Elephant Video Viral : ರುಚಿಕರ ಆಹಾರ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಮನುಷ್ಯರಿಂದ ಹಿಡಿದು ಪ್ರಾಣಿಗಳವರೆಗೆ ಎಲ್ಲರೂ ರುಚಿಕರ ಆಹಾರವನ್ನೇ ಇಷ್ಟಪಡುವುದು. ಎಲ್ಲಿಯಾದರೂ ಸ್ವಾದಿಷ್ಟ ಆಹಾರದ ಘಮ ಬರುತ್ತಿದೆ ಎಂದಾದರೆ ಮನಸ್ಸು ಆ ಕಡೆಗೆಯೇ ವಾಲುತ್ತದೆ. ಹಾಗೆಯೇ ಇಲ್ಲೊಂದು ಆನೆ ರಸವತ್ತಾದ ಊಟದ ಆಸೆಯಿಂದ ಮನೆಯೊಳಗೇ ನುಗ್ಗಿದೆ. ಮನೆಯೊಳಗೇ ಅದ್ಹೇಗೋ ನುಗ್ಗಿದೆ. ಆದರೆ ಹೊರಕ್ಕೆ ಬರುವುದು ಹೇಗೆ ? ಎನ್ನುವುದೇ ಈ ಗಜರಾಜನ ಪರದಾಟ.
ಆಹಾರ ಅರಸಿ ಮನೆಗೆ ನುಗ್ಗಿದ ಗಜರಾಜ :
ಕಾಡು ಪ್ರಾಣಿಗಳು ಆಹಾರ ಅರಸಿಕೊಂಡು ನಾಡಿಗೆ ನುಗ್ಗುತ್ತಿವೆ. ಚಿರತೆ, ಕರಡಿ, ಆನೆ ಹೀಗೆ ಕಾಡುಪ್ರಾಣಿಗಳು ಆಹಾರಕ್ಕಾಗಿ ನಾಡಿನತ್ತ ನುಗ್ಗಿ ಬರುತ್ತಿರುವ ದೃಶ್ಯಗಳನ್ನು ನಾವು ನೋಡುತ್ತಿರುತ್ತೇವೆ. ಇನ್ನು ಆನೆ ಬಹಳ ದೂರದಲ್ಲಿರುವ ಆಹಾರವನ್ನು ಅದರ ಪರಿಮಳದ ಮೂಲಕ ಗ್ರಹಿಸಬಲ್ಲದು. ಇಲ್ಲಿಯವರೆಗೆ ಆನೆಗಳು ರಸ್ತೆಯಲ್ಲಿ ಬರುತ್ತಿರುವ ವಾಹನಗಳನ್ನು ತಡೆದು ಆಹಾರ ಕೇಳುತ್ತಿರುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ಆನೆ ಆಹಾರಕ್ಕಾಗಿ ನೇರವಾಗಿ ಮನೆಯೊಳಗೆ ನುಗ್ಗಿದೆ. ಮನೆಯೊಳಗೆ ಈ ದೈತ್ಯ ಆನೆ ಹೇಗೆ ನುಗ್ಗಿತೋ ಗೊತ್ತಿಲ್ಲ, ಆದರೆ ಹೊರ ಬರುವುದಕ್ಕೆ ಮಾತ್ರ ಆ ಆನೆಗೆ ಸಾಧ್ಯವಾಗಿಲ್ಲ.
ಇದನ್ನೂ ಓದಿ : OMG Video: ಅಪಘಾತಕ್ಕೀಡಾದ ವ್ಯಕ್ತಿಯನ್ನು JCBಯಲ್ಲಿ ಆಸ್ಪತ್ರೆಗೆ ಕರೆದೊಯ್ದ ವಿಡಿಯೋ ವೈರಲ್
Such obstacles are no barriers when it comes to their favourite stuff…
Gentle giant wriggling out after a tasty snack.They have more smell receptors than any mammal – including dogs – and can sniff out food that is even several miles away.
Via @Saket_Badola pic.twitter.com/fTCy5K90gV— Susanta Nanda IFS (@susantananda3) September 12, 2022
ಇದನ್ನೂ ಓದಿ : Viral Video : ನೆಲದ ಮೇಲೆ ಬಿದ್ದು ಒದ್ದೆಯಾದ ಆಹಾರ ಸೇವಿಸಿದ ವ್ಯಕ್ತಿ, ಊಟದ ಮಹತ್ವ ತಿಳಿಸುವ ದೃಶ್ಯ
ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ಈ ಪೋಸ್ಟ್ನಲ್ಲಿ ಈ ವಿಡಿಯೋ ದಿನಾಂಕ ಮತ್ತು ಸ್ಥಳವನ್ನು ನಮೂದಿಸಿಲ್ಲ. ಇಲ್ಲಿಯವರೆಗೆ ಈ ವೀಡಿಯೊವನ್ನು 10 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಹಲವು ಕಾಮೆಂಟ್ಗಳು ಕೂಡಾ ಬಂದಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.