Snake Repellent Plants: ಇದ್ದಕ್ಕಿದ್ದಂತೆ ನಿಮ್ಮ ಮುಂದೆ ಹಾವು ಕಾಣಿಸಿಕೊಂಡರೆ, ಯಾರಾದರೂ ಭಯದಿಂದ ನಡುಗುತ್ತಾರೆ. ಎಲ್ಲರೂ ಹಾವುಗಳಿಗೆ ಹೆದರುತ್ತಾರೆ. ಆದರೆ, ಮಳೆಗಾಲದಲ್ಲಿ ಹಾವುಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಋತುವಿನಲ್ಲಿ, ಹಾವುಗಳು ಮನೆಗಳಿಗೆ ಪ್ರವೇಶಿಸುತ್ತವೆ. ಹಾವುಗಳು ಬರದಂತೆ ತಡೆಯಲು, ಅದಕ್ಕೆ ವಿಶೇಷ ಪರಿಹಾರವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
Snake Repellent Plants: ಹಾವುಗಳನ್ನು ಕಂಡರೆ ಯಾರಿಗೆ ತಾನೆ ಭಯ ಇಲ್ಲ ಹೇಳಿ. ಮಳೆಗಾಲದಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ, ಮೊಟ್ಟೆ ಹೊಡೆದು ಮರಿಯಾಗಿ ಹೊರಗೆ ಓಡಾಡುತ್ತದೆ. ಆದರೆ, ಈ ಗಿಡಗಳನ್ನು ಮನೆಯ ಮುಂದೆ ಇಡುವುದರಿಂದ ಹಾವುಗಳು ಬರುವುದಿಲ್ಲ. ಆ ಗಿಡಗಳು ಯಾವುದು? ತಿಳಿಯಲು ಮುಂದೆ ಓದಿ...
ಮಳೆಗಾಲ ಬಂದಿದೆ. ಹಾವುಗಳು ಹೆಚ್ಚಾಗಿ ಮನೆಯ ಬಳಿ ಓಡಾಡುತ್ತವೆ. ಹಾವುಗಳು ಸುತ್ತಮುತ್ತಲಿನ ಪ್ರದೇಶಗಳು ಮತ್ತು ಮನೆಗಳಿಗೆ ಹೆಚ್ಚಾಗಿ ಪ್ರವೇಶಿಸುತ್ತವೆ. ಹಾವುಗಳನ್ನು ದೂರವಿಡಲು, ನೀವು ಮನೆಯಲ್ಲಿ ಅಥವಾ ಕುಂಡಗಳಲ್ಲಿ ಕೆಲವು ವಿಶೇಷ ಸಸ್ಯಗಳನ್ನು ನೆಡಬಹುದು. ಅವುಗಳ ವಾಸನೆಯು ಹಾವನ್ನು ನಿಮ್ಮ ಮನೆಯ ಸುತ್ತಲೂ ಅಲೆದಾಡಲು ಬಿಡುವುದಿಲ್ಲ.
ನೀವು ಎಂದಾದರೂ ಹಾವಿನ ಗಿಡದ ಬಗ್ಗೆ ಕೇಳಿದ್ದೀರಾ? ಈ ಗಿಡವು ತುಂಬಾ ವಿಚಿತ್ರವಾದ ವಾಸನೆಯನ್ನು ಹೊಂದಿರುತ್ತದೆ. ಹಾವುಗಳು ಅದರ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆ ಓಡಿ ಹೋಗುತ್ತದೆ. ನೈಸರ್ಗಿಕ ಗುಣಗಳಿಂದ ತುಂಬಿರುವ ಈ ಗಿಡದ ಬೇರುಗಳು ಹಳದಿ ಮತ್ತು ಕಂದು ಬಣ್ಣದಲ್ಲಿರುತ್ತವೆ. ಎಲೆಗಳು ಪ್ರಕಾಶಮಾನವಾದ ಹಸಿರು ಬಣ್ಣದಲ್ಲಿರುತ್ತವೆ. ಇದನ್ನು ನೆಡುವುದರಿಂದ ಹಾವುಗಳನ್ನು ದೂರವಿಡಬಹುದು.
ಹಾವುಗಳು ವರ್ಮ್ವುಡ್ ಸಸ್ಯದ ವಾಸನೆಯನ್ನು ಸಹಿಸುವುದಿಲ್ಲ. ಹಾವುಗಳು ಅದರ ವಾಸನೆ ಬಂದ ತಕ್ಷಣ ತಮ್ಮ ಮಾರ್ಗವನ್ನು ಬದಲಾಯಿಸುತ್ತವೆ. ಇದನ್ನು ಅಂಗಳದಲ್ಲಿ, ಬಾಲ್ಕನಿಯಲ್ಲಿ ಅಥವಾ ಮುಖ್ಯ ದ್ವಾರದಲ್ಲಿಯೂ ನೆಡಬಹುದು.
ಜನರು ತಮ್ಮ ಮನೆಗಳಲ್ಲಿ ಪರಿಮಳ ಮತ್ತು ಸೌಂದರ್ಯವನ್ನು ಸೇರಿಸಲು ಚೆಂಡು ಹೂಗಳನ್ನು ನೆಡುತ್ತಾರೆ. ಅಲ್ಲದೆ, ಹಾವುಗಳು ಅದರ ವಾಸನೆಯನ್ನು ಇಷ್ಟಪಡುವುದಿಲ್ಲ. ತಜ್ಞರು ಹೇಳುವಂತೆ ಈ ಗಿಡಗಳ ವಸನೆ ಮೂಗಿಗೆ ಸೋಕುತ್ತಿದ್ದಂತೆ ಹಾವುಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತದೆ.
ಕ್ಯಾಕ್‌ಟಸ್ ಗಿಡ ಮರುಭೂಮಿಗಳಲ್ಲಿ ಕಂಡುಬರುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಇದನ್ನು ಅಲಂಕಾರಿಕ ಸಸ್ಯವಾಗಿಯೂ ಬಳಸಲಾಗುತ್ತಿದೆ. ಆದರೆ ಇದಕ್ಕೆ ವಾಸನೆ ಇರುವುದಿಲ್ಲ. ಇದರ ಮುಳ್ಳು ಸ್ವಭಾವದಿಂದಾಗಿ, ಹಾವುಗಳು ಅದರ ಸುತ್ತಲೂ ಹೋಗಲು ಇಷ್ಟಪಡುವುದಿಲ್ಲ.
ಹಾವುಗಳು ಈ ಸಸ್ಯದ ನೋಟವನ್ನು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ ಹಾವುಗಳು, ಈ ಸಸ್ಯ ಕಾಣುತ್ತಿದ್ದಂತೆ ಕಾಣೆಯಾಗುತ್ತವೆ. ನೀವು ಇದನ್ನು ಮನೆಯ ಅಲಂಕಾರಕ್ಕಾಗಿ ಹಾಗೂ ಹಾವುಗಳನ್ನು ಹಿಮ್ಮೆಟ್ಟಿಸಲು ಬಳಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನೂ ZEE KANNADA NEWS ಖಚಿತ ಪಡಿಸುವುದಿಲ್ಲ.