ಕಪ್ಪಾಗಿ, ತೆಳ್ಳಗೆ ಕೋಲಿನಂತಿದ್ದೀಯಾ.. ಎಂದವರೇ ಇಂದು ಈ ಚೆಲುವೆಯನ್ನು ನೋಡೋಕೆ ವರ್ಷಗಟ್ಟಲೇ ಕಾಯಬೇಕು..! ಯಾರು ಈ ಸುಂದರಿ..?

Anasuya Bharadwaj : ಚಿತ್ರರಂಗದಲ್ಲಿ ಅನೇಕ ನಾಯಕರು ಮತ್ತು ನಾಯಕಿಯರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಾಕಷ್ಟು ಶ್ರಮವಹಿಸಿ ಇಂದು ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಈ ಪೈಕಿ ತೆಳ್ಳಗೆ, ಕಪ್ಪಗಿದ್ದ ಈ ಚೆಲುವೆ ಇದೀಗ ಸ್ಟಾರ್‌ ಹೀರೋಯಿನ್‌.. ಯಾರಿವಳು..? ಬನ್ನಿ ನೋಡೋಣ..

1 /8

ವೃತ್ತಿಜೀವನದ ಆರಂಭದಲ್ಲಿ ಸಹ-ಪಾತ್ರಗಳನ್ನು ನಿರ್ವಹಿಸಿದ ಈ ಚೆಲುವೆ, ಇದೀಗ ಬಹುಬೇಡಿಕೆಯ ನಟಿ. ಪ್ಯಾನ್‌ ಇಂಡಿಯಾ ಲೆವೆಲ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

2 /8

ಸಿನಿಮಾಗಳ ಜೊತೆ ವೆಬ್‌ ಸರಣಿಯಲ್ಲಿಯೂ ಬ್ಯುಸಿಯಾಗಿರುವ ನಟಿಯ ಕಳೆ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಅಗುತ್ತಿದೆ.

3 /8

ಈಕೆ ಬೇರೆ ಯಾರೂ ಅಲ್ಲ, ನಿರೂಪಕಿ ಕಮ್ ನಟಿ ಅನಸೂಯಾ. ಅನಸೂಯಾ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸುದ್ದಿ ವಾಚಕಿಯಾಗಿ ಕೆಲಸ ಮಾಡಿದರು.

4 /8

ಅದಾದ ನಂತರ ನಿರೂಪಕಿಯಾದರು ಮತ್ತು ಅನೇಕ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.. ಜಬರ್ದಸ್ತ್ ಎಂಬ ಹಾಸ್ಯ ಕಾರ್ಯಕ್ರಮದ ಮೂಲಕ ಅವರು ಬಹಳ ಜನಪ್ರಿಯರಾದರು.  

5 /8

ಈ ಶೋನ ನಂತರ ಅನಸೂಯಾ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಉತ್ತಮ ಕ್ರೇಜ್ ಗಳಿಸಿದರು. ಸುಕುಮಾರ್ ಮತ್ತು ರಾಮ್ ಚರಣ್ ನಟಿಸಿದ ರಂಗಸ್ಥಳಂ ಚಿತ್ರದ ಮೂಲಕ ಮುನ್ನೆಲೆಗೆ ಬಂದರು.  

6 /8

ಇದರೊಂದಿಗೆ, ಈ ಗ್ಲಾಮರ್‌ ಗೊಂಬೆಗೆ ತೆಲುಗಿನಲ್ಲಿ ಸರಣಿ ಆಫರ್‌ಗಳು ಬಂದವು. ಈ ಹಿಂದೆ ಎನ್‌ಟಿಆರ್‌ ನಾಯಕನಾಗಿ ನಟಿಸಿದ ನಾಗ ಚಿತ್ರದಲ್ಲಿ ಜೂನಿಯರ್ ಆರ್ಟಿಸ್ಟ್‌ ಆಗಿಯೂ ಅನಸೂಯಾ ನಟಿಸಿದ್ದರು.   

7 /8

ಇತ್ತೀಚೆಗೆ ನಟಿ ಸುಕುಮಾರ್‌ ನಿರ್ದೇಶನದ ಪುಷ್ಪಾ 2 ಸಿನಿಮಾದಲ್ಲಿ ನಟ ಸುನಿಲ್ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪುಷ್ಪಾ ಸಿಕ್ವೇಲ್‌ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ ಜನಪ್ರೀಯರಾದರು.  

8 /8

ಪ್ರಸ್ತುತ, ಅನಸೂಯಾ, ತೆಲುಗಿನಲ್ಲಿ ಸ್ಟಾರ್ ಹೀರೋ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.. ಇದೀಗ ನಟಿಯ ಹಳೆ ಫೋಟೋ ನೆಟ್ಟಿಗರ ಗಮನಸೆಳೆಯುತ್ತಿದೆ.