ಸುಪ್ರೀಂಕೋರ್ಟ್ ನಮ್ಮದೇ ಆಗಿರುವುದರಿಂದ ರಾಮಮಂದಿರ ಕಟ್ಟುತ್ತೇವೆ ! -ಉತ್ತರಪ್ರದೇಶ ಸಚಿವ

ಬಿಜೆಪಿ ಭರವಸೆ ನೀಡಿದಂತೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುತ್ತವೆ ಏಕೆಂದರೆ ಸುಪ್ರೀಂ ಕೋರ್ಟ್ ನಮ್ಮದು ಎಂದು ಹೇಳುವ ಮೂಲಕ ಯೋಗಿ ಸರ್ಕಾರದ ಸಚಿವರೊಬ್ಬರು ಭಾರಿ ವಿವಾದಕ್ಕೆ ಕಾರಣವಾಗಿದ್ದಾರೆ.

Last Updated : Sep 9, 2018, 06:04 PM IST
ಸುಪ್ರೀಂಕೋರ್ಟ್ ನಮ್ಮದೇ ಆಗಿರುವುದರಿಂದ ರಾಮಮಂದಿರ ಕಟ್ಟುತ್ತೇವೆ ! -ಉತ್ತರಪ್ರದೇಶ ಸಚಿವ  title=
Photo:ANI

ಲಖನೌ: ಬಿಜೆಪಿ ಭರವಸೆ ನೀಡಿದಂತೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುತ್ತವೆ ಏಕೆಂದರೆ ಸುಪ್ರೀಂ ಕೋರ್ಟ್ ನಮ್ಮದು ಎಂದು ಹೇಳುವ ಮೂಲಕ ಯೋಗಿ ಸರ್ಕಾರದ ಸಚಿವರೊಬ್ಬರು ಭಾರಿ ವಿವಾದಕ್ಕೆ ಕಾರಣವಾಗಿದ್ದಾರೆ.

ಈ ಸದ್ಯ ಈಗ ರಾಮಮಂದಿರ ನಿರ್ಮಾಣದ ವಿಷಯ ಕೋರ್ಟ್ ಮೆಟ್ಟಿಲಲ್ಲಿದೆ. ಆದ್ದರಿಂದ ಈ ವಿಚಾರವಾಗಿ ಭರವಸೆ ನಿಡುವ ಭರದಲ್ಲಿ ಸಚಿವ ಮುಕುತ್ ಬಿಹಾರಿ ವರ್ಮಾ ಸುಪ್ರೀಂಕೋರ್ಟ್ ನಮ್ಮದು ಆದ್ದರಿಂದ ನಾವು ರಾಮಮಂದಿರ ಕಟ್ಟುತ್ತೇವೆ ಎಂದು ತಿಳಿಸಿದ್ದಾರೆ.

2010 ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಿದ 14 ಮೇಲ್ಮನವಿಗಳನ್ನು ನ್ಯಾಯಾಲಯ ವಿಶೇಷ ಪೀಠದಲ್ಲಿ ವಿಚಾರಣೆ ನಡೆಸಿದೆ. ಬಾಬರಿ ಮಸೀದಿ ಇದ್ದ  ಅಯೋಧ್ಯೆಯಲ್ಲಿನ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರಾ ಮತ್ತು ರಾಮ್ ಲಾಲ್ಲಾ ಎಂದು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ.

ಅಭಿವೃದ್ದಿ ಹೆಸರಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಇದರ ಜೊತೆಗೆ ರಾಮ ಮಂದಿರವನ್ನು ನಮ್ಮ ನಿರ್ಧಾರದಂತೆ ನಿರ್ಮಿಸಲಾಗುತ್ತದೆ,ಈಗ ಈ ವಿಷಯವು ಈಗ ಸುಪ್ರಿಂಕೋರ್ಟ್ ನಲ್ಲಿದೆ. ಸುಪ್ರೀಂ ಕೋರ್ಟ್ ನಮ್ಮದು ಜೊತೆಗೆ ನ್ಯಾಯಾಂಗ, ಆಡಳಿತ, ರಾಷ್ಟ್ರ, ಅದೇ ರೀತಿಯಾಗಿ ರಾಮ ಮಂದಿರವು  ನಮಗೆ ಸೇರಿದ್ದು "ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Trending News