Sabarimala: ಸೋರುತಿಹುದು ಶಬರಿಮಲೆ ಗರ್ಭಗುಡಿಯ ಚಿನ್ನದ ಛಾವಣಿ

Sabarimala: ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಚಿನ್ನದ ಲೇಪಿತ ಛಾವಣಿ ಸೋರುತ್ತಿರುವುದು ಕಂಡು ಬಂದಿದ್ದು, ಕೂಡಲೇ ದುರಸ್ತಿ ಕಾಮಗಾರಿ ನಡೆಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

Written by - Chetana Devarmani | Last Updated : Jul 26, 2022, 05:40 PM IST
  • ಸೋರುತಿಹುದು ಶಬರಿಮಲೆ ಗರ್ಭಗುಡಿಯ ಚಿನ್ನದ ಛಾವಣಿ
  • ಗರ್ಭಗುಡಿಯ ಮುಂಭಾಗದ ಎಡ ಮೂಲೆಯಲ್ಲಿ ಸೋರಿಕೆ
  • ಕೂಡಲೇ ದುರಸ್ತಿ ಕಾಮಗಾರಿ ನಡೆಸಲು ಸಿದ್ಧತೆ
Sabarimala: ಸೋರುತಿಹುದು ಶಬರಿಮಲೆ ಗರ್ಭಗುಡಿಯ ಚಿನ್ನದ ಛಾವಣಿ   title=
ಶಬರಿಮಲೆ ಗರ್ಭಗುಡಿ

Sabarimala: ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಚಿನ್ನದ ಲೇಪಿತ ಛಾವಣಿ ಸೋರುತ್ತಿರುವುದು ಕಂಡು ಬಂದಿದ್ದು, ಕೂಡಲೇ ದುರಸ್ತಿ ಕಾಮಗಾರಿ ನಡೆಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಪ್ರವೇಶ ದ್ವಾರದ ಎಡಭಾಗದಲ್ಲಿರುವ ಗರ್ಭಗುಡಿಯ ಹೊರ ಗೋಡೆಯ ಮೂಲಕ ನೀರು ಸೋರುತ್ತಿರುವುದು ಕಂಡು ಬಂದಿದೆ. ಜುಲೈ 16 ರಂದು ದೇವಸ್ಥಾನವು ಮಾಸಿಕ ಪೂಜೆಗಾಗಿ ತೆರೆದಾಗ ದ್ವಾರಪಾಲಕನ ವಿಗ್ರಹದ ಮೇಲೆ ನೀರು ಜಿನುಗುತ್ತಿರುವುದು ಕಂಡುಬಂದಿದೆ. ಆಗಸ್ಟ್ 3 ರಂದು ದೇವಾಲಯದ ವಾಸ್ತುಶಾಸ್ತ್ರದ ತಜ್ಞರ ತಂಡವು ಮೇಲ್ಛಾವಣಿಯನ್ನು ಪರಿಶೀಲಿಸುತ್ತದೆ ಮತ್ತು ಅವರ ಸಲಹೆಯ ಮೇರೆಗೆ ದುರಸ್ತಿ ಕಾರ್ಯಗಳನ್ನು ನಡೆಸಲಾಗುವುದು ಎಂದು ಮಾಹಿತಿ ದೊರಕಿದೆ.

ಇದನ್ನೂ ಓದಿ: MP Tejasvi Surya : 'ಆರ್ಟಿಕಲ್ 370 ಭಾರತದ ಏಕೀಕರಣದಲ್ಲಿ ಸಾಂಸ್ಕೃತಿಕ, ಮಾನಸಿಕ ತಡೆಗೋಡೆ'

ಗರ್ಭಗುಡಿಯ ಮುಂಭಾಗದ ಎಡ ಮೂಲೆಯಲ್ಲಿ ಸೋರಿಕೆಯಾಗಿರುವುದು ಪತ್ತೆಯಾಗಿದೆ. ಕೂಡಲೇ ದುರಸ್ತಿ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದ್ದೇನೆ. ದುರಸ್ತಿ ಕಾರ್ಯದ ವೆಚ್ಚವನ್ನು ಟಿಡಿಬಿ ಭರಿಸಲಿದ್ದು, ಕೆಲವು ಭಕ್ತರು ಚಿನ್ನವನ್ನು ದುರಸ್ತಿಗೆ ನೀಡಲು ಮುಂದೆ ಬಂದರೆ ನಾವು ಸ್ವೀಕರಿಸುತ್ತೇವೆ ಎಂದು ಟಿಡಿಬಿ ಅಧ್ಯಕ್ಷ ಕೆ.ಅನಂತಗೋಪನ್ ಹೇಳಿದರು.

ಚಿನ್ನ ಲೇಪಿತ ಮೇಲ್ಛಾವಣಿಯ ಒಂದು ಭಾಗವನ್ನು ಆಗಸ್ಟ್ 3 ರಂದು ತೆರೆಯಲಾಗುವುದು ಮತ್ತು ಸೋರಿಕೆಯನ್ನು ಪರಿಶೀಲಿಸಿ ದುರಸ್ತಿ ಕಾಮಗಾರಿಗೆ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು. ತಂತ್ರಿ, ಟಿಡಿಬಿ ಮತ್ತು ವಿಜಿಲೆನ್ಸ್ ವಿಭಾಗದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮೇಲ್ಛಾವಣಿಯನ್ನು ತೆರೆಯಲಾಗುವುದು. ದೇವಸ್ಥಾನವನ್ನು ಮುಚ್ಚಿದಾಗ ಮಾತ್ರ ನಾವು ದುರಸ್ತಿ ಕಾರ್ಯಗಳನ್ನು ನಡೆಸಬಹುದು. ಆದರೆ, 45 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ. ಕಾಮಗಾರಿ ನಡೆಸಲು ತಂತ್ರಿಗಳಿಂದ ಅನುಮತಿ ಪಡೆದಿದ್ದೇವೆ ಎಂದು ಅನಂತಗೋಪನ್ ತಿಳಿಸಿದರು.

ಇದನ್ನೂ ಓದಿ: Viral Video : ಆಗಸ ತುಂಬಾ ಬಾವಲಿಗಳ ದಂಡು ! ಎಲ್ಲಿದ್ದವೋ ಇಲ್ಲಿ ತನಕ

ಉದ್ಯಮಿ ವಿಜಯ್ ಮಲ್ಯ ಅವರು 1998 ರಲ್ಲಿ ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಮೇಲ್ಛಾವಣಿಯ ಚಿನ್ನದ ಲೇಪನವನ್ನು ಪ್ರಾಯೋಜಿಸಿದ್ದರು. ಅವರು ಇದಕ್ಕಾಗಿ 31 ಕೆಜಿ ಚಿನ್ನ ಮತ್ತು 1,900 ಕೆಜಿ ತಾಮ್ರವನ್ನು ದಾನ ನೀಡಿದ್ದರು. ಇದಕ್ಕಾಗಿ 18 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News