ಬಾಲಿವುಡ್ ಇತಿಹಾಸದಲ್ಲಿ, ಕೆಲವು ನಟಿಯರು ತಮ್ಮ ಸೌಂದರ್ಯ ಮತ್ತು ಕಲಾತ್ಮಕ ಚಿತ್ರಗಳ ಮೂಲಕ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತಾರೆ. ಆದರೆ, ಕೆಲವರು ಕೇವಲ ಸಿನಿಮಾ ಗಳ ಮೂಲಕ ಮಾತ್ರವಲ್ಲದೆ ಜಾಹೀರಾತುಗಳ ಮೂಲಕವೂ ಇಡೀ ದೇಶದ ಗಮನ ಸೆಳೆದಿದ್ದಾರೆ.
1/5ಲೀಲಾ ಚಿತ್ನಿಸ್ ಅವರು ಭಾರತೀಯ ಚಿತ್ರರಂಗದಲ್ಲಿ ಕೇವಲ ನಾಯಕಿಯಾಗಿ ಮಾತ್ರವಲ್ಲ, ಲಕ್ಸ್ ನ ಮೊದಲ ಅಂಬಾಸಿಡರ್ ಆಗಿಯೂ ಜನಪ್ರಿಯತೆಯನ್ನು ಕಂಡವರು.
2/51909ರ ಸೆಪ್ಟೆಂಬರ್ 9ರಂದು ಧಾರವಾಡದ ಮರಾಠಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಲೀಲಾ ಚಿತ್ನಿಸ್, ತಂದೆಯಾದ ಇಂಗ್ಲೀಷ್ ಸಾಹಿತ್ಯದ ಪ್ರಾಧ್ಯಾಪಕರ ಪ್ರಗತಿಶೀಲ ಚಿಂತನೆಯಿಂದ ಬೆಳೆದರು. ಪದವಿ ಪೂರೈಸಿದ ನಂತರ, ಅವರು 'ನಾಟ್ಯ ಮನ್ವಂತರ್' ಎಂಬ ಪ್ರಗತಿಪರ ನಾಟಕ ತಂಡದಲ್ಲಿ ಸಕ್ರಿಯರಾಗಿದ್ದರು.
3/5ತದನಂತರ, ತಮ್ಮದೇ ಆದ ರೆಪರ್ಟರಿಯನ್ನು ಸ್ಥಾಪಿಸಿದ ಅವರು, 1934ರಲ್ಲಿ 'ಉಸ್ನಾ ನವ್ರಾ' ಮತ್ತು 'ಉದ್ಯಚಾ ಸಂಸಾರ್' ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು
4/5ಬ್ರಹ್ಮ ಸಮಾಜದ ತತ್ವಗಳಿಂದ ಪ್ರಭಾವಿತರಾದ ಲೀಲಾ, 16ನೇ ವಯಸ್ಸಿನಲ್ಲಿ ಕಮ್ಯುನಿಸ್ಟ್ ಚಳವಳಿಯ ಸಕ್ರಿಯ ಕಾರ್ಯಕರ್ತರಾದ ಡಾ. ಗಜಾನನ್ ಯಶವಂತ್ ಚಿತ್ನಿಸ್ ಅವರನ್ನು ಮದುವೆಯಾದರು.
5/5ಪ್ರಭಾತ್ ಪಿಕ್ಚರ್ಸ್, ರಂಜಿತ್ ಮೂವಿಟೋನ್ ಮತ್ತು ಬಾಂಬೆ ಟಾಕೀಸ್‌ನಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅವರು, 1939ರ 'ಕಂಗನ್' ಚಿತ್ರದಲ್ಲಿ ಹಿಂದು ಪೂಜಾರಿಯ ಮಗಳಾಗಿ, ಜಮೀನ್ದಾರನ ಮಗನನ್ನು ಪ್ರೀತಿಸುವ ಪಾತ್ರದ ಮೂಲಕ ಸಾಮಾಜಿಕ ಕಟ್ಟುಪಾಡುಗಳಿಗೆ ಎದುರಾದರು. ಈ ಚಿತ್ರ ಆ ಕಾಲದಲ್ಲಿ ಭಾರೀ ಯಶಸ್ಸು ಕಂಡಿತು. 'ಆಜಾದ್' (1940), 'ಬಂಧನ್' (1940), ಮತ್ತು 'ಝೂಲಾ' (1941) ಚಿತ್ರಗಳ ಮೂಲಕ ಲೀಲಾ, ದೇವಿಕಾ ರಾಣಿಯವರನ್ನು ಮೀರಿಸಿ ಬಾಂಬೆ ಟಾಕೀಸ್‌ನ ಪ್ರಮುಖ ನಾಯಕಿಯಾದರು. 1941ರಲ್ಲಿ ಲಕ್ಸ್ ಸೋಪ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ಅವರು, ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ನಟಿಯಾದರು