ಕೇಂದ್ರ ಸರ್ಕಾರದ ಕಡೆಯಿಂದ ಮತ್ತೊಂದು ಮಹತ್ತರ ಆದೇಶ ಹೊರ ಬಿದ್ದಿದೆ. ಈ ಮೂಲಕ ಕಳೆದ 4 ವರ್ಷಗಳ ನಿರೀಕ್ಷೆಗೆ ಸ್ಪಷ್ಟ ಉತ್ತರ ಸಿಕ್ಕಿದೆ.
1/7ಇನ್ನೇನು ಜುಲೈತಿಂಗಳ ಡಿಎನ್ ಹೆಚ್ಚಳ ಘೋಷಣೆಯಾಗಲಿದೆ. ತುಟ್ಟಿಭತ್ಯೆ ಘೋಷಣೆ ಯಾವಾಗ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಕೇಂದ್ರ ಸರ್ಕಾರಿ ನೌಕರರು.
2/7ದಸರಾ ಅಥವಾ ದೀಪಾವಳಿಗೂ ಮುನ್ನ ಡಿಎ ಡಿಆರ್ ಹೆಚ್ಚಳದ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳಲಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ 58 ಅಥವಾ 59 ಶೇ.ಕ್ಕೆ ಏರಲಿದೆ.
3/7ಇದರ ಮಧ್ಯೆಯೇ ಈಗ ಕೇಂದ್ರ ಸರ್ಕಾರದ ಕಡೆಯಿಂದ ಮತ್ತೊಂದು ಮಹತ್ತರ ಆದೇಶ ಹೊರ ಬಿದ್ದಿದೆ. ಈ ಮೂಲಕ ಕಳೆದ 4 ವರ್ಷಗಳ ನಿರೀಕ್ಷೆಗೆ ಸ್ಪಷ್ಟ ಉತ್ತರ ಸಿಕ್ಕಿದೆ.
4/7ಕೊರೊನಾ ಅವಧಿಯಲ್ಲಿ ನಿಲ್ಲಿಸಲಾಗಿದ್ದ ಡಿಎ ಬಾಕಿಗಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಬಹಳ ಸಮಯದಿಂದ ಕಾಯುತ್ತಿದ್ದಾರೆ. ಈ ಹಣ ಬಿಡುಗಡೆ ಮಾಡಬೇಕು ಎನ್ನುವುದು ನೌಕರರ ಬಹುದಿನದ ಬೇಡಿಕೆಯಾಗಿತ್ತು.
5/7ಬಾಕಿ ಇರುವ 18 ತಿಂಗಳ ಡಿಎ ಖಂಡಿತವಾಗಿಯೂ ಬಿಡುಗಡೆ ಮಾಡಲೇಬೇಕು. ಸರ್ಕಾರ ಡಿಎ ಯನ್ನು ಸಂಪೂರ್ಣವಾಗಿ ನಿಲ್ಲಿಸಬಹುದು ಆದರೆ ಯಾವುದೇ ಕಾರಣಕ್ಕೂ ಡಿಎ ಮೊತ್ತವನ್ನು ತಡೆ ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು.
6/7ಈಗ ಕೇಂದ್ರ ನೌಕರರ ಭರವಸೆ ಬಹುತೇಕ ಸುಳ್ಳಾಗಿದೆ. ಇತ್ತೀಚೆಗೆ 18 ತಿಂಗಳ ಡಿಎ ಬಾಕಿ ಬಗ್ಗೆ ಸಂಸತ್ತಿನ ಅಧಿವೇಶನದಲ್ಲಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ, 18 ತಿಂಗಳ ಡಿಎ ಬಾಕಿ ನೀಡುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದೆ.
7/7ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಜನವರಿ 1, 2020 ರಿಂದ ಜೂನ್ 30, 2021 ರವರೆಗೆ ತುಟ್ಟಿ ಭತ್ಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಅದಾದ ನಂತರ, ತುಟ್ಟಿ ಭತ್ಯೆಯನ್ನು ಎಂದಿನಂತೆ ಪಾವತಿಸಲಾಗುತ್ತಿದೆ.