ಬಿಗ್‌ ಬಾಸ್ ಕನ್ನಡ ಸೀಸನ್‌ 12 ನಿರೂಪಣೆ‌ ಮಾಡೋದು ಫಿಕ್ಸ್‌!? : ನಟ ಸುದೀಪ್‌ ಕೊಟ್ರು ಸ್ಪಷ್ಟನೆ

Kannada Bigg boss new season: ಬಿಗ್‌ ಬಾಸ್ ಕನ್ನಡ ಹೊಸ ಸೀಸನ್‌ ಬಗ್ಗೆ ಚರ್ಚೆಗಳು ಶುರುವಾಗಿವೆ. ಸುದೀಪ್‌ ಕೂಡ ಈ ಬಗ್ಗೆ ಮಾತನಾಡಿದ್ದಾರೆ.

Bigg Boss contestant list : ಬಿಗ್‌‌ ಬಾಸ್ ಹೊಸ ಸೀಸನ್‌ ನಿರೂಪಣೆಯ ಬಗ್ಗೆ ಖುದ್ದು ನಟ ಸುದೀಪ್‌ ಮಾತನಾಡಿದ್ದಾರೆ. ಇಷ್ಟು ದಿನಗಳ ಎಲ್ಲ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

1 /8

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್‌ ಬಾಸ್ 11 ಸೀಸನ್‌ ಗಳು ಯಶಸ್ವಿಯಾಗಿ ನಡೆದಿವೆ. ಇದೀಗ ಬಿಗ್‌ ಬಾಸ್ ಕನ್ನಡ ಸೀಸನ್‌ 12 ರ ಹೊಸ ನಿರೂಪಕ ಯಾರೆಂಬ ಕುತೂಹಲದ ಮಧ್ಯೆ ಸುದೀಪ್‌ ಅವರ ಹೇಳಿಕೆ ಎಲ್ಲರ ಗಮನ ಸೆಳೆದಿದೆ. 

2 /8

ಬಿಗ್‌ ಬಾಸ್ ಕನ್ನಡ ಸೀಸನ್‌ 12 ನಾನು ನಿರೂಪಣೆ ಮಾಡಲ್ಲ ಎಂದು ಸುದೀಪ್ ಕಳೆದ ವರ್ಷವೇ ಹೇಳಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದರು. ಆದ್ದರಿಂದ ಬಿಗ್‌ ಬಾಸ್‌ ಹೊಸ ಸೀಸನ್ ಹೋಸ್ಟ್ ಯಾರು ಎಂಬ ಚರ್ಚೆ ಶುರುವಾಗಿದೆ. 

3 /8

ಸುದೀಪ್ ಕೆಲವೊಂದಿಷ್ಟು ಕಂಡಿಷನ್‌ಗಳನ್ನು ಹಾಕಿ ಬಿಗ್‌ ಬಾಸ್ ಕನ್ನಡ ಸೀಸನ್‌ 12 ರ ನಿರೂಪಣೆಗೆ ಒಪ್ಪಿಕೊಂಡಿದ್ದಾರೆ ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಈ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

4 /8

ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿ ಸಂದರ್ಶನದಲ್ಲಿ ನಟ ಸುದೀಪ್ ಬಿಗ್‌ ಬಾಸ್ ಕನ್ನಡ ಸೀಸನ್ 12 ರ ನಿರೂಪಣೆ ಬಗ್ಗೆ ಮಾತನಾಡಿದ್ದಾರೆ.

5 /8

"ಈ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ, ಚರ್ಚೆ ಇದೆ. ಊಹಾಪೋಹಗಳಿವೆ. ಯಾವ ವೇದಿಕೆಯಲ್ಲಿ ಉತ್ತರಗಳ ಸಮೇತ ನಾನು ಅದನ್ನು ಹೇಳ್ತಿನೋ, ಯಾಕೆ, ಏನೆಲ್ಲಾ ಆಯ್ತು ಎಂದು. ಆಗ ಅದಕ್ಕೆ ಸರಿಯಾದ ಆರಂಭ, ಅಂತ್ಯ ಸಿಗುತ್ತದೆ" ಎಂದಿದ್ದಾರೆ.

6 /8

"ಇವತ್ತು ಏನೇ ಮಾತನಾಡಿದರೂ ಅದು ಅರ್ಧಬಂರ್ಧ ಟಾಪಿಕ್ ಆಗುತ್ತೆ. ಎಲ್ಲಾ ಕ್ಲಿಯರ್ ಆದಮೇಲೆ ಮಾತಾಡ್ತೀನಿ" ಎಂದು ಸುದೀಪ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ನಿರೂಪಣೆ ಬಗ್ಗೆ ಹೇಳಿದ್ದಾರೆ.

7 /8

ಏನೇನು ಊಹಾಪೋಹ ಇದ್ಯೋ ಎಲ್ಲಾ ನಿಜ ಎಂದುಕೊಳ್ಳಿ. ಇದರಲ್ಲಿ ಕೊಂಚ ಸತ್ಯ ಇದೆ. ಕೊಂಚ ವಾಸ್ತವಕ್ಕೆ ದೂರ ಇದೆ. ಸಮಯ ಬಂದಾಗ ನಾನು ಉತ್ತರಿಸುತ್ತೇನೆ" ಎಂದು ಸುದೀಪ್ ಹೇಳಿದ್ದಾರೆ. 

8 /8

ಅಕ್ಟೋಬರ್ ಕೊನೆಗೆ ಬಿಗ್‌ ಬಾಸ್ ಕನ್ನಡ ಹೊಸ ಸೀಸನ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಹೊಸ ಸೀಸನ್‌ನ ಸಂಭಾವ್ಯ ಸ್ಪರ್ಧಿಗಳ ಹೆಸರು ಕೂಡ ವೈರಲ್‌ ಆಗುತ್ತಿದೆ.