ನವದೆಹಲಿ: ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್ ಡೇ ಅನ್ನು ವರ್ಲ್ಡ್ ಹ್ಯಾಪಿನೆಸ್ ಡೇ ಎಂದೂ ಕರೆಯಲಾಗುತ್ತದೆ, ಇದನ್ನು ಪ್ರತಿ ವರ್ಷ ಮಾರ್ಚ್ 20 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.ನಮ್ಮ ಜೀವನದಲ್ಲಿ ಸಂತೋಷದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರದ ಪ್ರಗತಿಯು ಕೇವಲ ಆರ್ಥಿಕತೆ ಬೆಳವಣಿಗೆಯನ್ನು ಒಳಗೊಂಡಿರುವುದರ ಜೊತೆಗೆ ಮಾನವನ ಸಂತೋಷ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವುದರ ಬಗ್ಗೆ ಸಂದೇಶವನ್ನು ಹರಡುವ ಗುರಿಯನ್ನು ಹೊಂದಿದೆ ಎನ್ನುವ ಸಂದೇಶವನ್ನು ಈ ದಿನ ಸಾರುತ್ತದೆ.
ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣದ ಮಧ್ಯೆ ಯುಎನ್ ಸಾಮಾನ್ಯ ಸಭೆಯಿಂದ ಹೊರನಡೆದ ಭಾರತ
ಅಂತರಾಷ್ಟ್ರೀಯ ಸಂತೋಷ ದಿನದ ಮಹತ್ವ ಮತ್ತು ಇತಿಹಾಸ
ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್ ಅಧಿಕೃತ ವೆಬ್ಸೈಟ್ ಪ್ರಕಾರ, 2011 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (United Nations General Assembly) ಯು ಸಂತೋಷವನ್ನು ಮೂಲಭೂತ ಮಾನವ ಗುರಿ" ಎಂದು ಗುರುತಿಸುವ ನಿರ್ಣಯವನ್ನು ಅಂಗೀಕರಿಸಿತು ಮತ್ತು ಎಲ್ಲಾ ಜನರ ಸಂತೋಷ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ಆರ್ಥಿಕ ಬೆಳವಣಿಯು ಹೆಚ್ಚು ಅಂತರ್ಗತ, ಸಮಾನ ಮತ್ತು ಸಮತೋಲಿತ ವಿಧಾನವನ್ನು ಅನುಸರಿಸಬೇಕು ಎಂದು ಕರೆ ನೀಡಿತು.
ಅದರ ನಂತರ ಮೊದಲ ಬಾರಿಗೆ 2012 ರಲ್ಲಿ ವಿಶ್ವಸಂಸ್ಥೆಯು ಮಾರ್ಚ್ 20 ಅನ್ನು ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್ ಎಂದು ಘೋಷಿಸಿತು.ಈ ದಿನವನ್ನು ಮೊದಲ ಬಾರಿಗೆ 2013 ರಲ್ಲಿ ಆಚರಿಸಲಾಯಿತು.
ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಭಾರತದ ಈ ಪ್ರಸ್ತಾವಕ್ಕೆ ನೇಪಾಳ ಬೆಂಬಲ
ಅಂತರಾಷ್ಟ್ರೀಯ ಸಂತೋಷದ ದಿನದ ಪ್ರಯುಕ್ತ ಜಗತ್ತಿನ ವಿವಿಧ ದಾರ್ಶನಿಕರು ನೀಡಿರುವ ಮಹತ್ವದ ಹೇಳಿಕೆಗಳು ಇಲ್ಲಿವೆ.
"ನೀವು ಕೋಪಗೊಂಡ ಪ್ರತಿ ನಿಮಿಷಕ್ಕೂ ನೀವು ಅರವತ್ತು ಸೆಕೆಂಡುಗಳ ಸಂತೋಷವನ್ನು ಕಳೆದುಕೊಳ್ಳುತ್ತೀರಿ."
- ರಾಲ್ಫ್ ವಾಲ್ಡೋ ಎಮರ್ಸನ್
"ಜನರು ಸಾಮಾನ್ಯವಾಗಿ ತಮ್ಮ ಮನಸ್ಸನ್ನು ಎಷ್ಟು ಸಂತೋಷಪಡಿಸುತ್ತಾರೋ ಅಷ್ಟು ಸಂತೋಷವಾಗಿರುತ್ತಾರೆ."
- ಅಬ್ರಹಾಂ ಲಿಂಕನ್
"ನೀವು ಏನು ಯೋಚಿಸುತ್ತೀರಿ, ನೀವು ಏನು ಹೇಳುತ್ತೀರಿ ಮತ್ತು ನೀವು ಏನು ಮಾಡುತ್ತೀರಿ ಎಂಬುದು ಸಾಮರಸ್ಯದಿಂದ ಇದ್ದಾಗ ನಿಮ್ಮಲ್ಲಿ ಸಂತೋಷವಿರುತ್ತದೆ."
- ಮಹಾತ್ಮ ಗಾಂಧಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.