68 ವರ್ಷದಲ್ಲಿ 8ನೇ ಸುಪ್ರಿಂಕೋರ್ಟ್ ಮಹಿಳಾ ನ್ಯಾಯಾಧೀಶರಾಗಿ ಇಂದಿರಾ ಬ್ಯಾನರ್ಜಿ ನೇಮಕ

    

Last Updated : Aug 4, 2018, 11:31 AM IST
68 ವರ್ಷದಲ್ಲಿ 8ನೇ ಸುಪ್ರಿಂಕೋರ್ಟ್ ಮಹಿಳಾ ನ್ಯಾಯಾಧೀಶರಾಗಿ ಇಂದಿರಾ ಬ್ಯಾನರ್ಜಿ ನೇಮಕ title=
Photo courtesy: KIIT University

ನವದೆಹಲಿ: ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿಯವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಆಯ್ಕೆ ಮಾಡುತ್ತಿದ್ದಂತೆ ಈಗ ಮಹಿಳಾ ನ್ಯಾಯಾಧೀಶರ ಸಂಖ್ಯೆ ಅಧಿಕಗೊಂಡಿದೆ. 1950ರಿಂದ ಸುಪ್ರಿಂ ಕೋರ್ಟ್ ಏಕಕಾಲಕ್ಕೆ ಮೂರು ಮಹಿಳಾ ನ್ಯಾಯಾಧೀಶರನ್ನು ಹೊಂದಿರಲಿಲ್ಲ.ಈಗ ಒಟ್ಟು ತನ್ನ 68 ವರ್ಷಗಳ ಇತಿಹಾಸದಲ್ಲಿ 8 ಮಹಿಳಾ ನ್ಯಾಯಾಧೀಶೆಯರು ಆಯ್ಕೆಯಾಗಿದ್ದಾರೆ.

ನ್ಯಾಯಮೂರ್ತಿ ಬ್ಯಾನರ್ಜಿ (60) ಯವರು ಫಾತಿಮಾ ಬೀವಿ, ಸುಜಾತಾ ವಿ. ಮನೋಹರ್, ರುಮಾ ಪಾಲ್, ಜ್ಞಾನ್ ಸುಧಾ ಮಿಶ್ರಾ, ರಂಜನಾ ಪ್ರಕಾಶ್ ದೇಸಾಯಿ, ಆರ್ ಬಾನುಮತಿ ಮತ್ತು ಇಂದು ಮಲ್ಹೋತ್ರಾ ನಂತರ  ಸುಪ್ರಿಂ ಕೋರ್ಟ್ ಏರಿದ ಎಂಟನೆ ಮಹಿಳಾ ನ್ಯಾಯಾಧೀಶರಾಗಿದ್ದಾರೆ.

1957 ರ ಸೆಪ್ಟೆಂಬರ್ 24 ರಂದು ಜನಿಸಿದ ನ್ಯಾಯಮೂರ್ತಿ ಬ್ಯಾನರ್ಜಿ ಅವರು ಕೋಲ್ಕತ್ತಾದ ಲೊರೆಟೊ ಹೌಸ್ನಲ್ಲಿ ವಿದ್ಯಾಭ್ಯಾಸ ಮಾಡಿದರು. ಕೋಲ್ಕತಾದ ಪ್ರೆಸಿಡೆನ್ಸಿ ಕಾಲೇಜ್ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಲಾನಲ್ಲಿ ತನ್ನ ಉನ್ನತ ಶಿಕ್ಷಣವನ್ನು ಪಡೆದರು. 

 1985 ರಲ್ಲಿ  ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಕಲ್ಕತ್ತಾ ಹೈಕೋರ್ಟ್ನಲ್ಲಿ ಅಭ್ಯಾಸ ಮಾಡಿದರು. ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ಏಪ್ರಿಲ್ 5, 2017 ರಂದು ಬ್ಯಾನರ್ಜಿ ಅವರು ಅಧಿಕಾರ ವಹಿಸಿಕೊಂಡರು. 

ನ್ಯಾಯಮೂರ್ತಿ ಕಾಂತಾ ಕುಮಾರಿ ಭಟ್ನಾಗರದ ನಂತರ ಮದ್ರಾಸ್ ಹೈಕೋರ್ಟ್ಗೆ ನೇತೃತ್ವ ವಹಿಸಿದ ಎರಡನೇ ಮಹಿಳೆಯಾಗಿದ್ದಾರೆ. ಇದೇ ಜುಲೈ 16ರಂದು ಕೊಲೆಜಿಯಂ ಅವರ ಹೆಸರನ್ನು ಶಿಫಾರಸ್ಸು ಮಾಡಿತ್ತು ಇದಾದ ಹದಿನೈದು ದಿನಗಳೊಳಗೆ ಕೇಂದ್ರ ಸರ್ಕಾರವು ಅವರ ಹೆಸರನ್ನುಅಂಗೀಕರಿಸಲ್ಪಟ್ಟಿದೆ.

Trending News