IPL ತಂಡವನ್ನಾಳಿದ ಅತ್ಯಂತ ಸುಂದರ ಒಡತಿಯರಿವರು

ಈ ಮೆಗಾ ಟಿ20 ಲೀಗ್‌ನ ಪಂದ್ಯಗಳ ಸಮಯದಲ್ಲಿ, ಅನೇಕ ತಂಡಗಳ ಮಾಲೀಕರು 'ಸೆಂಟರ್ ಆಫ್ ಎಕ್ಸ್‌ಟ್ರಾಕ್ಷನ್' ಆಗುತ್ತಾರೆ. 

ನವದೆಹಲಿ : ಐಪಿಎಲ್ ನಲ್ಲಿ ಕ್ರಿಕೆಟ್ ನ ರೋಮಾಂಚನ ಮಾತ್ರವಲ್ಲ, ಗ್ಲಾಮರ್  ಕೂಡ ಕಾಣಸಿಗುತ್ತದೆ. ಈ ಮೆಗಾ ಟಿ20 ಲೀಗ್‌ನ ಪಂದ್ಯಗಳ ಸಮಯದಲ್ಲಿ, ಅನೇಕ ತಂಡಗಳ ಮಾಲೀಕರು 'ಸೆಂಟರ್ ಆಫ್ ಎಕ್ಸ್‌ಟ್ರಾಕ್ಷನ್' ಆಗುತ್ತಾರೆ. ಇಲ್ಲಿಯವರೆಗೆ ಪಂದ್ಯಾವಳಿಯ 5 ಅತ್ಯಂತ ಸುಂದರ ಒದತಿಯರ ಪಟ್ಟಿಯನ್ನು ನೋಡೋಣ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ರಾಜಸ್ಥಾನ್ ರಾಯಲ್ಸ್‌ನಲ್ಲಿ 11.7 ಶೇಕಡಾ ಪಾಲನ್ನು ಖರೀದಿಸಿದ್ದರು. ಬಾಲಿವುಡ್ ನಟಿ ಅನೇಕ ಸಂದರ್ಭಗಳಲ್ಲಿ ತನ್ನ ತಂಡವನ್ನು ಹುರಿದುಂಬಿಸುತ್ತಿರುವುದು ಕಂಡುಬಂದಿತ್ತು. ಸ್ಪಾಟ್ ಫಿಕ್ಸಿಂಗ್‌ನಿಂದಾಗಿ ಈ ತಂಡವನ್ನು 2 ವರ್ಷಗಳ ಕಾಲ ನಿಷೇಧಿಸಲಾಯಿತು. ನಂತರ ದಂಪತಿ RR ಮಾಲೀಕತ್ವವನ್ನು ಕಳೆದುಕೊಂಡರು.

2 /5

ಕಾವ್ಯಾ ಮಾರನ್ ಸನ್ ಗ್ರೂಪ್ ಮಾಲೀಕ ಕಲಾನಿಧಿ  ಮಾರನ್ ಅವರ ಪುತ್ರಿ. ಸನ್‌ರೈಸರ್ಸ್ ಹೈದರಾಬಾದ್ (SRH) ಅವರ ತಂಡವಾಗಿದೆ. ಕಾವ್ಯಾ ಮಾರನ್ ಅವರು ಕಲಾನಿಧಿ  ಮಾರನ್ ಅವರ ಪುತ್ರಿ . 29 ವರ್ಷದ ಕಾವ್ಯಾ ಸ್ವತಃ ಸನ್ ಮ್ಯೂಸಿಕ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು IPL 2018 ರಲ್ಲಿ ಟಿವಿಯಲ್ಲಿ ಮೊದಲು ಕಾಣಿಸಿಕೊಂಡರು.  

3 /5

ಜೂಹಿ ಚಾವ್ಲಾ ಐಪಿಎಲ್ ತಂಡದ ಕೋಲ್ಕತ್ತಾ ನೈಟ್ ರೈಡರ್ಸ್ ಸಹ-ಮಾಲೀಕರಾಗಿದ್ದಾರೆ. ತಮ್ಮ ತಂಡವನ್ನು ಹುರಿದುಂಬಿಸುತ್ತಿರುವ ದೃಶ್ಯ ಅನೇಕ ಬಾರಿ ಕಂಡು ಬಂದಿದೆ.   

4 /5

ಪ್ರೀತಿ ಜಿಂಟಾ ಅವರನ್ನು ಐಪಿಎಲ್‌ನ ಅತ್ಯಂತ ಮುದ್ದಾದ ಒಡತಿ ಎಂದು ಪರಿಗಣಿಸಲಾಗಿದೆ.  ಅವರು ಪಂಜಾಬ್ ಕಿಂಗ್ಸ್‌ನ ಸಹ-ಮಾಲೀಕರಾಗಿದ್ದಾರೆ. ಪ್ರೀತಿ ತನ್ನ ತಂಡವನ್ನು ಪ್ರೋತ್ಸಾಹಿಸುವುದರಲ್ಲಿ ಕಿಂಚಿತ್ತೂ ಹಿಂದೆ ಬೀಳುವುದಿಲ್ಲ.   

5 /5

ಗಾಯತ್ರಿ ರೆಡ್ಡಿ ಅವರು ಐಪಿಎಲ್ ತಂಡದ ಡೆಕ್ಕನ್ ಚಾರ್ಜರ್ಸ್ ಮಾಲೀಕತ್ವದ ಡೆಕ್ಕನ್ ಕ್ರಾನಿಕಲ್ ಮಾಲೀಕ ಟಿ ವೆಂಕಟರಾಮ್ ರೆಡ್ಡಿ ಅವರ ಪುತ್ರಿ. ಅವರು ಅನೇಕ ಐಪಿಎಲ್ ಪಂದ್ಯಗಳಲ್ಲಿ ಸ್ಟ್ಯಾಂಡ್‌ಗಳಲ್ಲಿ ಕಾಣಿಸಿಕೊಂಡರು. ಅಭಿಮಾನಿಗಳು ಅವರನ್ನು ದಕ್ಷಿಣ ಭಾರತದ ನಟಿ ಎಂದೇ ಭಾವಿಸಿದ್ದರು.