ಕೇರಳ: ಇಲ್ಲೊಬ್ಬ ವಿದ್ಯಾರ್ಥಿ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಕ್ಕೆ ತನ್ನನ್ನು ತಾನು ಅಭಿನಂದಿಸಿಕೊಂಡು ಮನೆಯ ಮುಂಭಾಗದಲ್ಲಿ ಫ್ಲೆಕ್ಸ್ ಬೋರ್ಡ್ ಹಾಕಿಕೊಂಡು ರಾಜ್ಯದ ಗಮನ ಸೆಳೆದಿದ್ದಾರೆ. ಈ ಕೆಲಸ ಶಿಕ್ಷಣ ಸಚಿವರನ್ನು ಸಹ ಮೆಚ್ಚಿಸಿದೆ.
ಇದನ್ನೂ ಓದಿ: ಆ್ಯಂಕರ್ ಅನುಶ್ರೀಗೆ ಸ್ಪೆಷಲ್ ಗಿಫ್ಟ್ ಕೊಟ್ಟ ನಟ ಶಿವರಾಜ್ ಕುಮಾರ್!
ಮೊದಲ ಬಾರಿಗೆಯೇ ಬೋರ್ಡ್ ಪರೀಕ್ಷೆಯನ್ನು ಪೂರ್ಣಗೊಳಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಎಂದು ಪರಿಗಣಿಸಲಾಗಿದೆ. ಪತ್ತನಂತಿಟ್ಟದ ವಿದ್ಯಾರ್ಥಿ ಜಿಷ್ಣು ಅವರ ಸಾಧನೆಯನ್ನು ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರು ಗಮನಿಸುವಂತೆ ಪೋಸ್ಟರ್ ಹಾಕಲಾಗಿದೆ.
"ಇತಿಹಾಸ ಕೆಲವರಿಗೆ ದಾರಿ ಮಾಡಿಕೊಡುತ್ತದೆ. 2022ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಕ್ಕಾಗಿ ನಾನು ನನ್ನನ್ನು ಅಭಿನಂದಿಸುತ್ತೇನೆ. ಕಥೆ ಈಗ ಪ್ರಾರಂಭವಾಗುತ್ತಿದೆ. ಕುಂಜಕ್ಕು ಆವೃತ್ತಿ 3.0" ಎಂದು ಬೋರ್ಡ್‌ನಲ್ಲಿ ಬರೆದುಕೊಂಡಿದ್ದಾನೆ. ಬೋರ್ಡ್‌ನಲ್ಲಿ ಸಂದೇಶದೊಂದಿಗೆ, ಜಿಷ್ಣು ತನ್ನ ಫೋಟೋವನ್ನು ಸಹ ಹಾಕಿದ್ದಾನೆ. ಅದರಲ್ಲಿ ಆತ ಸನ್‌ಗ್ಲಾಸ್ ಧರಿಸಿರುವುದು ಕಂಡುಬರುತ್ತದೆ. ವಿದ್ಯಾರ್ಥಿಯ ಫ್ಲೆಕ್ಸ್ ಬೋರ್ಡ್ ತ್ವರಿತವಾಗಿ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರ ಗಮನ ಸೆಳೆದಿದೆ.
ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, "ಇತಿಹಾಸ ಕೆಲವರಿಗೆ ದಾರಿ ಮಾಡಿಕೊಡುತ್ತದೆ ಎಂದು ಕುಂಜಕ್ಕು ಅವರೇ ಫ್ಲೆಕ್ಸ್‌ನಲ್ಲಿ ಹೇಳಿದ್ದಾರೆ. ಅದೇ ರೀತಿ ನಡೆಯಲಿ ಎಂದು ನಾನು ಬಯಸುತ್ತೇನೆ. ಕುಂಜಕ್ಕು ಜೀವನದ ಪರೀಕ್ಷೆಯಲ್ಲಿ ಸಹ ಉತ್ತಮ ಯಶಸ್ಸನ್ನು ಪಡೆಯಲಿ" ಎಂದು ಹೇಳಿದ್ದಾರೆ.
ಇದನ್ನೂ ಓದಿ: "ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಸ್ಥಾನ ಪಡೆಯಲ್ಲ" ಸ್ಟಾರ್ ಆಟಗಾರ ಹೀಗೆ ಹೇಳಿದ್ದೇಕೆ?
ಇನ್ನು ಕೇರಳದ ಮಾಧ್ಯಮದ ಜತೆ ಮಾತನಾಡಿದ ಜಿಷ್ಣು, "ಫ್ಲೆಕ್ಸ್ ಬೋರ್ಡ್ ಹಾಕಲು ಸ್ನೇಹಿತರು ಸಹಕರಿಸಿದ್ದಾರೆ" ಎಂದಿದ್ದಾನೆ. ಇನ್ನು ಹನ್ನೊಂದನೇ ತರಗತಿ ಉತ್ತೀರ್ಣರಾದ ನಂತರ ಸಹ ಇದೇ ರೀತಿ ಫ್ಲೆಕ್ಸ್ ಹಾಕಲು ಚಿಂತಿಸಿದ್ದಾರಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.