ಮಾಜಿ ಸಿಎಂ ಯಡಿಯೂರಪ್ಪಗೆ ಮತ್ತೆ ಸಂಕಷ್ಟ: ಲೋಕಾ ಅಂಗಳಕ್ಕೆ ಭ್ರಷ್ಟಾಚಾರ ಆರೋಪ ಕೇಸ್

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದೆ. ಬಿಎಸ್‌ವೈ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಿಸುವಂತೆ ಜನಪ್ರತಿನಿಧಿ ವಿಶೇಷ ನ್ಯಾಯಾಲಯದಿಂದ ಆದೇಶಿಸಿದೆ.

Written by - VISHWANATH HARIHARA | Edited by - Chetana Devarmani | Last Updated : Sep 14, 2022, 04:26 PM IST
  • ಮಾಜಿ ಸಿಎಂ ಯಡಿಯೂರಪ್ಪಗೆ ಮತ್ತೆ ಸಂಕಷ್ಟ
  • ಲೋಕಾ ಅಂಗಳಕ್ಕೆ ಭ್ರಷ್ಟಾಚಾರ ಆರೋಪ ಕೇಸ್
  • ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪಗೆ ಮತ್ತೆ ಸಂಕಷ್ಟ: ಲೋಕಾ ಅಂಗಳಕ್ಕೆ ಭ್ರಷ್ಟಾಚಾರ ಆರೋಪ ಕೇಸ್  title=
ಬಿ.ಎಸ್.ಯಡಿಯೂರಪ್ಪ 

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದೆ. ಬಿಎಸ್‌ವೈ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಿಸುವಂತೆ ಜನಪ್ರತಿನಿಧಿ ವಿಶೇಷ ನ್ಯಾಯಾಲಯದಿಂದ ಆದೇಶಿಸಿದೆ. ಹೀಗಾಗಿ ಯಡಿಯೂಪ್ಪ ಕುಟುಂಬಕ್ಕೆ ಲೋಕಾಯುಕ್ತ ಶಾಕ್ ನೀಡುವ ಸಾಧ್ಯತೆ ಇದೆ. 

ಇದನ್ನೂ ಓದಿ : ಯಾರನ್ನೂ ನಂಬಕ್ಕಾಗಲ್ಲ- ಜೀವಭಯ ಹೊರಹಾಕಿದ ಡಿ.ಕೆ.ಶಿವಕುಮಾರ್

ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಭ್ರಷ್ಟಾಚಾರವೆಸಗಿದ್ದಾರೆ ಖಾಸಗಿ ದೂರು ಸಲ್ಲಿಸಿದ್ರು. ಆದರೆ ಪೂರ್ವಾನುಮತಿ ಇಲ್ಲ ಎಂಬ ಕಾರಣಕ್ಕೆ 2021 ರ ಜುಲೈ ನಲ್ಲಿ ವಿಶೇಷ ನ್ಯಾಯಾಲಯ ಖಾಸಗಿ ದೂರನ್ನ ವಜಾಗೊಳಿಸಿತ್ತು. ಆದರೆ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಅಬ್ರಹಾಂ ಮೇಲ್ಮನವಿ ಸಲ್ಲಿಸಿದ್ದರು.

ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಶಶಿಧರ್ ಮರಡಿ,  ಸಂಜಯ್ ಶ್ರೀ,  ಚಂದ್ರಕಾಂತ ರಾಮಲಿಂಗಂ,   ಸಚಿವ ಎಸ್.ಟಿ.ಸೋಮಶೇಖರ್, ಡಾ.ಜಿ.ಸಿ.ಪ್ರಕಾಶ್ ಐಎಎಸ್, ಕೆ.ರವಿ,  ಶ್ರೀ.ವಿರೂಪಾಕ್ಷಪ್ಪ ಯಮಕನಮರಡಿ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು.

ಇದನ್ನೂ ಓದಿ : "ಕನ್ನಡ ಕಡ್ಡಾಯ" ಕಾನೂನು ಇದೇ ಅಧಿವೇಶನದಲ್ಲಿ ಮಂಡನೆ: ಸಿಎಂ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News