ಇಂಡೋನೇಷ್ಯಾದಲ್ಲಿ ವ್ಯಕ್ತಿಯೊಬ್ಬ ವಿಚಿತ್ರ ರೀತಿಯಲ್ಲಿ ಮದುವೆಯಾಗಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಬೆಂಜೆಂಗ್ ಜಿಲ್ಲೆಯ ಗ್ರೆಸಿಕ್‌ನಲ್ಲಿರುವ ಕ್ಲಾಂಪೋಕ್ ಗ್ರಾಮದಲ್ಲಿ 44 ವರ್ಷದ ಸೈಫುಲ್ ಆರಿಫ್ ಎಂಬುವವರು, ಇದೇ ತಿಂಗಳ ಜೂನ್ 5 ರಂದು ರಹಾಯು ಬಿನ್ ಬೆಜೊ ಎಂಬ ಹೆಣ್ಣು ಮೇಕೆಯ ಜೊತೆ ಮದುವೆಯಾಗಿದ್ದಾನೆ.
ಇದನ್ನೂ ಓದಿ: ಕಾಳಿ ಮಾತೆಯ ಈ ದೇವಾಲಯದಲ್ಲಿ ನೂಡಲ್ಸ್‌ನ್ನು ಪ್ರಸಾದವಾಗಿ ನೀಡ್ತಾರೆ!
ಈ ಮೇಕೆಯನ್ನು ವರಿಸಲು ಈತ 22,000 ರೂಪಾಯಿ ಡೌರಿಯನ್ನು ಪಡೆದಿದ್ದಾನೆ. ವರನ ಡ್ರೆಸ್‌ನಲ್ಲಿ ಸೈಫುಲ್ ಆರಿಫ್ ಇದ್ದರೆ, ಮೇಕೆಯನ್ನು ವಧುವಿನಂತೆಯೇ ಸಿಂಗರಿಸಲಾಗಿದೆ. ಮೇಕೆ ಶಾಲು ಹೊದ್ದುಕೊಂಡಿದ್ದನ್ನು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣಬಹುದು. ಸಾಂಪ್ರದಾಯಿಕ ಜಾವಾನೀಸ್ ವೇಷಭೂಷಣಗಳನ್ನು ಧರಿಸಿದ ಸ್ಥಳೀಯರು ಸಹ ಈ ವಿಚಿತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ಭಾರೀ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೈಫುಲ್ ಆರೀಫ್ ಇದನ್ನು ಕೇವಲ ವೈರಲ್ ಆಗುವ ಉದ್ದೇಶದಿಂದ ಮಾತ್ರ ನಿರ್ಮಿಸಲಾಗಿದೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಗಾಂಜಾ ಬೆಳೆಯುವುದನ್ನು ಕಾನೂನುಬದ್ಧಗೊಳಿಸಿದ ಏಷ್ಯಾದ ಮೊದಲ ರಾಷ್ಟ್ರ!
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವ ಉದ್ದೇಶದಿಂದ ಈ ವಿಡಿಯೋವನ್ನು ನಿರ್ಮಿಸಲಾಗಿದೆಯೇ ಹೊರತು, ಯಾರನ್ನೂ ಅಪರಾಧಿ ಮಾಡುವ ಉದ್ದೇಶವನ್ನು ಹೊಂದಿಲ್ಲ ಮತ್ತು ಪ್ರೇಕ್ಷಕರ ಮನರಂಜನೆಗಾಗಿ ರಚಿಸಲಾಗಿದೆ ಎಂದು ಸೈಫುಲ್ ಹೇಳಿಕೆ ನೀಡಿದ್ದಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.