30 ವರ್ಷಗಳ ನಂತರ ಅಪರೂಪದ ತ್ರಿಗ್ರಹ ಯೋಗ; ಈ ಮೂರು ರಾಶಿಯವರಿಗೆ ಅಪಾರ ಸುಖ-ಸಂಪತ್ತು ಸಿಗಲಿದೆ!!

Trigraha Yoga 2025: ಇದೇ ತಿಂಗಳಲ್ಲಿ ಸೂರ್ಯ, ಶನಿ ಮತ್ತು ಶುಕ್ರ ಗ್ರಹಗಳು ಒಟ್ಟಿಗೆ ಮೀನ ರಾಶಿಯಲ್ಲಿ ಸಂಚಾರ ಮಾಡಲಿವೆ. ಈ ಮೂರು ಗ್ರಹಗಳ ಸಂಯೋಜನೆಯು ತ್ರಿಗ್ರಹ ಯೋಗವನ್ನು ಸೃಷ್ಟಿ ಮಾಡುತ್ತದೆ. ಮೂವತ್ತು ವರ್ಷಗಳ ನಂತರ ಈ ಅಪರೂಪದ ಸಂಗತಿ ನಡೆಯುತ್ತಿದೆ.

Trigraha Yoga 2025: ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ಅದರದೇಯಾದ ಮಹತ್ವವಿದೆ. ಕಾಲ ಕಾಲಕ್ಕೆ ತಮ್ಮ ಸ್ಥಾನಗಳನ್ನು ಬದಲಾಯಿಸುವ ಗ್ರಹಗಳು ರಾಶಿಗಳನ್ನೂ ಬದಲಾಯಿಸುತ್ತವೆ. ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸಂಚಾರ ಮಾಡಿದಾಗ ಶುಭ ಅಥವಾ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಅವು ಎಲ್ಲಾ ೧೨ ರಾಶಿಯವರ ಜೀವನದ ವಿವಿಧ ಅಂಶಗಳ ಮೇಲೆ ಪರಿಣಾಮ ಬೀರುತ್ತವೆ. ಯಾಕೆಂದರೆ ಪ್ರತಿಯೊಂದು ಗ್ರಹ ಸಂಚಾರವು ವಿಶಿಷ್ಟ ಶಕ್ತಿಯನ್ನು ಹೊಂದಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

1 /5

ಇದೇ ತಿಂಗಳಲ್ಲಿ ಸೂರ್ಯ, ಶನಿ ಮತ್ತು ಶುಕ್ರ ಗ್ರಹಗಳು ಒಟ್ಟಿಗೆ ಮೀನ ರಾಶಿಯಲ್ಲಿ ಸಂಚಾರ ಮಾಡಲಿವೆ. ಈ ಮೂರು ಗ್ರಹಗಳ ಸಂಯೋಜನೆಯು ತ್ರಿಗ್ರಹ ಯೋಗವನ್ನು ಸೃಷ್ಟಿ ಮಾಡುತ್ತದೆ. ಮೂವತ್ತು ವರ್ಷಗಳ ನಂತರ ಈ ಅಪರೂಪದ ಸಂಗತಿ ನಡೆಯುತ್ತಿದೆ. ಇದು ಎಲ್ಲಾ ೧೨ ರಾಶಿಗಳ ಜೀವನದ ಮೇಲೆ ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಹಾಗಾದ್ರೆ ಈ ಶುಭ ಯೋಗದಿಂದ ಉತ್ತಮ ಫಲ ಪಡೆಯುವ ಅದೃಷ್ಟದ ರಾಶಿಗಳು ಯಾವುದು ಎಂದು ತಿಳಿಯಿರಿ...  

2 /5

ವೃಷಭ ರಾಶಿಯವರಿಗೆ ತ್ರಿಗ್ರಹ ಯೋಗವು ಶುಭ ಪರಿಣಾಮವನ್ನು ತರಲಿದೆ. ಈ ಪ್ರಬಲ ಯೋಗವು ನಿಮ್ಮ ಆದಾಯ ಮತ್ತು ಲಾಭದ ಮನೆಯಲ್ಲಿ ರೂಪುಗೊಳ್ಳುತ್ತದೆ. ವ್ಯಾಪಾರಿಗಳು ವಿವಿಧ ವ್ಯವಹಾರಗಳ ಮೂಲಕ ಅನಿರೀಕ್ಷಿತ ಲಾಭ ಗಳಿಸಬಹುದು. ಕೆಲಸದ ನಿಮಿತ್ತ ವಿದೇಶ ಪ್ರಯಾಣ ಮಾಡುವ ಅವಕಾಶಗಳು ಸಿಗುತ್ತವೆ. ವ್ಯವಹಾರವನ್ನ ಇನ್ನಷ್ಟು ವಿಸ್ತರಿಸಲು ಇದು ಅನುಕೂಲಕರ ಸಮಯ. ಹಳೆಯ ಹೂಡಿಕೆಗಳಿಂದ ನೀವುಯ ಅಪಾರ ಲಾಭ ಗಳಿಸುವ ಸಾಧ್ಯತೆಗಳಿವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಮತ್ತಷ್ಟು ಸುಧಾರಣೆಯಾಗಲಿದೆ.  

3 /5

ಮಿಥುನ ರಾಶಿಯವರಿಗೆ ತ್ರಿಗ್ರಹ ಯೋಗವು ಅದ್ಭುತ ಪ್ರಯೋಜನಗಳನ್ನು ನೀಡಲಿದೆ. ಈ ವಿಶೇಷ ಯೋಗವು ಮಿಥುನ ರಾಶಿಯವರ ಕರ್ಮ ಸ್ಥಾನದಲ್ಲಿ ರೂಪುಗೊಳ್ಳುತ್ತದೆ. ಈ ಅವಧಿಯಲ್ಲಿ ಅನಿರೀಕ್ಷಿತ ಹಣಕಾಸಿನ ಲಾಭಗಳು ಬರುವ ಸಾಧ್ಯತೆಯಿದೆ. ಕೆಲಸದಲ್ಲಿರುವ ವೃತ್ತಿಪರರು ವಿವಿಧ ಒಪ್ಪಂದಗಳಿಂದ ಲಾಭ ಪಡೆಯುತ್ತಾರೆ. ಉದ್ಯಮಿಗಳು ಅಪಾರ ಲಾಭ ಗಳಿಸುತ್ತಾರೆ. ಕೆಲಸದಲ್ಲಿ ಉನ್ನತ ಸ್ಥಾನ ಸಾಧಿಸಲು ಇದು ಉತ್ತಮ ಸಮಯ. ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಅದೃಷ್ಟದ ಬೆಂಬಲದಿಂದ ನೀವು ಹಠಾತ್‌ ಧನಲಾಭ ಗಳಿಸುತ್ತೀರಿ.

4 /5

ಕರ್ಕಾಟಕ ರಾಶಿಯವರ ಜೀವನದಲ್ಲಿ ತ್ರಿಗ್ರಹ ಯೋಗದಿಂದ ಅನೇಕ ರೀತಿಯ ಪ್ರಯೋಜನಗಳು ಸಿಗಲಿವೆ. ಈ ಅವಧಿಯಲ್ಲಿ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಈ ಯೋಗವು ಕರ್ಕಾಟಕ ರಾಶಿಯ ಒಂಬತ್ತನೇ ಮನೆಯಲ್ಲಿದ್ದು, ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸು ಮತ್ತು ಸಮೃದ್ಧಿ ತರುತ್ತದೆ. ಈ ಯೋಗದಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವ ಮತ್ತು ಅತ್ಯುತ್ತಮ ಫಲಿತಾಂಶ ಸಾಧಿಸುವ ಸಾಧ್ಯತೆಯಿದೆ. ವೃತ್ತಿಪರರಿಗೆ ಹೊಸ ಜವಾಬ್ದಾರಿಗಳು ಸಿಗುತ್ತವೆ. ಈ ತ್ರಿಗ್ರಹ ಯೋಗವು ನಿಮ್ಮ ಜೀವನವನ್ನು ಬದಲಾಯಿಸಲಿದೆ.

5 /5

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)