Honey Rose : ತೆಲುಗು ಹಿರಿಯ ನಟ ಬಾಲಕೃಷ್ಣ ನಟಿಸಿರುವ ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಸೌತ್ ಸಿನಿರಂಗದಲ್ಲಿ ಮುನ್ನೆಲೆಗೆ ಬಂದ ಹಾಟ್ ಬ್ಯೂಟಿ ಹನಿರೋಸ್ ಪಡ್ಡೆ ಹುಡುಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಮಲಯಾಳಂ ಚಿತ್ರರಂಗದ ಈ ಸುಂದರಿಯ ಕುರಿತು ನಟಿಯೊಬ್ಬರು ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.
ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಹಾಟ್ ಬ್ಯೂಟಿ ಹನಿರೋಸ್ ಸೌತ್ ಸಿನಿ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದರು. ಮಲಯಾಳಿ ಸುಂದರಿ ಈ ಹಿಂದೆ ಕನ್ನಡ ಸಿನಿಮಾ ಅಜಂತಾದಲ್ಲಿ ಕಾಣಿಸಿಕೊಂಡಿದ್ದರು.
ಹನಿ ರೋಸ್ ಮಲಯಾಳಂನಲ್ಲಿ ಬಹಳ ಜನಪ್ರಿಯ ನಟಿ. ಸದ್ಯ ಬಹಳ ದಿನಗಳ ನಂತರ ಹನಿ 'ರೇಚೆಲ್' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಸಿನಿಮಾ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಸಿನಿಮಾಗಳ ಹೊರತಾಗಿ, ಈ ಸುಂದರಿ ಸಾಮಾಜಿಕ ಮಾಧ್ಯಮದಲ್ಲೂ ತುಂಬಾ ಸಕ್ರಿಯರಾಗಿದ್ದಾರೆ. ಹನಿ ರೋಸ್ ಹಂಚಿಕೊಳ್ಳುವ ಎಲ್ಲಾ ಫೋಟೋಗಳು ಸದ್ದು ಮಾಡುತ್ತಿವೆ.
ಸಿನಿಮಾಗಳಿಗಿಂತ ಶಾಪಿಂಗ್ ಮಾಲ್ ಉದ್ಘಾಟನೆಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಈ ಚೆಲುವೆ ವಿರುದ್ಧ ಇತ್ತೀಚೆಗೆ ನಟಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಹನಿ ರೋಸ್ ಬಗ್ಗೆ ಮಾತನಾಡಿರುವ ನಟಿ ಫರಾ ಶಿಬಿಲಾ, ಪ್ರತಿಭೆಯನ್ನು ನಂಬಬೇಕು, ಆದರೆ ದೇಹವನ್ನು ನಂಬಬಾರದು. ಹನಿ ರೋಸ್ ತನ್ನ ದೇಹವನ್ನು ಪ್ರದರ್ಶಿಸುವ ಮೂಲಕ ಹಣ ಸಂಪಾದಿಸುತ್ತಿದ್ದೇನೆ ಎಂದು ಹೇಳಿದರು.
ನಾನು ಹನಿರೋಸ್ ಡ್ರೆಸ್ಸಿಂಗ್ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಫೋಟೋ ಶೂಟ್ ಸಮಯದಲ್ಲಿ ಅವಳು ವಿವಿಧ ಭಂಗಿಗಳಲ್ಲಿ ಪೋಸ್ ನೀಡುತ್ತಾಳೆ. ಅವರೇ ಆ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಯೊಬ್ಬರೂ ತಮ್ಮ ದೇಹಗಳನ್ನು ಪ್ರದರ್ಶಿಸುತ್ತಿದ್ದಾರೆ.. ಹನಿರೋಸ್ ಕೂಡ ಹಾಗೆಯೇ ಮಾಡುತ್ತಿದ್ದಾಳೆಂದು ಎಂದು ನಟಿ ಆರೋಪಿಸಿದರು.
ಹನಿರೋಸ್ ಮುಗ್ಧಳಲ್ಲ. ಅವಳಿಗೆ ಎಲ್ಲವೂ ತಿಳಿದಿದೆ. "ನನ್ನ ಅಭಿಪ್ರಾಯದಲ್ಲಿ, ನಿಮ್ಮ ದೇಹವನ್ನು ಪ್ರದರ್ಶಿಸುವ ಮೂಲಕ ಹಣ ಸಂಪಾದಿಸುವುದು ತಪ್ಪು" ಎಂದು ಫರಾ ಹೇಳಿದರು. ಇದಕ್ಕೆ ಹನಿ ರೋಸ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.