ದಿನವಿಡೀ ನಿದ್ದೆ ಮಾಡಿದರೆ ಈ ಕಂಪನಿ ನೀಡುವುದು ಕೈ ತುಂಬಾ ವೇತನ ..!

Looking For Professional Nappers: ಕಚೇರಿಯಲ್ಲಿ ಪೈಜಾಮಾದಲ್ಲಿಯೇ ಇರಲು ಮತ್ತು ಬೇಕಾದಷ್ಟು ನಿದ್ರಿಸಲು ಈ ಕಂಪನಿಯಲ್ಲಿ ಅನುಮತಿ ನೀಡಲಾಗುವುದು. ಅದು ಕೂಡಾ ಉತ್ತಮ ವೇತನ ನೀಡಿ. ನಿದ್ದೆ  ಮಾಡಲೆಂದೇ ಈ ಕಂಪನಿ ಹುಡುಕುತ್ತಿದೆ ಯೋಗ್ಯ ಅಭ್ಯರ್ಥಿಯನ್ನು . 

Written by - Ranjitha R K | Last Updated : Aug 9, 2022, 11:49 AM IST
  • Looking For Professional Nappers: ಕಚೇರಿಯಲ್ಲಿ ಪೈಜಾಮಾದಲ್ಲಿಯೇ ಇರಲು ಮತ್ತು ಬೇಕಾದಷ್ಟು ನಿದ್ರಿಸಲು ಈ ಕಂಪನಿಯಲ್ಲಿ ಅನುಮತಿ ನೀಡಲಾಗುವುದು. ಅದು ಕೂಡಾ ಉತ್ತಮ ವೇತನ ನೀಡಿ. ನಿದ್ದೆ ಮಾಡಲೆಂದೇ ಈ ಕಂಪನಿ ಹುಡುಕುತ್ತಿದೆ ಯೋಗ್ಯ ಅಭ್ಯರ್ಥಿಯನ್ನು .
ದಿನವಿಡೀ ನಿದ್ದೆ ಮಾಡಿದರೆ  ಈ ಕಂಪನಿ ನೀಡುವುದು ಕೈ ತುಂಬಾ ವೇತನ ..!   title=
Sleeping job (file photo)

Looking For Professional Nappers : ದಿನವಿಡೀ ಮಲಗುತ್ತಲೇ ಇರುವವರಿಗೆ ಇಲ್ಲಿದೆ ಸಿಹಿ ಸುದ್ದಿ. ಮಲಗಿ ನಿದ್ದೆ ಮಾಡಿಯೂ ಕೂಡಾ ಕೈ ತುಂಬಾ ಹಣ ಸಂಪಾದಿಸಬಹುದು. ಮಾತ್ರವಲ್ಲ ಕಚೇರಿಯಲ್ಲಿ ಪೈಜಾಮಾದಲ್ಲಿಯೇ ಇರಲು ಅವಕಾಶ ನೀಡಲಾಗುತ್ತದೆ. ನ್ಯೂಯಾರ್ಕ್, USA ಮೂಲದ ಮ್ಯಾಟ್ರೆಸ್ ಕಂಪನಿ Casper, ನಿದ್ರಿಸುವ ವೃತ್ತಿಪರ ನ್ಯಾಪರ್‌ಗಾಗಿ ಹುಡುಕುತ್ತಿದೆ. ನ್ಯೂಯಾರ್ಕ್ ಮೂಲದ ಈ ಕಂಪನಿಯು  ನಿದ್ದೆ ಮಾಡುವುದರಲ್ಲಿ ಪರಿಣತಿ ಹೊಂದಿರುವ ವ್ಯಕ್ತಿಗಾಗಿ ಹುಡುಕಾಟ ಮಾಡುತ್ತಿದೆ. ಹೀಗೆ ಮ್ಯಾಟ್ರೆಸ್ ನಲ್ಲಿ ನಿದ್ದೆ ಮಾಡುವ ವ್ಯಕ್ತಿ ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಬಹುದು.

ಜಾಬ್ ಪೋಸ್ಟಿಂಗ್ ಪ್ರಕಾರ,  ಅಭ್ಯರ್ಥಿಯು ಅತ್ಯುತ್ತಮ ಮಲಗುವ ಕೌಶಲ್ಯಗಳನ್ನು ಹೊಂದಿರಬೇಕು. ಇಡೀ ದಿನ ಅಂದರೆ ದಿನದಲ್ಲಿ ಅತಿ ಹೆಚ್ಚು ಕಾಲ ಮಲಗುವ ಸಾಮರ್ಥ್ಯವನ್ನು ಹೊಂದಿರಬೇಕು.  ಈ ಹುದ್ದೆಗೆ ನೇಮಕಗೊಳ್ಳುವ ಅಭ್ಯರ್ಥಿಯಿಂದ ಕಂಪನಿ ನಿರೀಕ್ಷಿಸುವುದು ಏನು ? 

ಇದನ್ನೂ ಓದಿ : ನನ್ನ ಮನೆ ಮೇಲೆ FBI ಅಘೋಷಿತ ದಾಳಿ ನಡೆಸಿದೆ: ಟ್ರಂಪ್ ಆಕ್ರೋಶ

1. ನಿದ್ರೆ
2.  ಕಂಪನಿಯ ಸ್ಟೋರ್ ನಲ್ಲಿ ಮಲಗಬೇಕು. ಮತ್ತು ಎಂಥ ಪರಿಸ್ಥಿತಿ ಇದ್ದರೂ ಚೆನ್ನಾಗಿ ನಿದ್ದೆ ಮಾಡಬೇಕು. 
3. ನಿದ್ದೆ ಯಿಂದ ಎಚ್ಚರವಾದಾಗ  Casper ಸಾಮಾಜಿಕ ಮಾಧ್ಯಮ ಚಾನಲ್‌ನಲ್ಲಿ ಟಿಕ್‌ಟಾಕ್ ಶೈಲಿಯಲ್ಲಿ ಕಂಟೆಂಟ್  ಮಾಡಿ ತಮ್ಮ ಅನುಭವವನ್ನು ಶೇರ್ ಮಾಡುವುದು.  
4. ನಿದ್ರಾ ಸಾಮರ್ಥ್ಯವನ್ನು ಪ್ರದರ್ಶಿಸುವುದು 

ಈ ರೀತಿ ಮಲಗಿ ನಿದ್ರಿಸುವ ಕೆಲಸಕ್ಕಾಗಿ, ಉತ್ತಮ ವೇತನ ನೀಡುವುದರ ಜೊತೆಗೆ  ಅಭ್ಯರ್ಥಿಗೆ ಕಚೇರಿಯಲ್ಲಿ ಪೈಜಾಮಾ ಧರಿಸುವ ಅವಕಾಶವನ್ನು ಕೂಡಾ ನೀಡಲಾಗುವುದು. ಇದಲ್ಲದೆ,  ಕಂಪನಿಯ ಉತ್ಪನ್ನಗಳನ್ನು ಸಹಾ ನೀಡಲಾಗುವುದು. ಆಸಕ್ತ ಸ್ಲೀಪರ್‌ಗಳು ತಮ್ಮ  TikTok ನಲ್ಲಿ ತಮ್ಮ ಮಲಗುವ ಸಾಮರ್ಥ್ಯವನ್ನು ಪ್ರದರ್ಶಿಸಲು ಆಹ್ವಾನಿಸಲಾಗಿದೆ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 11 ಕೊನೆಯ ದಿನವಾಗಿದೆ ಎಂದು ಸಂಸ್ಥೆ ತಿಳಿಸಿದೆ. 

ಇದನ್ನೂ ಓದಿ : ಆತ್ಮಹತ್ಯೆಗೂ ಮುನ್ನ ಸಿಖ್ ಮಹಿಳೆ ವಿಡಿಯೋ, ಪತಿಯ ಕ್ರೌರ್ಯ ಕೇಳಿದ್ರೆ ಬೆಚ್ಚಿಬೀಳ್ತೀರಾ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News