Cold Water ಕುಡಿಯುವುದರಿಂದ ಈ ಆರೋಗ್ಯ ಸಮಸ್ಯೆ ಫಿಕ್ಸ್‌!!

Cold Water disadvantages : ನಾವೆಲ್ಲರೂ ಫ್ರಿಡ್ಜ್‌ನಲ್ಲಿಟ್ಟ ತಣ್ಣೀರು ಕುಡಿಯಲು ಇಷ್ಟಪಡುತ್ತೇವೆ. ಒಂದು ಗುಟುಕು ತಣ್ಣೀರು ನಮ್ಮ ಗಂಟಲನ್ನು ತಂಪಾಗಿಸುತ್ತದೆ. ಇದು ಆ ಮಾತ್ರಕ್ಕೆ ನಮಗೆ ಹಿತವೆನಿಸಬಹುದು. ಆದರೆ ತಣ್ಣೀರಿನ ಕೆಲವು ಅನಾನುಕೂಲಗಳು ಸಹ ಇವೆ. 

Written by - Chetana Devarmani | Last Updated : Aug 3, 2022, 04:35 PM IST
  • ನಾವೆಲ್ಲರೂ ಫ್ರಿಡ್ಜ್‌ನಲ್ಲಿಟ್ಟ ತಣ್ಣೀರು ಕುಡಿಯಲು ಇಷ್ಟಪಡುತ್ತೇವೆ
  • ಒಂದು ಗುಟುಕು ತಣ್ಣೀರು ನಮ್ಮ ಗಂಟಲನ್ನು ತಂಪಾಗಿಸುತ್ತದೆ
  • ತಣ್ಣೀರು ಕುಡಿಯುವುದರಿಂದ ಮೈಗ್ರೇನ್ ರೋಗಲಕ್ಷಣಗಳು ಉಲ್ಬಣಗೊಳ್ಳಬಹುದು
Cold Water ಕುಡಿಯುವುದರಿಂದ ಈ ಆರೋಗ್ಯ ಸಮಸ್ಯೆ ಫಿಕ್ಸ್‌!!  title=
ತಣ್ಣೀರು

ನಾವೆಲ್ಲರೂ ಫ್ರಿಡ್ಜ್‌ನಲ್ಲಿಟ್ಟ ತಣ್ಣೀರು ಕುಡಿಯಲು ಇಷ್ಟಪಡುತ್ತೇವೆ. ಒಂದು ಗುಟುಕು ತಣ್ಣೀರು ನಮ್ಮ ಗಂಟಲನ್ನು ತಂಪಾಗಿಸುತ್ತದೆ. ಇದು ಆ ಮಾತ್ರಕ್ಕೆ ನಮಗೆ ಹಿತವೆನಿಸಬಹುದು. ಆದರೆ ತಣ್ಣೀರಿನ ಕೆಲವು ಅನಾನುಕೂಲಗಳು ಸಹ ಇವೆ. ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಇದನ್ನೂ ಓದಿ: Weight Loss: ಪನೀರ್ ಮತ್ತು ಮೊಟ್ಟೆ ಒಟ್ಟಿಗೆ ಸೇವಿಸಿದ್ರೆ ತೂಕ ಇಳಿಕೆಯಾಗುತ್ತಾ..?

ತಣ್ಣೀರು ಕುಡಿಯುವುದರಿಂದ ಮೈಗ್ರೇನ್ ರೋಗಲಕ್ಷಣಗಳು ಉಲ್ಬಣಗೊಳ್ಳಬಹುದು. ಮೈಗ್ರೇನ್ ಬರದ ಜನರು ಸಹ ಈ ಸಮಸ್ಯೆಯನ್ನು ಅನುಭವಿಸಬಹುದು. ಅಲ್ಲದೇ ತಣ್ಣೀರು ಹೊಟ್ಟೆ ನೋವು ಮತ್ತು ಅತಿಸಾರಕ್ಕೂ ಕಾರಣವಾಗಬಹುದು.

ಕರುಳಿನ ಗೋಡೆಯ ಒಳಪದರವು ದಟ್ಟವಾದ ಎಣ್ಣೆಯುಕ್ತ ಪದರದಿಂದ ಕೂಡಿರುತ್ತದೆ. ಹೀಗಿರುವಾಗ ಹೆಚ್ಚು ತಣ್ಣನೆಯ ನೀರನ್ನು ಕುಡಿಯುವುದರಿಂದ ಹೊಟ್ಟೆ ಬಾಧೆ ಉಂಟಾಗುತ್ತದೆ. ಇದು ಮುಂದೆ ಅಜೀರ್ಣಕ್ಕೆ ಕಾರಣವಾಗಬಹುದು.

ತಣ್ಣೀರು ಮೆದುಳಿಗೆ ಆಮ್ಲಜನಕದ ಹರಿವನ್ನು ಕಡಿಮೆ ಮಾಡುತ್ತದೆ. ಇದು ತಲೆತಿರುಗುವಿಕೆ ಮತ್ತು ಮೆದುಳಿನ ಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ. ತಣ್ಣೀರು ಕುಡಿಯುವುದರಿಂದ ಬಾಯಾರಿಕೆ ಹೆಚ್ಚಾಗುತ್ತದೆ, ಆದ್ದರಿಂದ ನಾವು ಹೆಚ್ಚು ನೀರು ಕುಡಿಯುತ್ತೇವೆ. ತಣ್ಣೀರು ಕುಡಿಯುವುದರಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ.

ತಣ್ಣೀರು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ದೇಹವು ಗಾಯಗಳು ಮತ್ತು ಇತರ ದೀರ್ಘಕಾಲದ ಕಾಯಿಲೆಗಳಿಗೆ ಗುರಿಯಾಗುತ್ತದೆ. ನಿಯಮಿತವಾಗಿ ತಣ್ಣೀರು ಕುಡಿಯುವುದರಿಂದ ಥೈರಾಯ್ಡ್ ಅಥವಾ ಟಾನ್ಸಿಲ್‌ಗಳು ದೊಡ್ಡದಾಗಿ ಬೆಳೆಯುತ್ತವೆ. 

ಇದನ್ನೂ ಓದಿ: Turmeric Milk Side Effects ಅರಿಶಿಣ ಹಾಲು ಸೇವನೆಯಿಂದಲೂ ಕೂಡ ಅಡ್ಡ ಪರಿಣಾಮಗಳು ಸಂಭವಿಸುತ್ತವೆ, ಎಚ್ಚರ!

ತಣ್ಣೀರು ಆರೋಗ್ಯದ ಮೇಲೆ ಬಹಳಷ್ಟು ಹಾನಿ ಉಂಟು ಮಾಡುತ್ತದೆ. ಆದ್ದರಿಂದ ನೀವು ಸಾಧ್ಯವಾದಷ್ಟು ಕಡಿಮೆ ತಣ್ಣೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News