Kota Srinivasa Rao : ಕೆಲವು ಹಿರಿಯ ನಟರು ತಮ್ಮ ಮೊದಲ ಸಿನಿಮಾದಿಂದ ಹಿಡಿದು ಇಂದಿನ ಯುವ ನಟರ ಜೊತೆ ನಟಿಸುವ ಮೂಲಕ ತಾವು ಯಾರಿಗೂ ಕಡಿಮೆ ಇಲ್ಲ ಅಂತ ಸಾಭೀತು ಪಡಿಸುತ್ತಿದ್ದಾರೆ. ಈ ಪೈಕಿ ಈ ತೆಲುಗು ಹಿರಿಯ ನಟ ಕೋಟ ಶ್ರೀನಿವಾಸ ರಾವ್ (Kota Srinivasa Rao)ಒಬ್ಬರು.. ತೆಲುಗು ಸಿನಿರಂಗದ ಜೊತೆ ಕನ್ನಡ ಚಿತ್ರಲೋಕದಲ್ಲಿ ತಮ್ಮ ಛಾಪು ಮೂಡಿಸಿದ್ದ ಈ ಹಿರಿ ಜೀವಕ್ಕೆ ಇದೀಗ 82 ವರ್ಷ ವಯಸ್ಸು..
1/9ಕೋಟ ಶ್ರೀನಿವಾಸ ರಾವ್ ಅವರು 10 ಜುಲೈ 1942 ರಂದು ಆಂಧ್ರ ಪ್ರದೇಶದ ಕಂಕಿಪಾಡು ಎಂಬಲ್ಲಿ ಜನಿಸಿದರು.
2/9ತೆಲುಗು, ಕನ್ನಡ, ತಮಿಳು, ಹಿಂದಿ ಸೇರಿದಂತೆ ಬಹುತೇಕ ಸಿನಿಮಾಗಳಲ್ಲಿ ಖಳನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀನಿವಾಸ್ ಅವರಿಗೆ ಪ್ರತ್ಯೇಕ ಅಭಿಮಾನಿ ಬಳ ಇದೆ..
3/91978 ರಲ್ಲಿ ತೆರೆಕಂಡ ಪ್ರಾಣಂ ಖರೀದು ಎಂಬ ತೆಲುಗು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ.. ಕೊನೆಯದಾಗಿ ಕನ್ನಡ ಖಬ್ಜ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
4/9ಪದ್ಮಶ್ರೀ (2015), ಸ್ಪೇಷಲ್ ಜ್ಯೂರಿ ಅವಾರ್ಡ್ (1985), ಸೈಮಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತಿ ಪ್ರಶಸ್ತಿಗಳಿಗೆ ಕೋಟ ಶ್ರೀನಿವಾಸ ರಾವ್ ಅವರು ಭಾಜನರಾಗಿದ್ದಾರೆ.
5/9ಇನ್ನು ಕನ್ನಡಕ್ಕೂ ಮತ್ತು ಕೋಟ ಶ್ರೀನಿವಾಸ ರಾವ್ (Kota Srinivasa Rao) ಅವರಿಗೆ ಅಪಾರವಾದ ನಂಟಿಗೆ.. 1997 ರಿಂದಲೂ ಅವರು ಕನ್ನಡ ಹಲವಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿ ಪ್ರೇಮಿಗಳ ಮನ ಗೆದ್ದಿದ್ದಾರೆ.
6/91997 ರಲ್ಲಿ ತೆರೆಕಂಡ ಲೇಡಿ ಕಮೀಷನರ್ ಸಿನಿಮಾದ ಮೂಲಕ ಕೋಟ ಶ್ರೀನಿವಾಸ ರಾವ್ ಸ್ಯಾಂಡಲ್‌ವುಡ್‌ಗೆ ಪರಿಚಯವಾದರು.. ಈ ಸಿನಿಮಾದಲ್ಲಿ ಮಾಲಾಶ್ರೀ ಜೊತೆ ನಟಿಸಿದ್ದರು.
7/92003 ರಲ್ಲಿ ತೆರೆಕಂಡ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ರಕ್ತ ಕಣ್ಣೀರು ಸಿನಿಮಾದಲ್ಲಿ ತಮ್ಮದೇಯಾದ ನಟನೆಯ ಮೂಲಕ ಈ ಸಿನಿಮಾದ ಯಶಸ್ಸಿಗೆ ಕೋಟ ಶ್ರೀನಿವಾಸ ರಾವ್ ಅವರು ಕಾರಣರಾದರು.
8/92005 ರಲ್ಲಿ ತೆರೆಕಂಡ ನಮ್ಮ ಬಸವ, ನಮ್ಮಣ್ಣ ಸಿನಿಮಾದಲ್ಲಿ ಅಪ್ಪು ಮತ್ತು ಸುದೀಪ್ ಜೊತೆ ನಟಿಸಿದ್ದರು. ಈ ಎರಡೂ ಸಿನಿಮಾಗಲ್ಲಿನ ಕೋಟ ಶ್ರೀನಿವಾಸ ರಾವ್ ಅವರ ವಿಲನ್ ಪಾತ್ರ ಗಮನ ಸೆಳೆಯಿತು.
9/9ಕೋಟ ಶ್ರೀನಿವಾಸ ರಾವ್ (Kota Srinivasa Rao) ಅವರು 2011 ಶ್ರೀಮತಿ ಮತ್ತು 2023 ರಲ್ಲಿ ಕೊನೆಯ ಬಾರಿಗೆ ಉಪೆಂದ್ರ ಮತ್ತು ಸುದೀಪ್ ಹಾಗೂ ಶಿವಣ್ಣ ನಟನೆ ಕಬ್ಜ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.. ಇದೀಗ ಆನಾರೋಗ್ಯದಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.