ದೀಪಾವಳಿ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಬೊಂಬಾಟ್ ಸುದ್ದಿ... ಪಿಂಚಣಿ ಸಹಿತ ನೌಕರರ ಮೂಲ ವೇತನದಲ್ಲಿ ರೂ. 34,560 ಹೆಚ್ಚಳ! ಭರ್ಜರಿ ಮೊತ್ತ ಕೈಸೇರೋದು ಯಾವಾಗ?
ನೌಕರರ ಬೇಡಿಕೆಯಂತೆ 8ನೇ ವೇತನ ಆಯೋಗ ರಚನೆಯಾದರೆ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. ಅಷ್ಟೇ ಅಲ್ಲದೆ, ಕನಿಷ್ಠ ವೇತನ 18,000 ರೂ.ನಿಂದ 34,560 ರೂ.ಗೆ ಏರಿಕೆಯಾಗಲಿದೆ. ಜೊತೆಗೆ ಉನ್ನತ ಹುದ್ದೆಗಳ ಗರಿಷ್ಠ ವೇತನವನ್ನು 4 ಲಕ್ಷ 80 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ. ಅಂದರೆ ಶೇ.92ರಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಅಷ್ಟಕ್ಕೂ ಈ ವೇತನ ಆಯೋಗ ಯಾವಾಗ ಬರಲಿದೆ? ಸಂಬಳ ಮತ್ತು ಪಿಂಚಣಿ ಹೇಗೆ ಹೆಚ್ಚಾಗುತ್ತದೆ? ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.
8ನೇ ವೇತನ ಆಯೋಗ ರಚನೆ ಬಗ್ಗೆ ನೌಕರರು ಹಾಗೂ ಪಿಂಚಣಿದಾರರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ. ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಿ 2026ರಿಂದ ಜಾರಿಗೆ ಬಂದರೆ ವೇತನದಲ್ಲಿ ಭಾರಿ ಏರಿಕೆಯಾಗಲಿದೆ ಎಂದು ಹೇಳಲಾಗುತ್ತದೆ. ಅಂದಹಾಗೆ ಈ ವೇತನ ಆಯೋಗ ರಚನೆಯಾದಲ್ಲಿ 1 ಕೋಟಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ವಿಶೇಷವಾಗಿ ಹಂತ 1 ರಿಂದ 18 ರವರೆಗಿನ ನೌಕರರ ವೇತನವು ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆ ಇದೆ.
ಅದೇ ರೀತಿ ಫಿಟ್‌ಮೆಂಟ್ ಅಂಶವೂ ಹೆಚ್ಚಾಗಬೇಕು. ಪ್ರಸ್ತುತ ಫಿಟ್‌ಮೆಂಟ್ ಅಂಶ ಶೇ.2.62ರಷ್ಟಿದ್ದು, 3ರಿಂದ ಶೇ.3.68ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಅಂದರೆ ಶೇ.15-20ರಷ್ಟು ವೇತನ ಹೆಚ್ಚಾಗಬಹುದು, 8ನೇ ವೇತನ ಆಯೋಗ ಜಾರಿಯಾದರೆ ಪಿಂಚಣಿದಾರರಿಗೂ ಭಾರಿ ಲಾಭವಾಗಲಿದೆ.
ಸದ್ಯ ಕನಿಷ್ಠ ಪಿಂಚಣಿ 9 ಸಾವಿರ ಇದ್ದು, ಹೊಸ ವೇತನ ಆಯೋಗ ಜಾರಿಗೆ ಬಂದರೆ 17,280 ರೂ.ಗೆ ಏರಿಕೆಯಾಗಲಿದೆ. ಗರಿಷ್ಠ ಪಿಂಚಣಿ 1 ಲಕ್ಷ 25 ಸಾವಿರದಿಂದ 2 ಲಕ್ಷ 40 ಸಾವಿರಕ್ಕೆ ಏರಿಕೆಯಾಗಲಿದೆ.
8ನೇ ವೇತನ ಆಯೋಗ ಜಾರಿಯಾದರೆ ಸರ್ಕಾರಿ ನೌಕರರ ಕನಿಷ್ಠ ವೇತನ 18 ಸಾವಿರ ರೂಪಾಯಿಯಿಂದ 34,560 ರೂಪಾಯಿಗಳಿಗೆ ಏರಿಕೆಯಾಗಲಿದೆ. ಮೇಲ್ಮಟ್ಟದಲ್ಲಿರುವವರ ಗರಿಷ್ಠ ವೇತನ ಶೇ.92ರಷ್ಟು ಏರಿಕೆಯಾಗಿ 4 ಲಕ್ಷ 80 ಸಾವಿರಕ್ಕೆ ಏರಿಕೆಯಾಗಲಿದೆ.
ಫೆಬ್ರವರಿ 2025 ರಲ್ಲಿ ಬಜೆಟ್ ಅಧಿವೇಶನದಲ್ಲಿ 8 ನೇ ವೇತನ ಆಯೋಗದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ. ಇದು ಕಾರ್ಯರೂಪಕ್ಕೆ ಬರಲು ಒಂದೂವರೆಯಿಂದ ಎರಡು ವರ್ಷ ಬೇಕಾಗುತ್ತದೆ. ಅಂದರೆ 2026ರಿಂದ ಇದು ಜಾರಿಗೆ ಬರಬಹುದು. ಹೊಸ ವೇತನ ಆಯೋಗ ರಚನೆಯಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹೀಗಾಗಿ ಇದು ಜಾರಿಗೆ ಬರಬೇಕು ಎಂಬುದು ಕೇಂದ್ರ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದೆ.