Lionel Messi : 2022 ರ ಫಿಫಾ ವಿಶ್ವಕಪ್ ಲಾಸ್ಟ್ ಎಂದ ಲಿಯೋನೆಲ್ ಮೆಸ್ಸಿ!

ಕತಾರ್‌ನಲ್ಲಿ ನಡೆಯಲಿರುವ  2022 ರ ಫಿಫಾ ವಿಶ್ವಕಪ್ ಕೊನೆಯದು ಎಂದು  ಅರ್ಜೆಂಟೀನಾದ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಖಚಿತಪಡಿಸಿದ್ದಾರೆ.

Written by - Channabasava A Kashinakunti | Last Updated : Oct 6, 2022, 11:22 PM IST
  • ಫುಟ್‌ಬಾಲ್‌ ಲೆಜೆಂಡ್ ಲಿಯೋನೆಲ್ ಮೆಸ್ಸಿ
  • 36 ವರ್ಷಗಳ ಕ್ರೀಡಾ ಪಯಣಕ್ಕೆ ಗುಡ್ ಬೈ ಹೇಳಲು ಮುಂದಾದ ಮೆಸ್ಸಿ
  • 2022 ರ ಫಿಫಾ ವಿಶ್ವಕಪ್ ಕೊನೆಯದು ಎಂದ ಮೆಸ್ಸಿ
Lionel Messi : 2022 ರ ಫಿಫಾ ವಿಶ್ವಕಪ್ ಲಾಸ್ಟ್ ಎಂದ ಲಿಯೋನೆಲ್ ಮೆಸ್ಸಿ! title=

ನವದೆಹಲಿ : ಫುಟ್‌ಬಾಲ್‌ ಲೆಜೆಂಡ್ ಲಿಯೋನೆಲ್ ಮೆಸ್ಸಿಗೆ 36 ವರ್ಷಗಳ ಕ್ರೀಡಾ ಪಯಣಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಹೌದು, ಕತಾರ್‌ನಲ್ಲಿ ನಡೆಯಲಿರುವ 2022 ರ ಫಿಫಾ ವಿಶ್ವಕಪ್ ಕೊನೆಯದು ಎಂದು  ಅರ್ಜೆಂಟೀನಾದ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಖಚಿತಪಡಿಸಿದ್ದಾರೆ.

ಮೆಸ್ಸಿ ಸೆಬಾಸ್ಟಿಯನ್ ವಿಗ್ನೊಲೊಗೆ ಸಂಭಾಷಣೆಯಲ್ಲಿ ಮಾತನಾಡಿದ ಮೆಸ್ಸಿ, ಕತಾರ್‌ನಲ್ಲಿ ನಡೆಯಲಿರುವ 2022 ರ ಫಿಫಾ ವಿಶ್ವಕಪ್ ಕೊನೆಯದು ಎಂದು ಖಚಿತ ಪಡಿಸಿದ್ದಾರೆ.

ಇದನ್ನೂ ಓದಿ : IND vs SA ODI: ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ: ಅಯ್ಯರ್-ಸಂಜು ಅಬ್ಬರ ವ್ಯರ್ಥ!

ಇನ್ನು ಮುಂದುವರೆದು ಮಾತನಾಡಿದ ಮೆಸ್ಸಿ, “ನಾನು ವಿಶ್ವಕಪ್‌ನ ದಿನಗಳನ್ನು ಎಣಿಸುತ್ತಿದ್ದೇನೆ. "ಸತ್ಯವೆಂದರೆ, ಸ್ವಲ್ಪ ಆತಂಕವಿದೆ, ಹೇಳುವುದು: 'ಸರಿ, ನಾವು ಇಲ್ಲಿದ್ದೇವೆ, ಏನಾಗಲಿದೆ? ಇದು ನನ್ನ ಕೊನೆಯದು, ಅದು ಹೇಗೆ ಹೋಗಲಿದೆ?’. ಒಂದೆಡೆ, ಅದು ಬರುವವರೆಗೆ ನಾನು ಕಾಯಲು ಸಾಧ್ಯವಿಲ್ಲ ಆದರೆ ಅದು ಚೆನ್ನಾಗಿ ಹೋಗಬೇಕೆಂದು ನಾನು ಹತಾಶನಾಗಿದ್ದೇನೆ, ”ಎಂದು ಹೇಳಿದರು.

"ನಾವು ಅತ್ಯಂತ ಬಲವಾದ ಟೀಂ ಜೊತೆ ಉತ್ತಮ ಕ್ಷಣದಲ್ಲಿದ್ದೇವೆ, ಆದರೆ ವಿಶ್ವಕಪ್‌ನಲ್ಲಿ ಏನು ಬೇಕಾದರೂ ಆಗಬಹುದು,". "ಎಲ್ಲಾ ಪಂದ್ಯಗಳು ಕಷ್ಟ, ಅದು ವಿಶ್ವಕಪ್ ಅನ್ನು ತುಂಬಾ ವಿಶೇಷವಾಗಿಸುತ್ತದೆ ಏಕೆಂದರೆ ಸರಿಯಾದದ್ದು ಯಾವಾಗಲೂ ಆಗಲ್ಲ. ನೀವು ನಿರೀಕ್ಷಿಸಿದಂತೆ ಗೆಲ್ಲುವ ಅಥವಾ ಉತ್ತಮವಾಗಿ ಆಡುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ".

"ನಾನು ಎಲ್ಲರಿಗೂ ಇಷ್ಟಾ ಎಂದು ನನಗೆ ಗೊತ್ತಿಲ್ಲ, ಆದರೆ ಅರ್ಜೆಂಟೀನಾ ಯಾವಾಗಲೂ ಇತಿಹಾಸದ ಅಭ್ಯರ್ಥಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Sachin Tendulkar-MS Dhoni: ಕ್ರಿಕೆಟ್ ದೇವರನ್ನು ಭೇಟಿಯಾದ ಥಾಲಾ! ಕಾರಣವೇನು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News