ದೇಶ ಮಾತ್ರವಲ್ಲದೆ, ವಿದೇಶದಲ್ಲಿರುವ ಅನಿವಾಸಿ ಭಾರತೀಯರು ಕನ್ನಡ ಸೇರಿ ಭಾರತದ ಹೆಸರನ್ನು ಎಲ್ಲೆಡೆ ಪಸರಿಸುವಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದೀಗ ಕನ್ನಡ ಸೇರಿದಂತೆ ಭಾರತೀಯ ಹಾಡುಗಳನ್ನು ಸಾಗರದಾಚೆಗೂ ಪಸರಿಸುವ ಮತ್ತು ಮೆಲುಕು ಹಾಕುವ ನಿಟ್ಟಿನಲ್ಲಿ ಬ್ರಿಟನ್‌ನಲ್ಲಿರುವ ಜಿಕೆ ಎಂಟರ್‌ಪ್ರೈಸಸ್‌ ಎಂಬ ಸಂಸ್ಥೆ ಸೂಪರ್‌ ಸಿಂಗರ್‌ -ಗ್ಲೋಬಲ್‌ ಆನ್‌ಲೈನ್‌ ಕಾರ್ಯಕ್ರಮವನ್ನು ನಡೆಸುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Omicron ಹೊಸ ರೂಪಾಂತರಿಗಳು ಸಂಕಷ್ಟ ಹೆಚ್ಚಿಸಲಿವೆ, ಅಪಾಯಕಾರಿ ಸಾಬೀತಾಗಬಹುದು 4ನೆ ಅಲೆ


ಜಿಕೆ ಎಂಟರ್‌ಪ್ರೈಸಸ್‌ ಸಂಸ್ಥೆಯ‌ ಅಡಿಯಲ್ಲಿ ನಡೆಯುತ್ತಿರುವ ʼಸೂಪರ್‌ ಸಿಂಗರ್‌ -ಗ್ಲೋಬಲ್‌ʼ ಆನ್‌ಲೈನ್‌ ಕಾರ್ಯಕ್ರಮ ಇದೀಗ ಕ್ವಾರ್ಟರ್‌ ಫೈನಲ್‌ ಹಂತಕ್ಕೆ ತಲುಪಿದೆ. ಈ ಸಂಸ್ಥೆಯ ಸಂಸ್ಥಾಪಕ ಹಾಗೂ ನಿರ್ದೇಶಕ ಗೋಪಾಲ ಕುಲಕರ್ಣಿಯವರು ಕನ್ನಡ ಚಲನಚಿತ್ರದ ಹೆಸರಾಂತ ನಿರ್ದೆಶಕರು, ಗಾಯಕರು, ಸಂಗೀತ ನಿ‌ರ್ದೆಶಕರನ್ನು ನಿರ್ಣಾಯಕ ತಂಡಕ್ಕೆ ಆಹ್ವಾನಿಸಿದ್ದಾರೆ. 


ಇನ್ನು ಈ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾದಿಂದ‌  ಅಮೆರಿಕಾದವರಿಗಿನ ಸುಮಾರು 500ಕ್ಕೂ ಹೆಚ್ಚು ಗಾಯಕರು ಭಾಗವಹಿಸಿದ್ದಾರೆ. ಕ್ವಾರ್ಟರ್‌ ಫೈನಲ್‌ ಹಂತದಲ್ಲಿ ಮೂರು ವರ್ಗಗಳಿದ್ದು, ಸೀನಿಯರ್‌ ವಿಭಾಗ (ಹಿಂದಿ),  ಸೀನಿಯರ್ ಕನ್ನಡ ವಿಭಾಗ ಮತ್ತು ಜೂನಿಯರ್‌- ಕನ್ನಡ‌ ಅಥವಾ ಹಿಂದಿ ವಿಭಾಗಗಳೆಂದು ಮಾಡಲಾಗಿದೆ. 


ಮೊದಲನೇ ಹಂತಗಳಲ್ಲಿ ತೀರ್ಪುಗಾರರಾಗಿ ಗಾಯಕರಾದ ಅಂಜಲಿ ಹಲ್ಯಳ್, ಮಂಜು ಅರೋರಾ, ಸವಿತಾ, ಡಾ. ಸತ್ಯವತಿ, ಸಂಗೀತ  ನಿರ್ದೇಶಕರಾದ ಜಾನ್‌ ಕೆನಡಿ, ರಾಘವೇಂದ್ರ ಎಂಬವರು ಸಹಕರಿಸಿದ್ದಾರೆ. 


ಇನ್ನು ಕ್ವಾರ್ಟರ್‌ ಫೈನಲ್‌ ಹಂತದಿಂದ ಫಿನಾಲೆವರೆಗಿನ ಸ್ಪರ್ಧೆಯಲ್ಲಿ ಹೆಸರಾಂತ ಚಿತ್ರ ನಿರ್ದೇಶಕರಾದ ಸುನೀಲ್‌ ಕುಮಾರ್‌ ದೇಸಾಯಿ, ದಿನೇಶ್‌ ಬಾಬು, ಗಾಯಕರಾದ ಬದರಿ ಪ್ರಸಾದ್‌, ಡಾ. ವಿ. ನಾಗೇಂದ್ರ ಪ್ರಸಾದ್‌, ಸಂಗೀತ ನಿರ್ದೇಶಕರಾದ ಮಾನಸ ಹೊಳ್ಳ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ​


ಇದನ್ನು ಓದಿ: Good News: ಭಾರತೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಭಾರತದ ಮುಂದೆ ತನ್ನೀ ಇಚ್ಛೆಯನ್ನು ವ್ಯಕ್ತಪಡಿಸಿದ ಚೀನಾ


ಸ್ಪರ್ಧೆಯ ಪ್ರಕ್ರಿಯೆ: 
ಝೂಮ್‌ ಕರೆಯ ಮೂಲಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಬಿಗ್‌ಬಾಸ್‌ ಸೀಸನ್‌ 6 ಖ್ಯಾತಿಯ ಸೋನು ಪಾಟೀಲ್‌ ನೆರವೇರಿಸುತ್ತಿದ್ದಾರೆ. ರಘು ದೇಸಾತಿ ಅವರು ಕಾರ್ಯಕ್ರಮದ ಕ್ರಿಯೇಟಿವ್‌ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.