Actress Kushboo : ನಟಿ ಖುಷ್ಬೂ ಸುಂದರ್ ಸದ್ಯ ರಾಜಕೀಯ ರಂಗದಲ್ಲಿ ಮಿಂಚುತ್ತಿದ್ದಾರೆ. ನಟಿ ತಮ್ಮ ಜೀವನದಲ್ಲಾದ ಕರಾಳ ಘಟನೆಯೊಂದರ ಬಗ್ಗೆ ತಿಳಿಸಿದ್ದಾರೆ.
1/8ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿರುವ ನಟಿ ಖುಷ್ಬೂ ಸುಂದರ್, ಗಟ್ಟಿಯಾಗಿ ಬಾಳುವುದು ಹೇಗೆ ಎಂಬುದಕ್ಕೆ ನಾನು ಉದಾಹರಣೆಯಾಗಲು ಬಯಸುತ್ತೇನೆ.
2/8ಅಪ್ರಾಪ್ತೆಯಾಗಿದ್ದಾಗ ತನ್ನ ತಂದೆ ತನ್ನ ಮೇಲೆ ದೌರ್ಜನ್ಯ ಎಸಗಿದ್ದರು ಎಂದು ನಟಿ ಖುಷ್ಬೂ ಸುಂದರ್ ಹೇಳಿದ್ದರು.
3/8ಮಹಿಳೆಯರು ತಾವು ಅನುಭವಿಸಿದ ವಿಷಯಗಳ ಬಗ್ಗೆ ಮಾತನಾಡಬೇಕು. ನನ್ನ ಜೀವನದಲ್ಲಿ ನಡೆದ ಕರಾಳ ಸಂಗತಿ ಹೇಳಲು ನಾಚಿಕೆ ಪಡಬಾರದು ಎಂದು ಹೇಳಿದ್ದರು.
4/8ಖುಷ್ಬೂ ಸುಂದರ್ ಇತ್ತೀಚೆಗೆ ತಮ್ಮ ಬಾಲ್ಯದ ಭಯಾನಕ ಅನುಭವಗಳ ಬಗ್ಗೆ ಹಂಚಿಕೊಂಡಿದ್ದಾರೆ. 8 ರಿಂದ 15 ನೇ ವಯಸ್ಸಿನವರೆಗೆ ತಂದೆಯಿಂದಲೇ ಲೈಂಗಿಕ ಕಿರುಕುಳ ಅನುಭವಿಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ.
5/8ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಖುಷ್ಬೂ ಸುಂದರ್ ತಮ್ಮ ಆಘಾತಕಾರಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
6/8ನಾನು ಮಾತನಾಡಲು ಹಲವು ವರ್ಷಗಳನ್ನು ತೆಗೆದುಕೊಂಡಿದ್ದೇನೆ. ಮಹಿಳೆಯರು ಅದರ ಬಗ್ಗೆ ಮಾತನಾಡಬೇಕು ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
7/8ಖುಷ್ಬೂ ದಕ್ಷಿಣ ಭಾರತದ ಚಿತ್ರರಂಗದ ಪ್ರಸಿದ್ಧ ನಟಿಯರಲ್ಲಿ ಒಬ್ಬರು. 2010ರಲ್ಲಿ ರಾಜಕೀಯಕ್ಕೆ ಕಾಲಿಟ್ಟರು.
8/8ಅವರು 2014 ರವರೆಗೆ ಡಿಎಂಕೆಯಲ್ಲಿಯೇ ಇದ್ದರು, ನಂತರ 2014 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. 2020 ರಲ್ಲಿ ಬಿಜೆಪಿ ಸೇರಿದರು.