ಮಗು ಇದೆ ಪ್ಲೀಸ್‌ ಬೇಡ ಅಂದ್ರೂ.. ಆ ಸ್ಟಾರ್‌ ನಟ ನನ್ನ ಬಿಡಲಿಲ್ಲ..! ನಟಿ ಮೀನಾ ಶಾಕಿಂಗ್‌ ಹೇಳಿಕೆ..

Actress Meena : 80 ಮತ್ತು 90 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಗುರುತಿಸಿಕೊಂಡ ನಟಿಯರ ಪೈಕಿ ಮೀನಾ ಕೂಡ ಒಬ್ಬರು. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಸ್ಟಾರ್‌ ಹೀರೋ ಒಬ್ಬರ ಬಗ್ಗೆ ಮಾತನಾಡಿದ್ದು, ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

1 /5

ಮೀನಾ 1995 ರಲ್ಲಿ "ಪುಟ್ನಂಜ" ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದರು.. ಮೊದಲ ಸಿನಿಮಾದ ಮೂಲಕ, ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಕನ್ನಡಿಗರ ಮನಗೆದ್ದ ಈ ಚೆಲುವೆ ಇಂದಿಗೂ ಆ ಸ್ಥಾನವನ್ನು ಕಾಪಾಡಿಕೊಂಡು ಬಂದಿದ್ದಾರೆ.

2 /5

ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಜೊತೆ ದೃಶ್ಯಂ ಚಿತ್ರದಲ್ಲಿ ನಟಿಸಿದ್ದೆ. ನನ್ನ ಮಗಳು ನೈನಿಕಾ ಚಿತ್ರೀಕರಣ ಪ್ರಾರಂಭವಾಗುವ ಮೂರು ತಿಂಗಳ ಮೊದಲು ಜನಿಸಿದಳು. ಮೋಹನ್ ಲಾಲ್ ನನಗೆ ಕರೆ ಮಾಡಿ ದೃಶ್ಯಂ ಸಿನಿಮಾದಲ್ಲಿ ನಟಿಸುವಂತೆ ಒತ್ತಾಯ ಮಾಡಿದರು.. ಆದ್ರೆ ನಾನು ಅವರಿಗೆ ನನ್ನ ಪರಿಸ್ಥಿತಿಯನ್ನು ವಿವರಿಸಿದೆ.

3 /5

ಚಿತ್ರೀಕರಣ ನಡೆದ ಸ್ಥಳ ಸೆಲ್ ಫೋನ್ ಸಿಗ್ನಲ್ ಕೂಡ ಸಿಗದ ಸ್ಥಳವಾಗಿತ್ತು. ಅದು ಒಂದು ಪುಟ್ಟ ಹಳ್ಳಿ. ಮಾತ್ರೆ ಕೊಳ್ಳುವುದಕ್ಕೂ ಬಹಳ ದೂರ ಹೋಗಬೇಕು. ಹಾಗಾಗಿಯೇ ಆ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ ನಾನು ಅದರಲ್ಲಿ ನಟಿಸಬೇಕು ಎಂದು ಮೋಹನ್ ಲಾಲ್ ಹೇಳುತ್ತಲೇ ಇದ್ದರು. ನಾನು ಆಗಲ್ಲ ಅಂತ ಹಠ ಹಿಡಿದೆ.

4 /5

ಆದರೆ, ಮೋಹನ್‌ ಲಾಲ್‌ ನೀವೇ ಆ ಪಾತ್ರ ಮಾಡಿ ಎಂದು ಹಠ ಹಿಡಿದು ಕೊನೆಗೂ ನಾನು ನಟಿಸುವಂತೆ ಮಾಡಿದರು. ಚಿತ್ರ ಬಿಡುಗಡೆಯಾದ ನಂತರ ದೊಡ್ಡ ಹಿಟ್ ಆಯಿತು. ಆಗ ನನಗೆ ನಾನು ಎಷ್ಟು ದೊಡ್ಡ ಆಫರ್‌ ಮಿಸ್‌ ಮಾಡಿಕೊಳ್ಳುತ್ತಿದ್ದೆ ಅಂತ ಅರ್ಥವಾಯಿತು ಎಂದರು ಮೀನಾ..

5 /5

ದೃಶ್ಯಂ ಚಿತ್ರವನ್ನು ಜಿತು ಜೋಸೆಫ್ ನಿರ್ದೇಶಿಸಿದ್ದಾರೆ. 5 ಕೋಟಿ, ಚಿತ್ರ 75 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಸರಳ ಚಿತ್ರಕಥೆಯೊಂದಿಗೆ ಫ್ಯಾಮಿಲಿ ಸೆಂಟಿಮೆಂಟ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರ ಎಲ್ಲರನ್ನೂ ಆಕರ್ಷಿಸಿದೆ. ತಮಿಳು, ಕನ್ನಡ ಮತ್ತು ತೆಲುಗಿನಲ್ಲೂ ರಿಮೇಕ್ ಆಗಿತ್ತು.