2024ರಲ್ಲಿ ಅಲಿಯಾ ಭಟ್ ನಿಂದ ಮಲೈಕಾ ಆರೋರಾವರೆಗೆ ಟ್ರೈ ಮಾಡಿದ weight loss ಡಯಟ್ !ನಟಿಯರ ಬಳುಕುವ ದೇಹದ ಸೀಕ್ರೆಟ್ ಇಲ್ಲಿದೆ

Fri, 13 Dec 2024-4:43 pm,

ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ಶುದ್ಧೀಕರಿಸುವುದು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ತೂಕವನ್ನು ಕೂಡಾ ಕಡಿಮೆ ಮಾಡುತ್ತದೆ. 2024 ರಲ್ಲಿ ಅನೇಕರು ಡಿಟಾಕ್ಸ್ ಆಹಾರಗಳನ್ನು ಇಷ್ಟಪಟ್ಟಿದ್ದಾರೆ. 

ಆಲಿಯಾ ಭಟ್ ಅವರಂತಹ ತಾರೆಯರು ಹರ್ಬಲ್ ಟೀ, ಗ್ರೀನ್ ಜ್ಯೂಸ್ ಮತ್ತು ಸೂಪ್‌ನ ಸಹಾಯದಿಂದ ಡಿಟಾಕ್ಸ್ ಡಯಟ್‌ಗಳನ್ನು ಅನುಸರಿಸಿದ್ದಾರೆ.

ನಟಿ ಸಾರಾ ಅಲಿ ಖಾನ್ ದೇಸಿ ಆಹಾರವನ್ನು ಇಷ್ಟಪಡುತ್ತಾರೆ ಆದರೆ ಅವರು ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡುತ್ತಾರೆ. ಸಾರಾ ಸೇವಿಸುವ ಆಹಾರದಲ್ಲಿ ಸ್ಥಳೀಯ ಮಸಾಲೆಗಳೊಂದಿಗೆ  ಕಡಿಮೆ ಹಿಟ್ಟು ಮತ್ತು ಅಕ್ಕಿಯನ್ನು ಬಳಸಲಾಗುತ್ತದೆ. 

ಕೆಟೋಜೆನಿಕ್ ಅಥವಾ ಕೀಟೋ ಡಯಟ್ ಈ ವರ್ಷವೂ ಸೆಲೆಬ್ರಿಟಿಗಳ ಫೆವರಿಟ್ ಲಿಸ್ಟ್ ನಲ್ಲಿದೆ. ತಮನ್ನಾ ಭಾಟಿಯಾ ಈ ವರ್ಷ ಕೀಟೋ ಡಯಟ್ ಸಹಾಯದಿಂದ ತಮ್ಮ ತೂಕವನ್ನು ಕಳೆದುಕೊಂಡಿದ್ದಾರೆ.   

ಸಸ್ಯಾಹಾರಿ ಮತ್ತು ಸಸ್ಯಾಧಾರಿತ ಆಹಾರಗಳ ಮೂಲಕ ತೂಕ ಕಳೆದುಕೊಳ್ಳುವುದು.   2024 ರಲ್ಲಿ, ಶ್ರದ್ಧಾ ಕಪೂರ್ ಸಸ್ಯ ಆಧಾರಿತ ಆಹಾರ ಸೇವನೆ ಮೂಲಕ ತೂಕವನ್ನು ಕಳೆದುಕೊಂಡಿದ್ದಾರೆ. ಈ ರೀತಿಯ ಆಹಾರವು ಮಧುಮೇಹ ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಬಾಲಿವುಡ್‌ನ ಫಿಟ್‌ನೆಸ್ ಐಕಾನ್ ಮಲೈಕಾ ಅರೋರಾ 2024ರಲ್ಲಿ  ಇಂಟರ್ ಮಿಟೆಂಟ್ ಉಪವಾಸದ ಆಹಾರವನ್ನು ಅನುಸರಿಸಿದ್ದಾರೆ. ಈ ಉಪವಾಸದಲ್ಲಿ, 16 ಗಂಟೆಗಳ ಅಂತರದಲ್ಲಿ ಆಹಾರ ಸೇವಿಸಬೇಕು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link