Hyundai SUV: ವಿನೂತನ ವಿನ್ಯಾಸದೊಂದಿಗೆ ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್ ಬಿಡುಗಡೆ

Fri, 17 Jun 2022-4:53 pm,

ಕಂಪ್ಯಾಕ್ಟ್ SUV ಮಾರಾಟದಲ್ಲಿ ಸದ್ಯ ಮುಂಚೂಣಿಯಲ್ಲಿರುವ ವೆನ್ಯೂ ಮಾದರಿಯನ್ನು ಹ್ಯುಂಡೈ ಕಂಪನಿಯು ಟಾಟಾ ನೆಕ್ಸಾನ್ ಮಾದರಿಗೆ ಪೈಪೋಟಿಯಾಗಿ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿದೆ. ಈ ಹೊಸ ಕಾರು ಮಾದರಿಯು ನವೀಕೃತ ವಿನ್ಯಾಸದೊಂದಿಗೆ ಹಲವಾರು ಹೊಸ ತಾಂತ್ರಿಕ ಸೌಲಭ್ಯ ಹೊಂದಿರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಹ್ಯುಂಡೈ ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿದೆ.

ಹ್ಯುಂಡೈ ಕಂಪನಿಯು ಹೊಸ ಕಾರು ಮಾದರಿಯನ್ನು ಈ ಹಿಂದಿನಂತೆ 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದೆ. ಸಾಮಾನ್ಯ ಪೆಟ್ರೋಲ್ ಮಾದರಿಗೆ ಆರಂಭಿಕ 7.53 ಲಕ್ಷ ರೂ. ಬೆಲೆ ಹೊಂದಿದ್ದರೆ, ಟರ್ಬೊ ಪೆಟ್ರೋಲ್ ಮಾದರಿಗೆ ಆರಂಭಿಕ 9.99 ಲಕ್ಷ ರೂ. ಮತ್ತು ಡೀಸೆಲ್ ಮಾದರಿಯು ಆರಂಭಿಕ 9.99 ಲಕ್ಷ ರೂ. ಬೆಲೆ ಹೊಂದಿದೆ.

HMI 2022 ಹ್ಯುಂಡೈ ವೆನ್ಯೂ ಕಾರನ್ನು 7 ಬಣ್ಣಗಳ ಆಯ್ಕೆಗಳಲ್ಲಿ ನೀಡುತ್ತದೆ. ಪೋಲಾರ್ ವೈಟ್, ಟೈಫೂನ್ ಸಿಲ್ವರ್, ಫ್ಯಾಂಟಮ್ ಬ್ಲ್ಯಾಕ್, ಡೆನಿಮ್ ಬ್ಲೂ, ಟೈಟಾನ್ ಗ್ರೇ, ಫಿಯರಿ ರೆಡ್, 1 ಡ್ಯುಯಲ್ ಟೋನ್ ಫಿಯರಿ ರೆಡ್ ವಿಥ್ ಬ್ಲ್ಯಾಕ್ ರೂಫ್ ಆಯ್ಕೆಯನ್ನು ಒಳಗೊಂಡಿದೆ.

2022ರ ವೆನ್ಯೂ ಮಾದರಿಯು E, S, S(O), SX ಮತ್ತು SX(O) ವೆರಿಯೆಂಟ್‌ಗಳನ್ನು ಪಡೆದುಕೊಂಡಿದ್ದು, ಈ ಬಾರಿ ಹಲವು ನವೀಕೃತ ವಿನ್ಯಾಸಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಮುಂಭಾಗದ ವಿನ್ಯಾಸವು ಮಧ್ಯಮ ಕ್ರಮಾಂಕದ ಐಷಾರಾಮಿ SUV ಟ್ಯೂಸಾನ್ ಮಾದರಿಯಿಂದ ಪ್ರೇರಣೆ ಹೊಂದಿದೆ. ಮುಂಭಾಗದ ಗ್ರಿಲ್ ಅನ್ನು ಡಾರ್ಕ್ ಕ್ರೋಮ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, ಮುಂಭಾಗದ ಬಂಪರ್‍ನಲ್ಲಿಯೂ ಸಹ ಸಾಕಷ್ಟು ಪರಿಷ್ಕರಣೆ ಮಾಡಲಾಗಿದೆ. ಹೊಸ ಬಂಪರ್ ಜೊತೆ ಈ ಬಾರಿ ದೊಡ್ಡದಾದ ಏರ್ ಡ್ಯಾಮ್ ನೀಡಲಾಗಿದ್ದು, ಇದರಲ್ಲಿ ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಕೂಡ ಕಂಡುಬರುತ್ತದೆ. ಹೊಸ ಕಾರಿನ ಎರಡು ಬದಿಯಲ್ಲೂ ಹೊಸ ವಿನ್ಯಾಸದ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ. LED ಟೈಲ್‌ಲೈಲ್, ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಜೊತೆಗೆ ಸ್ಕೂಪ್-ಔಟ್‌ನೊಂದಿಗೆ ನವೀಕೃತಗೊಂಡಿರುವ ಹಿಂಭಾಗದ ಬಂಪರ್ ಮತ್ತು ನಂಬರ್ ಪ್ಲೇಟ್ ವಿಭಾಗವನ್ನು ಕಪ್ಪು ಬಣ್ಣದ ಪ್ಲಾಸ್ಟಿಕ್‌ನೊಂದಿಗೆ ಜೋಡಿಸಲಾಗಿದೆ.

ಹುಂಡೈ 2022 ವೆನ್ಯೂ SUVಯನ್ನು 3 ಎಂಜಿನ್ ಆಯ್ಕೆಗಳಲ್ಲಿ ನೀಡುತ್ತಿದೆ. 1.0-ಲೀಟರ್ ಟರ್ಬೊ-ಪೆಟ್ರೋಲ್, 1.2-ಲೀಟರ್ Mi ಪೆಟ್ರೋಲ್ ಮತ್ತು 1.5-ಲೀಟರ್ CRDi ಡೀಸೆಲ್. 1.0-ಲೀಟರ್ ಟರ್ಬೊ GDi ಪೆಟ್ರೋಲ್ ಎಂಜಿನ್ 6,000rpmನಲ್ಲಿ 118 bhp ಮತ್ತು 172 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.2-ಲೀಟರ್ Mi ಪೆಟ್ರೋಲ್ ಎಂಜಿನ್ 82 bhp ಮತ್ತು 114 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.5-ಲೀಟರ್ CRDi ಎಂಜಿನ್ 99 bhp ಮತ್ತು 240 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಂಜಿನ್‌ಗಳನ್ನು 4 ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. 5-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ ಆಟೋಮ್ಯಾಟಿಕ್, 6-ಸ್ಪೀಡ್ ಮ್ಯಾನ್ಯುವಲ್ ಮತ್ತು 7-ಸ್ಪೀಡ್ ಡಿಸಿಟಿ. ಹೊಸ ಹ್ಯುಂಡೈ ವೆನ್ಯೂ ಸಹ ಸಾಮಾನ್ಯ, ಇಕೋ ಮತ್ತು ಸ್ಪೋರ್ಟ್ ಮೋಡ್‌ಗಳ ಆಯ್ಕೆಯೊಂದಿಗೆ ಬಹುಮುಖ ಚಾಲನಾ ಕಾರ್ಯಕ್ಷಮತೆಗಾಗಿ ಡ್ರೈವ್ ಮೋಡ್ ಅನ್ನು ನೀಡಲಾಗಿದೆ.

ಸುರಕ್ಷತೆಯ ವಿಷಯದಲ್ಲಿ 2022ರ ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್-ಅಸಿಸ್ಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಸೆನ್ಸರ್‌ಗಳ ಜೊತೆಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿರುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link