6 ಬೋಗಿಗಳ ಮೆಟ್ರೋ ರೈಲಿಗೆ ಇಂದು ಹಸಿರು ನಿಶಾನೆ

ಬೈಯ್ಯಪ್ಪನಹಳ್ಳಿ ನಿಲ್ದಾಣದಲ್ಲಿ ಸಂಜೆ 5.30ಕ್ಕೆ ಹೊಸ ರೈಲಿಗೆ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಚಾಲನೆ ನೀಡಲಿದ್ದಾರೆ.

Last Updated : Jun 22, 2018, 08:52 AM IST
6 ಬೋಗಿಗಳ ಮೆಟ್ರೋ ರೈಲಿಗೆ ಇಂದು ಹಸಿರು ನಿಶಾನೆ title=

ಬೆಂಗಳೂರು: ನಮ್ಮ ಮೆಟ್ರೋ 6 ಬೋಗಿಗಳ ಮೆಟ್ರೋ ರೈಲಿನ ಸೇವೆ ಇಂದಿನಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಬೈಯ್ಯಪ್ಪನಹಳ್ಳಿ ನಿಲ್ದಾಣದಲ್ಲಿ ಸಂಜೆ 5.30ಕ್ಕೆ ಹೊಸ ರೈಲಿಗೆ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಚಾಲನೆ ನೀಡಲಿದ್ದಾರೆ. ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅದೇ ರೈಲಿನಲ್ಲಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದವರೆಗೆ ಸಂಚರಿಸಲಿದ್ದಾರೆ.

ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಹೊಸ ರೈಲು ಓಡಾಡಲಿದೆ, ಈ ರೈಲಿನಲ್ಲಿ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಮೆಟ್ರೊ ರೈಲು ಪ್ರಯಾಣಿಕರ ಪೈಕಿ ಶೇ. 40ರಷ್ಟು ಮಹಿಳೆಯರಿರುವುದನ್ನು ಸಮೀಕ್ಷೆಯಿಂದ ಖಚಿತಪಡಿಸಿಕೊಂಡಿರುವ ನಿಗಮ, ಈ ಕಾರಣಕ್ಕೆ ಆರು ಬೋಗಿಯ ರೈಲಿನ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಸಲಿಟ್ಟಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ನಿಂದ (ಬಿಇಎಂಎಲ್‌) ಖರೀದಿಸಿದ ಮೂರು ಹೊಸ ಬೋಗಿಗಳನ್ನು, ಈಗಾಗಲೇ ಕಾರ್ಯಾಚರಿಸುತ್ತಿರುವ ಮೂರು ಬೋಗಿಗಳ ರೈಲಿಗೆ ಜೋಡಿಸಲಾಗಿದೆ. ಪ್ರತಿದಿನ ಪೀಕ್ ಸಮಯದಲ್ಲಿ 12 ಟ್ರಿಪ್ ಗಳಲ್ಲಿ ಈ 6 ಬೋಗಿಗಳ ರೈಲನ್ನು ಬಳಸಿಕೊಳ್ಳಲು ಮೆಟ್ರೊ ನಿಗಮ ನಿರ್ಧರಿಸಿದೆ. 

ಸದ್ಯ 3 ಬೋಗಿಗಳ ರೈಲಲ್ಲಿ 900 ಜನ ಸಂಚರಿಸುತ್ತಿದ್ದು, 6 ಬೋಗಿಗಳ ರೈಲಿನಲ್ಲಿ 1800 ಮಂದಿ ಸಂಚರಿಸಬಹುದು ಎಂದು ನಿರೀಕ್ಷಿಸಲಾಗಿದೆ. 

Trending News