ಅಧಿಕ ಕೊಲೆಸ್ಟ್ರಾಲ್‌ನ ಈ ಎರಡು ಗಂಭೀರ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ!

ಅಧಿಕ ಕೊಲೆಸ್ಟ್ರಾಲ್ ಹೃದಯಾಘಾತ, ಪಾರ್ಶ್ವವಾಯು ಇತ್ಯಾದಿಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಅದರ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ವಿಶೇಷವಾಗಿ, ಕೈಯಲ್ಲಿ ಕಾಣಿಸಿಕೊಳ್ಳುವ ಈ ಎರಡು ರೀತಿಯ ಸಮಸ್ಯೆಗಳನ್ನು ನಿರ್ಲಕ್ಷಿಸಲೇ ಬಾರದು. 

Written by - Ranjitha R K | Last Updated : Sep 7, 2022, 10:43 AM IST
  • ಅಧಿಕ ಕೊಲೆಸ್ಟ್ರಾಲ್ ಪ್ರಾಣಕ್ಕೆ ಮುಳ್ಳಾಗಬಹುದು
  • ಹೃದಯಾಘಾತ, ಪಾರ್ಶ್ವವಾಯುವಿಗೆ ಕಾರಣವಾಗಬಹುದು.
  • ಕೆಟ್ಟ ಆಹಾರ ಪದ್ಧತಿಯೇ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾಗಲು ಕಾರಣ
ಅಧಿಕ ಕೊಲೆಸ್ಟ್ರಾಲ್‌ನ ಈ ಎರಡು ಗಂಭೀರ  ಲಕ್ಷಣಗಳ ಬಗ್ಗೆ ಇರಲಿ ಎಚ್ಚರ!  title=
High Cholesterol symptoms (file photo)

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಅಧಿಕ ಕೊಲೆಸ್ಟ್ರಾಲ್‌ ಸಮಸ್ಯೆಯಿಂದ ಅನೇಕರು ಬಳಲುತ್ತಿದ್ದಾರೆ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು  ಹೆಚ್ಚಾದರೆ ಅದು ಪ್ರಾಣಕ್ಕೆ ಕುತ್ತು ತರಬಹುದು. ಅಧಿಕ ಕೊಲೆಸ್ಟ್ರಾಲ್ ಹೊಂದಿದ್ದರೆ ರಕ್ತದಲ್ಲಿ 'ಕೆಟ್ಟ' ಕೊಲೆಸ್ಟ್ರಾಲ್  ಇದೆ ಎಂದರ್ಥ. ಇದು ತುಂಬಾ ಅಪಾಯಕಾರಿ ಸ್ಥಿತಿ. ಅಧಿಕ ಕೊಲೆಸ್ತ್ರಾಲ್ ಹೊಂದಿದ್ದರೆ, ಹೃದ್ರೋಗದ ಅಪಾಯ ಕೂಡಾ ಹೆಚ್ಚಾಗಿರುತ್ತದೆ. ಇದು ಹೃದಯಾಘಾತ, ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಜನರ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯೇ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾಗಲು ಕಾರಣ.  ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾಗುತ್ತಿದ್ದಂತೆ ಅನೇಕ ಲಕ್ಷಣಗಳು ಮತ್ತು ಎಚ್ಚರಿಕೆಯ ಚಿಹ್ನೆಗಳು ಗೋಚರಿಸುತ್ತವೆ.

ಅಧಿಕ ಕೊಲೆಸ್ಟ್ರಾಲ್ ನ ಲಕ್ಷಣಗಳು :  
ಪ್ರತಿಯೊಬ್ಬರೂ ತಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ   ಪರಿಶೀಲಿಸುತ್ತಿರಬೇಕು. ಇದರಿಂದ ಹೃದಯ ಕಾಯಿಲೆ ಮತ್ತು ರಕ್ತನಾಳಗಳಲ್ಲಿನ ಅಡಚಣೆಯ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಗುರುತಿಸಬಹುದು. ಕೆಲವರಿಗೆ ಅಧಿಕ ಕೊಲೆಸ್ಟ್ರಾಲ್ ಇದ್ದರೂ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಇನ್ನು ಕೆಲವರಲ್ಲಿ ದೈಹಿಕ ಲಕ್ಷಣಗಳು ಗೋಚರಿಸುತ್ತವೆ. 

ಇದನ್ನೂ ಓದಿ : ಕೊರೊನಾದ ಅತ್ಯಂತ ಅಪಾಯಕಾರಿ ರೂಪಾಂತರ ಪತ್ತೆ

ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವಾದಾಗ, ಅದು ಅಪಧಮನಿಗಳನ್ನು ನಿರ್ಬಂಧಿಸುತ್ತದೆ.  ಇದನ್ನು ಅಪಧಮನಿಕಾಠಿಣ್ಯ ಎಂದು ಕರೆಯಲಾಗುತ್ತದೆ. ಇದು ಗಂಭೀರ ಸಮಸ್ಯೆಯಾಗಿದೆ. ಕೊಲೆಸ್ಟ್ರಾಲ್ ಕೊಬ್ಬಿನ ಪದಾರ್ಥಗಳು, ಕ್ಯಾಲ್ಸಿಯಂ ಮತ್ತು ಫೈಬ್ರಿನ್ ಗಳಿಂದ ಮಾಡಲ್ಪಟ್ಟಿದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚು ಸಂಗ್ರಹವಾದಾಗ ಅದು ಕೈಯ ರಕ್ತನಾಳಗಳನ್ನು ಮುಚ್ಚಿಹಾಕಬಹುದು. ಈ  ಬಗ್ಗೆ ಸೂಕ್ತ ಸಮಯದಲ್ಲಿ ಕಾಳಜಿ ವಹಿಸದಿದ್ದರೆ, ಕೊಲೆಸ್ಟ್ರಾಲ್ ನಿರಂತರವಾಗಿ ಹೆಚ್ಚುತ್ತಲೇ ಹೋಗುತ್ತದೆ. ಇದರಿಂದ ಕೈ ನೋವು ಕಾಣಿಸಿಕೊಳ್ಳುತ್ತದೆ. ಕೈಗಳಲ್ಲಿ ಪದೇ ಪದೇ ನೀವು ಕಾಣಿಸುತ್ತಿದರೆ, ಕೊಲೆಸ್ಟ್ರಾಲ್ ಅನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. 

ಕೈ ಮರಗಟ್ಟಿದಂತಾಗುವುದು :  
 ಕೈ ಮರಗಟ್ಟಿದಂತೆ ಅನ್ನಿಸುವುದು, ಪದೇ ಪದೇ ಕೈ ಜುಮ್ಮೆನಿಸುವುದು  ಇದು ಒಳ್ಳೆಯ ಲಕ್ಷಣವಲ್ಲ. ಇದು ಹೆಚ್ಚಿನ ಕೊಲೆಸ್ಟ್ರಾಲ್ ನ  ಲಕ್ಷಣವಾಗಿರಬಹುದು. ದೇಹದ ನಿರ್ದಿಷ್ಟ ಭಾಗದಲ್ಲಿ ರಕ್ತದ ಹರಿವಿಗೆ ಅಡಚಣೆಯಾದಾಗ, ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರಕ್ತದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವು ರಕ್ತನಾಳಗಳಲ್ಲಿ ರಕ್ತದ ಸಾಮಾನ್ಯ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ಮದ್ಯಪಾನ ಮಾಡುವವರು ಅಥವಾ ಟೈಪ್ 2 ಡಯಾಬಿಟಿಸ್ ಇರುವವರಲ್ಲಿಯೂ ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವಿಕೆ ಯ ಸಮಸ್ಯೆಯನ್ನು ಅನುಭವಿಸುತ್ತಾರೆ. 
 
ಇದನ್ನೂ ಓದಿ : Diabetes: ಸಕ್ಕರೆ ಕಾಯಿಲೆ ಇರುವವರು ಈ ಒಂದು ಕೆಲಸ ಮಾಡಿದರೆ, ಶೂಟ್ ಅಪ್ ಆಗಲ್ಲ ಸಕ್ಕರೆ ಪ್ರಮಾಣ

ಉಗುರುಗಳ ಬಣ್ಣದಲ್ಲಿ ಬದಲಾವಣೆ :
ನಿಮ್ಮ ಉಗುರುಗಳ ಬಣ್ಣವು ನೇರಳೆ ಅಥವಾ ಗುಲಾಬಿ ಬಣ್ಣದ್ದಾಗಿದ್ದರೆ, ಅದು ಅಧಿಕ ಕೊಲೆಸ್ಟ್ರಾಲ್ ಅನ್ನು ಸೂಚಿಸುತ್ತದೆ. ಕೈಗಳಿಗೆ ಸರಿಯಾದ ರಕ್ತ ಪೂರೈಕೆ ಇಲ್ಲದಿರುವುದೇ ಇದಕ್ಕೆ ಕಾರಣ. ಉಗುರುಗಳಲ್ಲಿ ಅಂತಹ ಬದಲಾವಣೆಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಅಲ್ಲದೆ, ಅಧಿಕ ಕೊಲೆಸ್ಟ್ರಾಲ್ ಅನ್ನು ತಡೆಗಟ್ಟಲು ಆರೋಗ್ಯಕರ ಆಹಾರವನ್ನು ಸೇವಿಸಿ. ಪ್ರತಿದಿನ ವ್ಯಾಯಾಮ ಮಾಡಿ. ಜೀವನಶೈಲಿಯನ್ನು ಸುಧಾರಿಸಿ. ಹೆಚ್ಚು ಕೊಬ್ಬಿನ ಆಹಾರಗಳು, ಸಂಸ್ಕರಿಸಿದ ಆಹಾರಗಳಿಂದ ಸಾಧ್ಯವಾದಷ್ಟು ದೂರವಿರಿ. 

 

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News