನೇಯನಿಗೆ ಕಡಲೆಕಾಳನ್ನು ಅರ್ಪಿಸಿ.
ತಾಮ್ರದ ಪಾತ್ರೆಯಲ್ಲಿ ನೀರು ತುಂಬಿಸಿ ಅದರಲ್ಲಿ ಗಂಗಾಜಲ ಮತ್ತು ಕೆಂಪು ಚಂದನವನ್ನು ಮಿಶ್ರಣ ಮಾಡಿ. ಇದಾದ ನಂತರ ಈ ನೀರನ್ನು ತಲೆಯ ಬಳಿ ಇಟ್ಟುಕೊಂಡು ಮಲಗಬೇಕು. ಬೆಳಿಗ್ಗೆ ಸ್ನಾನದ ನಂತರ ತುಳಸಿ ಗಿಡಕ್ಕೆ ಈ ನೀರನ್ನು ಅರ್ಪಿಸಬೇಕು . ಹೀಗೆ ಕೆಲವು ದಿನಗಳ ಕಾಲ ನಿರಂತರವಾಗಿ ಮಾಡುವುದರಿಂದ ಕ್ರಮೇಣ ಸಮಸ್ಯೆ ದೂರವಾಗುತ್ತದೆ.