Use Of Akshata: ಅಕ್ಕಿಯ ಕೇವಲ ನಾಲ್ಕು ಕಾಳುಗಳು ನಿಮ್ಮ ಭಾಗ್ಯವನ್ನೇ ಬದಲಾಯಿಸಲಿವೆ

Why Should Offering Akshat In Worship - ಮನೆಯಲ್ಲಿನ ಪೂಜಾ ಸಾಮಗ್ರಿಗಳಲ್ಲಿ ಅಕ್ಷತೆ ಕೂಡ ಒಂದು. ಪೂಜೆ-ಆರತಿಗಳ ಸಂದರ್ಭಗಳಲ್ಲಿ ಇದನ್ನು ಬಳಸಲಾಗುತ್ತದೆ. ಅಕ್ಷತೆಯ ಕೇವಲ ನಾಲ್ಕು ಕಾಳುಗಳ ಬಳಕೆ ಮನೆಯಲ್ಲಿ ಸುಖ-ಶಾಂತಿ ಹಾಗೂ ಧನ-ಸಮೃದ್ಧಿ ಎಲ್ಲವನ್ನೂ ತರುತ್ತದೆ.

Written by - Nitin Tabib | Last Updated : Mar 7, 2022, 06:31 PM IST
  • ದೇವಿ-ದೇವತೆಗಳಿಗೆ ಒಡೆದ ಅಕ್ಷತೆಯನ್ನು ಅರ್ಪಿಸಬಾರದು.
  • ಮನೆಯಲ್ಲಿ ಸುಖ-ಶಾಂತಿ ಹಾಗೂ ಸಮೃದ್ಧಿಯ ಆಗಮನ
  • ಪೂಜೆ-ಆರತಿಯಲ್ಲಿ ಅಕ್ಷತೆಗೆ ವಿಶೇಷ ಮಹತ್ವವಿದೆ
Use Of Akshata: ಅಕ್ಕಿಯ ಕೇವಲ ನಾಲ್ಕು ಕಾಳುಗಳು ನಿಮ್ಮ ಭಾಗ್ಯವನ್ನೇ ಬದಲಾಯಿಸಲಿವೆ title=
Why Should Offering Akshat In Worship (File Photo)

ನವದೆಹಲಿ: Benefits Of Offering Akshata To Gods - ಸಾಮಾನ್ಯವಾಗಿ ಪ್ರತಿ ಪೂಜೆಯಲ್ಲಿ ಬಿಳಿ ಅಕ್ಕಿಯನ್ನು ಬಳಸುತ್ತಾರೆ. ಇದಲ್ಲದೆ ಕೆಂಪು ಅಥವಾ ಹಳದಿ ಬಣ್ಣದ ಅಕ್ಷತೆ (Akshata) ಕೂಡ ವಿಶೇಷ ಪೂಜಾ ಸಾಮಗ್ರಿಯ ಭಾಗವಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಅಕ್ಷತೆಯನ್ನು ಪೂಜೆಯಲ್ಲಿ ಬಳಸದಿದ್ದರೆ, ಅದನ್ನು ವಿಶೇಷ ದೋಷವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಅಕ್ಷತೆಯನ್ನು ಬಳಸುವ ಪೂಜೆಯಲ್ಲಿ, ಇತರ ಕೆಲವು ಪೂಜಾ ಸಾಮಗ್ರಿಗಳನ್ನು ಬಿಟ್ಟರೆ, ಅಕ್ಷತೆಯನ್ನು ಅರ್ಪಿಸುವ ಮೂಲಕ ದೋಷವನ್ನು ಪರಿಹರಿಸಿಕೊಳ್ಳಬಹುದು. ಶಾಸ್ತ್ರಗಳ ಪ್ರಕಾರ, ಪೂಜೆಯಲ್ಲಿ  ಅಕ್ಷತೆಯನ್ನು ಸರಿಯಾಗಿ ಬಳಸುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ಹೆಚ್ಚಾಗುತ್ತದೆ. ಇದರೊಂದಿಗೆ ಮನೆಯಲ್ಲಿ ಧನದ ಹರಿವು ಕೂಡ ಹೆಚ್ಚಾಗುತ್ತದೆ.

ಪೂಜೆಯಲ್ಲಿ ಅಕ್ಷತೆಯನ್ನು  ಬಳಸುವುದು ಹೇಗೆ? (Religious Importance Of Rice Grains)
>> ಪೂಜೆಯ ಸಮಯದಲ್ಲಿ ತುಂಡಾದ ಅಕ್ಕಿ  ಅಂದರೆ ಅಕ್ಷತೆಯನ್ನು ಬಳಸಬಾರದು. ವಾಸ್ತವದಲ್ಲಿ ತುಂಡಾದ ಅಥವಾ ಮುರಿದ ಅಕ್ಕಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ನಿಯಮಿತ ಪೂಜೆಯ (Worship) ಸಮಯದಲ್ಲಿ ಭಗವಂತನಿಗೆ ಅಕ್ಷತೆಯನ್ನು ಅರ್ಪಿಸುವುದರಿಂದ ಸಂಪತ್ತು ಮತ್ತು ಐಶ್ವರ್ಯ ಹೆಚ್ಚಾಗುತ್ತದೆ.

>> ಶಿವಲಿಂಗದ ಮೇಲೆ ಅಕ್ಷತೆಯನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಶಿವಪೂಜೆಯಲ್ಲಿ ಬೇರೆ ಯಾವುದೇ ಪೂಜಾ ಸಾಮಗ್ರಿ ಇಲ್ಲದಿದ್ದರೂ, ಅಕ್ಷತೆಯನ್ನು ಅರ್ಪಿಸುವ ಮೂಲಕ ಸಂಪೂರ್ಣ ಪೂಜಾ ಫಲ ಪಡೆಯಬಹುದು. ಅಕ್ಷತೆಯನ್ನು ಅರ್ಪಿಸುವವರಿಗೆ ಶಿವನು ಸಂಪತ್ತು ಮತ್ತು ವೈಭವವನ್ನು ದಯಪಾಲಿಸುತ್ತಾನೆ.

ಇದನ್ನೂ ಓದಿ-Palmistry: ಅಂಗೈಯಲ್ಲಿ ಈ 5 ಚಿಹ್ನೆಗಳಿರುವ ಮಹಿಳೆಯರು ತುಂಬಾ ಲಕ್ಕಿ ಆಗಿರುತ್ತಾರೆ

ಮನೆಯಲ್ಲಿ ಹಣಕಾಸಿನ ತೊಂದರೆ ಇದ್ದರೆ ಅದನ್ನು ಹೋಗಲಾಡಿಸಲು ತಾಯಿ ಅನ್ನಪೂರ್ಣೆಯನ್ನು ಮನೆಯ ಪೂಜಾ ಕೋಣೆದಲ್ಲಿ ಅಕ್ಕಿಯ ರಾಶಿಯ ಮೇಲೆ ಪ್ರತಿಷ್ಠಾಪಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿನ  ಆಹಾರ ಮತ್ತು ಹಣದ ಕೊರತೆ ದೂರಾಗುತ್ತದೆ. ಪೂಜೆಯ ಸಮಯದಲ್ಲಿ 'ಅಕ್ಷತಾಃ ಸುರಶ್ರೇಷ್ಠ ಕುಂಕಮಕ್ತ: ಸುಂದರ:, ಮಯಾ ನಿವೇದಿತಾ ಭಕ್ತ್ಯಾ ಗೃಹಾನ್ ಪರಮೇಶ್ವರ' ಎಂಬ ಮಂತ್ರವನ್ನು ಹೇಳಿ ದೇವಾನುದೇವತೆಗಳಿಗೆ ಅಕ್ಷತೆಯನ್ನು ಅರ್ಪಿಸಬೇಕು.

ಇದನ್ನೂ ಓದಿ-ಬೆಳಗ್ಗಿನ ಹೊತ್ತು ಎಷ್ಟಿರಬೇಕು ರಕ್ತದಲ್ಲಿನ ಸಕ್ಕರೆ ಪ್ರಮಾಣ? ಈ ಬಗ್ಗೆ ಅಸಡ್ಡೆ ಬೇಡವೇ ಬೇಡ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವ ಮುನ್ನ ವಿಷಯ ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-ಪಾದದ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಬೆಳ್ಳಿ ಕಾಲ್ಗೆಜ್ಜೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News