8th Pay Commission: ಕೇಂದ್ರ ಸರ್ಕಾರದಿಂದ 8ನೇ ವೇತನ ಆಯೋಗಕ್ಕೆ ಅನುಮೋದನೆ ದೊರೆತ ಬೆನ್ನಲ್ಲೇ ಕೋವಿಡ್-19 ಸಂದರ್ಭದಲ್ಲಿ ತಡೆಹಿಡಿಯಲಾಗಿದ್ದ 18ತಿಂಗಳ ಬಾಕಿ ತುಟ್ಟಿಭತ್ಯೆ ಮರುಸ್ಥಾಪಿಸಬೇಕೆಂಬ ಬೇಡಿಕೆ ಮತ್ತೆ ಮುನ್ನಲೆಗೆ ಬರುತ್ತಿದೆ.
8th Pay Commission: 18ತಿಂಗಳ ಕಾಲ ತಡೆಹಿಡಿಯಲಾಗಿರುವ ಡಿಎ/ಡಿಆರ್ ಬಾಕಿಯನ್ನು ಮರುಸ್ಥಾಪಿಸುವುದು ಸರ್ಕಾರಿ ನೌಕರರ ಮಹತ್ವದ ಬೇಡಿಕೆಗಳಲ್ಲಿ ಪ್ರಮುಖ ಬೇಡಿಕೆಯಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಕೋವಿಡ್-19 ಸಾಂಕ್ರಾಮಿಕದ ಸಮಯಸ್ದಲ್ಲಿ ತಡೆಹಿಡಿಯಲಾಗಿದ್ದ ಸರ್ಕಾರಿ ನೌಕರರಿಗೆ 18 ತಿಂಗಳ ಡಿಎ/ಡಿಆರ್ ಬಾಕಿಯನ್ನು ಮರುಸ್ಥಾಪಿಸುವ ಬೇಡಿಕೆ ಮತ್ತೆ ಮುನ್ನಲೆಗೆ ಬಂದಿದೆ. ಏಪ್ರಿಲ್ 23, 2025 ರಂದು ನಡೆದ ರಾಷ್ಟ್ರೀಯ ಮಂಡಳಿ-ಜಂಟಿ ಸಮಾಲೋಚನಾ ಯಂತ್ರೋಪಕರಣಗಳ (ಜೆಸಿಎಂ) ಸ್ಥಾಯಿ ಸಮಿತಿಯ 63 ನೇ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.
ಎನ್‌ಸಿ ಜೆಸಿಎಂ ಸಭೆಯಲ್ಲಿ, ಸರ್ಕಾರಿ ನೌಕರರಿಗೆ ಕೋವಿಡ್-19 ಅವಧಿಯಲ್ಲಿ ಸ್ಥಗಿತಗೊಳಿಸಲಾದ 18 ತಿಂಗಳ ಡಿಎ/ಡಿಆರ್ ಬಾಕಿಯನ್ನು ಮರುಸ್ಥಾಪಿಸುವಂತೆ ಒತ್ತಾಯ ಕೇಳಿಬಂದಿದೆ.
ಸಾಮಾನ್ಯವಾಗಿ ತುಟ್ಟಿಭತ್ಯೆ ( ಡಿಎ)ಯನ್ನು ವರ್ಷಕ್ಕೆ ಎರಡು ಬಾರಿ, (ಜನವರಿ ಮತ್ತು ಜುಲೈನಲ್ಲಿ) ಪರಿಷ್ಕರಿಸಲಾಗುತ್ತದೆ. ಆದಾಗ್ಯೂ, ಕೋವಿಡ್-19 ಸಮಯದಲ್ಲಿ, ಜನವರಿ 2020 ರಿಂದ ಜೂನ್ 2021 ರವರೆಗೆ ತಡೆಹಿಡಿಯಲಾದ ಮೂರು ಡಿಎ ಹೆಚ್ಚಳವನ್ನು ಸ್ಥಗಿತಗೊಳಿಸಲಾಗಿದೆ. ಈ 18 ತಿಂಗಳ ಡಿಎ/ಡಿಆರ್ ಬಾಕಿಯನ್ನು ಮರುಸ್ಥಾಪಿಸುವಂತೆ ಎನ್‌ಸಿ ಜೆಸಿಎಂ ಸಭೆಯಲ್ಲಿ ಒತ್ತಾಯಿಸಲಾಗಿದೆ.
ಕೋವಿಡ್-19 ಸಂದರ್ಭದಲ್ಲಿ ಸರ್ಕಾರಿ ಸಂಪನ್ಮೂಲಗಳ ಮೇಲಿನ ಆರ್ಥಿಕ ಒತ್ತಡದಿಂದಾಗಿ 18ತಿಂಗಳ ಡಿಎ ಸ್ಥಗಿತಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ 2025 ರ ಕೇಂದ್ರ ಬಜೆಟ್‌ಗೆ ಮುಂಚಿತವಾಗಿ, ಎನ್‌ಸಿ ಜೆಸಿಎಂನ ಸಿಬ್ಬಂದಿ ತಂಡವು 18 ತಿಂಗಳ ಡಿಎ ಬಾಕಿಯನ್ನು ಬಿಡುಗಡೆ ಮಾಡುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರವನ್ನು ಸಹ ಬರೆಯಲಾಗಿತ್ತು ಎಂದಿಲ್ಲಿ ಉಲ್ಲೇಖಿಸಲಾಗಿದೆ.
ವರ್ಷದ ಆರಂಭದಲ್ಲೇ ಕೇಂದ್ರ ಸರ್ಕಾರ 8ನೇ ವೇತನ ಆಯೋಗವನ್ನು ಅನುಮೋದಿಸಿದ್ದರೂ, ಈ ಆಯೋಗದ ಶಿಫಾರಸುಗಳನ್ನು ಇನ್ನೂ ಜಾರಿಗೆ ತಂದಿಲ್ಲ. ಆಯೋಗದ ಅಧ್ಯಕ್ಷರು ಮತ್ತು ಇತರ ಸದಸ್ಯರ ನೇಮಕವನ್ನು ಸರ್ಕಾರ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. 8ನೇ ವೇತನ ಆಯೋಗದ ಅನುಮೋದನೆ ಬಳಿಕ, ಕೇಂದ್ರ ಸರ್ಕಾರಿ ನೌಕರರು ಮತ್ತು ಕೇಂದ್ರದ ನಡುವೆ ವೇತನ, ಪಿಂಚಣಿ ಮತ್ತು ಭತ್ಯೆ ಪರಿಷ್ಕರಣೆಗಳ ಕುರಿತು ನಿರ್ಣಾಯಕ ಮಾತುಕತೆಗಳು ನಡೆಯಲಿದೆ.
ವೇತನ, ಪಿಂಚಣಿ ಮತ್ತು ಭತ್ಯೆ ಪರಿಷ್ಕರಣೆಗಳ ಕುರಿತು ಸಮಾಲೋಚನೆ ಬಳಿಕ "ಶಿಫಾರಸಿನ ನಿಯಮಗಳಿಗೆ ಶೀಘ್ರದಲ್ಲೇ ಸರ್ಕಾರದ ಅನುಮೋದನೆ ಸಿಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದನ್ನು ಆದಷ್ಟು ಬೇಗ ಅನುಮೋದಿಸಬೇಕು" ಎಂದು NC-JCM ನ ಸಿಬ್ಬಂದಿ ವಿಭಾಗದ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರಲ್ಲಿ 18ತಿಂಗಳ ಬಾಕಿ ಡಿಎ/ಡಿಆರ್ ಗೂ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.