PM Modi speech on terror in US Congress: ಪ್ರಧಾನಿ ನರೇಂದ್ರ ಮೋದಿ ಗುರುವಾರ ಯುಎಸ್ ಕಾಂಗ್ರೆಸ್ ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಇಲ್ಲಿ ಚೀನಾ-ಪಾಕಿಸ್ತಾನ ಎಂದು ಹೆಸರಿಸದೆ ಎರಡೂ ದೇಶಗಳ ಮೇಲೆ ತಕ್ಕ ವಾಗ್ದಾಳಿ ನಡೆಸಿದ್ದು, ಜಾಗತಿಕ ಆತಂಕಕ್ಕೆ ಪರಿಹಾರವನ್ನು ಸೂಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 5 ವರ್ಷಗಳ ಬಳಿಕ ನಡೆದ ಭಾರತ-ಪಾಕ್ ಪಂದ್ಯದಲ್ಲಿ ಹೊಡೆದಾಡಿಕೊಂಡ ಕೋಚ್-ಆಟಗಾರರು! ವಿಡಿಯೋ


ಭಯೋತ್ಪಾದನೆಗೆ ಪ್ರಚೋದನೆ ಮತ್ತು ಸೃಷ್ಟಿ ಮಾಡುವವರೊಂದಿಗೆ ನಾವು ಕಟ್ಟುನಿಟ್ಟಾಗಿ ವ್ಯವಹರಿಸಬೇಕಾದ ಸಮಯ ಈಗ ಬಂದಿದೆ ಎಂದು ಕಿಕ್ಕಿರಿದ ಯುಎಸ್ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನದ ಹೆಸರನ್ನು ತೆಗೆದುಕೊಳ್ಳದೆ ಹೇಳಿದರು. ಗಮನಾರ್ಹವಾಗಿ, ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಾಜಿದ್ ಮಿರ್‌ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಭಾರತ ಮತ್ತು ಯುಎಸ್ ನಡುವಿನ ಜಂಟಿ ಪ್ರಸ್ತಾವನೆಯನ್ನು ಚೀನಾ ವೀಟೋ ಮಾಡಿದ ಕೆಲವು ದಿನಗಳ ನಂತರ ಪ್ರಧಾನಿ ಮೋದಿಯವರ ಹೇಳಿಕೆಗಳು ಬಂದಿವೆ.


ಪ್ರಧಾನಿ ಮೋದಿ ಎಚ್ಚರಿಕೆ!


ಒಂದು ಗಂಟೆಗೂ ಹೆಚ್ಚು ಕಾಲ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಪ್ರಪಂಚದ ಜ್ವಲಂತ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಅಷ್ಟೇ ಅಲ್ಲದೆ, ಅದಕ್ಕೆ ಸಂಬಂಧಿಸಿದ ಪರಿಹಾರವನ್ನು ವಿವರಿಸಿದರು. ಅಮೆರಿಕ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನಿ ಮೋದಿ, ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಸೃಷ್ಟಿ ಮಾಡುವ ಶಕ್ತಿಗಳ ವಿರುದ್ಧ ವಾಗ್ದಾಳಿ ನಡೆಸಿದರು. “ಭಯೋತ್ಪಾದನೆಯು ಮಾನವೀಯತೆಯ ಶತ್ರುವಾಗಿದೆ. ಅದನ್ನು ಎದುರಿಸುವಲ್ಲಿ ಯಾವುದೇ ಅಡೆತಡೆ ಇರಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ಪ್ರಚೋದನೆ ಮತ್ತು ಸೃಷ್ಟಿ ಮಾಡುವವರ ವಿರುದ್ಧ ನಾವು ಜಯಿಸಬೇಕು” ಎಂದು ಹೇಳಿದರು.


ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭಾರತ-ಅಮೆರಿಕ ಒಗ್ಗಟ್ಟು!


ಇದಕ್ಕೂ ಮುನ್ನ, ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಅಮೆರಿಕ ಭುಜಕ್ಕೆ ಭುಜ ಕೊಡುತ್ತದೆ. ಅಂತೆಯೇ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗೊಳಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ” ಎಂದರು.


ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಾಜಿದ್ ಮಿರ್‌ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಭಾರತ ಮತ್ತು ಯುಎಸ್ ಜಂಟಿ ಪ್ರಸ್ತಾವನೆಯನ್ನು ಚೀನಾ ತಡೆದ ಕೆಲವು ದಿನಗಳ ನಂತರ ಪ್ರಧಾನಿ ಮೋದಿಯವರು ಹೇಳಿಕೆ ನೀಡಿದ್ದಾರೆ. 26/11ರ ಮುಂಬೈ ಭಯೋತ್ಪಾದಕ ದಾಳಿಯ ಮೋಸ್ಟ್ ವಾಂಟೆಡ್ ಉಗ್ರ ಮಿರ್.


ಇದನ್ನೂ ಓದಿ: 33 ಎಸೆತ, 14 ಸಿಕ್ಸರ್, 9 ಬೌಂಡರಿ! ಅತೀ ವೇಗವಾಗಿ ಶತಕ ಸಿಡಿಸಿ ತಲ್ಲಣ ಮೂಡಿಸಿದ್ದು ಭಾರತದ ಈ ಕಿಲಾಡಿ!


ಕಳೆದ ತಿಂಗಳು ನಿಕ್ಕಿ ಏಷ್ಯಾಕ್ಕೆ ನೀಡಿದ ಸಂದರ್ಶನದಲ್ಲಿ ಪಿಎಂ ಮೋದಿ ಅವರು ಮಾತನಾಡಿ, “ಪಾಕಿಸ್ತಾನದೊಂದಿಗೆ 'ಸಾಮಾನ್ಯ ಮತ್ತು ನೆರೆಯ' ಸಂಬಂಧವನ್ನು ಹೊಂದಲು ಬಯಸುವುದಾಗಿ” ಹೇಳಿದ್ದರು. ಆದರೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿ ಈಗ ಪಾಕಿಸ್ತಾನದ ಮೇಲಿದೆ ಎಂದು ಪ್ರಧಾನಿ ಮೋದಿ ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದರು. 'ಭಯೋತ್ಪಾದನೆ ಮತ್ತು ಹಗೆತನದಿಂದ ಮುಕ್ತವಾದ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ಅವರಿಗೆ (ಪಾಕಿಸ್ತಾನ) ಬಿಟ್ಟದ್ದು' ಎಂದು ಪ್ರಧಾನಿ ಮೋದಿ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l