ಇಂದಿನಿಂದ ಬದಲಾಗಿದೆ ಈ ನಿಯಮಗಳು, ಜನಸಾಮಾನ್ಯರ ಮೇಲೆ ಆಗಲಿದೆ ಭಾರೀ ಪರಿಣಾಮ

1 August 2022 New Rule: ಈ ತಿಂಗಳ ಆರಂಭದೊಂದಿಗೆ ಹಲವು ನಿಯಮಗಳು ಕೂಡಾ ಬದಲಾಗಿವೆ. ಈ ನಿಯಮಗಳಲ್ಲಿನ ಬದಲಾವಣೆಗಳು ಜನರ ಜೇಬಿನ ಮೇಲೂ ಪರಿಣಾಮ ಬೀರುತ್ತವೆ.  

Written by - Ranjitha R K | Last Updated : Aug 1, 2022, 08:35 AM IST
  • ಇಂದಿನಿಂದ ಬದಲಾಗಿದೆ ಕೆಲವು ನಿಯಮಗಳು
  • ತಿಳಿದುಕೊಳ್ಳದಿದ್ದಲ್ಲಿ ಜೇಬಿಗೆ ಬೀಳುವುದು ಕತ್ತರಿ
  • ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಆಗಿದೆ ಕಡಿತ
ಇಂದಿನಿಂದ ಬದಲಾಗಿದೆ ಈ ನಿಯಮಗಳು, ಜನಸಾಮಾನ್ಯರ ಮೇಲೆ ಆಗಲಿದೆ ಭಾರೀ ಪರಿಣಾಮ  title=
1si august rules change (file photo)

1 August 2022 New Rule: ಆಗಸ್ಟ್ ತಿಂಗಳು ಪ್ರಾರಂಭವಾಗಿದೆ.  ಈ ತಿಂಗಳ ಆರಂಭದೊಂದಿಗೆ ಹಲವು ನಿಯಮಗಳು ಕೂಡಾ ಬದಲಾಗಿವೆ. ಈ ನಿಯಮಗಳಲ್ಲಿನ ಬದಲಾವಣೆಗಳು ಜನರ ಜೇಬಿನ ಮೇಲೂ ಪರಿಣಾಮ ಬೀರುತ್ತವೆ.  ಈ ಹಿನ್ನೆಲೆಯಲ್ಲಿ  ಬದಲಾಗಿರುವ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಆಗಸ್ಟ್ 1 ರಿಂದ ಆಗಲಿರುವ ಬದಲಾವಣೆಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸುವ ಮೂಲಕ ಜನರಿಗೆ ಪರಿಹಾರ ನೀಡಲಾಗಿದೆ.

1.  ವಾಣಿಜ್ಯ LPG ಸಿಲಿಂಡರ್‌ನ ಬೆಲೆಯನ್ನು ಕಡಿತಗೊಳಿಸಲಾಗಿದೆ. ಆಗಸ್ಟ್ 1 ರಿಂದ ಅಂದರೆ ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು  36 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ಇದರೊಂದಿಗೆ ಈಗ ವಾಣಿಜ್ಯ ಸಿಲಿಂಡರ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

ಇದನ್ನೂ ಓದಿ : Gold Price Today : ಚಿನ್ನ ಬೆಳ್ಳಿ ಖರೀದಿಗೂ ಮುನ್ನ ತಿಳಿದುಕೊಳ್ಳಿ ಇಂದಿನ ದರ

2.  ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನಗಳ ಪ್ರಕಾರ, ಬ್ಯಾಂಕ್ ಆಫ್ ಬರೋಡಾ ಆಗಸ್ಟ್ 1 ರಿಂದ ರೂ 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಚೆಕ್‌ಗಳ ವಿತರಣೆಗಾಗಿ Positive Pay System ಅನ್ನು ಜಾರಿಗೊಳಿಸುತ್ತದೆ. ಚೆಕ್ ಕ್ಲಿಯರ್ ಮಾಡುವ ಮೊದಲು ದೃಢೀಕರಣಕ್ಕಾಗಿ ಬ್ಯಾಂಕ್ ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಬ್ಯಾಂಕ್ ವಂಚನೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

3. ಪಿಎಂ ಕಿಸಾನ್ ಯೋಜನೆಯ ಮೂಲಕ ಆರ್ಥಿಕ ನೆರವು ಪಡೆಯಬೇಕಾದರೆ ಕೆವೈಸಿ ಮಾಡಿಸಿಕೊಳ್ಳುವುದು ಅವಶ್ಯಕ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ  ರೈತರ ಅನುಕೂಲಕ್ಕಾಗಿ ನಡೆಸಲಾಗುತ್ತಿದೆ. ಅದರ KYC ಮಾಡಿಸಿಕೊಳ್ಳುವ ಗಡುವನ್ನು ಮೇ 31 ರಿಂದ ಜುಲೈ 31 ರವರೆಗೆ ವಿಸ್ತರಿಸಲಾಗಿತ್ತು. ಆದರೆ ನಿನ್ನೆಗೆ ಅದು ಕೊನೆಗೊಂಡಿದೆ. 

4. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ನೋಂದಣಿ ಮಾಡುವ ಗಡುವು ಕೂಡಾ  ಜುಲೈ 31 ಅಂದರೆ ನಿನ್ನೆಗೆ ಕೊನೆಗೊಂಡಿತು. ನೋಂದಣಿಯನ್ನು ತಪ್ಪಿಸಿಕೊಂಡವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ : Arecanut Price: ಇಂದಿನ ಅಡಿಕೆ ಧಾರಣೆ, ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ?

6. ITR ರಿಟರ್ನ್ ಫೈಲಿಂಗ್‌ಗೆ ಕೊನೆಯ ದಿನಾಂಕ 31 ಜುಲೈ ಆಗಿತ್ತು. 2021-22ನೇ ಹಣಕಾಸು ವರ್ಷಕ್ಕೆ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ 2022 ಆಗಿದೆ.  ಇಂದಿನಿಂದ ಐಟಿಆರ್ ಸಲ್ಲಿಸಬೇಕಾದರೆ ದಂಡ ವಿಧಿಸಲಾಗುತ್ತದೆ. ಐಟಿಆರ್ ಸಲ್ಲಿಸುವ ದಿನಾಂಕವನ್ನು ಸರ್ಕಾರವು ವಿಸ್ತರಿಸದಿದ್ದರೆ, ತೆರಿಗೆಗೆ ಒಳಪಡುವ ಆದಾಯ ಹೊಂದಿರುವವರು ಐಟಿಆರ್ ಸಲ್ಲಿಸುವುದರೊಂದಿಗೆ ದಂಡವನ್ನು ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News