ಇದೀಗ ಅಭಿಷೇಕ್ ನೀಡಿದ ಒಂದು ಹೇಳಿಕೆಯು ಮತ್ತೊಮ್ಮೆ ಅವರಿಬ್ಬರ ಸಂಬಂಧದ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ಇಲ್ಲಿ ಅಭಿಷೇಕ್ ಬಚ್ಚನ್ ನೇರಾ ನೇರವಾಗಿ ಪತ್ನಿ ಬಗ್ಗೆ ಮಾತನಾಡಿದ್ದಾರೆ.
1/6ಕಳೆದ ಕೆಲವು ತಿಂಗಳುಗಳಿಂದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಬಹಳವಾಗಿ ಚರ್ಚೆಯಲ್ಲಿತ್ತು. ಬಳಿಕ ಮತ್ತೆ ದಂಪತಿ ಅನೇಕ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡು ಡಿವೋರ್ಸ್ ವದಂತಿಗಳಿಗೆ ಬ್ರೇಕ್ ಹಾಕಿದ್ದರು.
2/6ಇದೀಗ ಅಭಿಷೇಕ್ ನೀಡಿದ ಒಂದು ಹೇಳಿಕೆಯು ಮತ್ತೊಮ್ಮೆ ಅವರಿಬ್ಬರ ಸಂಬಂಧದ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ಇಲ್ಲಿ ಅಭಿಷೇಕ್ ಬಚ್ಚನ್ ನೇರಾ ನೇರವಾಗಿ ಪತ್ನಿ ಬಗ್ಗೆ ಮಾತನಾಡಿದ್ದಾರೆ.
3/6ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಅಭಿಷೇಕ್ ಮತ್ತು ಅರ್ಜುನ್ ಕಪೂರ್ ನಡುವಿನ ಸಂಭಾಷಣೆಯ ವೇಳೆ ಅಭಿಷೇಕ್ ಬಾಯಿಯಿಂದ ಈ ಮಾತು ಬಂದಿದೆ.
4/6ಯಾವ ವ್ಯಕ್ತಿ ಫೋನ್ ಮಾಡಿ ನಿಮ್ಮ ಜೊತೆ ಮಾತನಾಡಬೇಕು ಎಂದಾಗ ಟೆನ್ಷನ್ ಆಗುತ್ತೀರಾ ಎನ್ನುವ ಪ್ರಶ್ನೆಗೆ ಅಭಿಷೇಕ್ ನೀಡಿರುವ ಉತ್ತರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.ಇಲ್ಲಿ ಅಭಿಷೇಕ್ ನೀಡಿರುವ ಉತ್ತರವೇ ಮತ್ತೊಮ್ಮೆ ಚರ್ಚೆಗೆ ದಾರಿ ಮಾಡಿಕೊಟ್ಟಿರುವುದು.
5/6ಅರ್ಜುನ್ ಕಪೂರ್ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್, ನಿಮಗಿನ್ನೂ ಮದುವೆಯಾಗಿಲ್ಲ, ಮದುವೆಯಾದ ಮೇಲೆ ಈ ಪ್ರಶ್ನೆಗೆ ಉತ್ತರ ಸಿಗುತ್ತವೆ ಎಂದು ಹೇಳಿದ್ದಾರೆ.ಅಲ್ಲದೆ ಪತ್ನಿ ಫೋನಾಯಿಸಿ ನಿಮ್ಮೊಂದಿಗೆ ಮಾತನಾಡುವುದಿದೆ ಎಂದು ಹೇಳಿದರೆ ನೀವು ತೊಂದರೆಯಲ್ಲಿದ್ದೀರಾ ಎಂದರ್ಥಎಂದು ನೇರವಾಗಿ ನುಡಿದಿದ್ದಾರೆ.
6/6ಅಭಿಷೇಕ್, ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಇಷ್ಟು ನೇರವಾಗಿ ಈ ಹಿಂದೆ ಎಲ್ಲಿಯೂ ಮಾತನಾಡಿರಲಿಲ್ಲ. ಹಾಗಾಗಿ ಇದೀಗ ಅಭಿಷೇಕ್ ಮಾತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.