ಸ್ಯಾಂಡಲ್‌ವುಡ್‌ನ ಮೋಸ್ಟ್ ಬ್ಯೂಟಿಫುಲ್ ಹೀರೋಯಿನ್ ಹಾಗೂ ಕಾಂತಾರ ಫ್ರಿಕ್ವೇಲ್ ಮೂವಿಯ ಕನಕವತಿ ರುಕ್ಮಿಣಿ ವಸಂತ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಸಿನಿಮಾ ಸೆಲೆಬ್ರೆಟಿಸ್ ಸೇರಿದಂತೆ ಅಭಿಮಾನಿಗಳು ಕೂಡ ನಟಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಇವತ್ತು ರುಕ್ಮಿಣಿ ವಸಂತ್ ಅವರ ಹುಟ್ಟು ಹಬ್ಬ. ಕಾಂತಾರ ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯದ ಬಳಿಕ ಅವರಿಗೆ ಆಫರ್‌ಗಳು ಹೆಚ್ಚು ಬರುತ್ತಿವೆಯಂತೆ. ಮಣಿರತ್ನಂ ಮೂವಿಯಲ್ಲಿ ರುಕ್ಮಿಣಿ ಅವರಿಗೆ ಅವಕಾಶ ಸಿಕ್ಕಿದೆ ಎನ್ನಲಾಗಿದೆ. ಹಾಗೇ ಜೂನಿಯರ್ ಎನ್‌ಟಿಆರ್, ಪ್ರಶಾಂತ್ ನೀಲ್ ಕಾಂಬೀನೇಷನ್‌ನ ಡ್ರ್ಯಾಗನ್ ಮೂವಿಯಲ್ಲೂ ಬರ್ತ್‌ಡೇ ಗರ್ಲ್ ಇದ್ದಾರಂತೆ.
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಬಾನದಾರಿಯಲ್ಲಿ, ಶ್ರೀಮುರುಳಿ ಜೊತೆ ಬಘೀರ್, ರಕ್ಷಿತ್ ಶೆಟ್ಟಿ ಅವರೊಂದಿಗೆ ಸಪ್ತ ಸಾಗರದಾಚೆ ಎಲ್ಲೋ, ಶಿವರಾಜ್ ಕುಮಾರ್ ಜೊತೆ ಬೈರತಿ ರಣಗಲ್ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರು ಅಭಿನಯ ಮಾಡಿದ್ದಾರೆ. ರುಕ್ಮಿಣಿ ವಸಂತ್ ಅವರಿಗೆ ಎಳೆನೀರು ಎಂದರೆ ಹೆಚ್ಚು ಇಷ್ಟ ಪಡುತ್ತಾರಂತೆ.
ಕನ್ನಡ ಚಿತ್ರರಂಗದ ಬ್ಯೂಟಿ ರುಕ್ಮಿಣಿ ವಸಂತ್ ಅವರು ಐಸ್‌ಕ್ರೀನ್ ಹೆಚ್ಚು ಹೆಚ್ಚು ಇಷ್ಟ ಪಡುತ್ತಾರೆ. ಕನ್ನಡ ಚಿತ್ರರಂಗಕ್ಕೆ ಬಿರ್‌ಬಲ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಅವರು ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲೂ ಅಭಿನಯ ಮಾಡಿದ್ದಾರೆ. ಯಶ್ ಅಭಿನಯದ ಟಾಕ್ಸಿಕ್‌ನಲ್ಲೂ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ.
ರುಕ್ಮಿಣಿ ವಸಂತ್ ಅವರು ಟ್ರಿಪ್ ಹೋಗುವುದನ್ನು ಹೆಚ್ಚು ಇಷ್ಟ ಪಡುತ್ತಾರೆ. ಒಮ್ಮೆ ದೇವಾಲಯವೊಂದಕ್ಕೆ ಭೇಟಿ ನೀಡಿದ್ದಾಗ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದರು. ಇತ್ತೀಚೆಗೆ ತೆರೆ ಕಂಡ ಕಾಂತಾರದಲ್ಲಿ ಅದ್ಭುತವಾಗಿ ಅಭಿನಯ ಮಾಡಿದ್ದ ರುಕ್ಮಿಣಿ ಅವರು ಫ್ಯಾನ್ಸ್‌ಗೆ ತುಂಬಾ ಹತ್ತಿರವಾಗಿದ್ದಾರೆ. ಇನ್ನು ರುಕ್ಮಿಣಿ ಅವರಿಗೆ ಇದು 29ನೇ ಬರ್ತ್‌ಡೇ ಆಗಿದೆ.
ರುಕ್ಮಿಣಿ ವಸಂತ್ ಅವರು ಕಾರ್ಯಕ್ರಮದವೊಂದರಲ್ಲಿ ಮಾತನಾಡುವಾಗ ಯಾವುದೋ ಒಂದು ವಿಷಯಕ್ಕೆ ಸಂತಸ ವ್ಯಕ್ತಪಡಿಸಿರುವ ಫೋಟೋ ಇದು. ಕನ್ನಡ ಮಾತ್ರವಲ್ಲ, ತಮಿಳು ಸಿನಿಮಾದಲ್ಲೂ ರುಕ್ಮಿಣಿ ವಸಂತ್ ಅಭಿನಯ ಮಾಡಿದ್ದಾರೆ. ವಿಜಯ್ ಸೇತುಪತಿ ಹಾಗೂ ಶಿವಕಾರ್ತಿಕೇಯನ್ ಜೊತೆ ರುಕ್ಮಿಣಿ ವಸಂತ್ ಮೂವಿ ಮಾಡಿದ್ದಾರೆ.