Actress life : ಸೌಂದರ್ಯ, ನಟನಾ ಪ್ರತಿಭೆ, ತಮ್ಮ ನೃತ್ಯದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ನಟಿಯೊಬ್ಬರ ಕುರಿತು ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ.. ಇನ್ನೂ ಮದುವೆಯಾಗದ ನಟಿ ಇದೀಗ ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.. ಅಸಲಿಗೆ ಯಾರು ಆ ಹೀರೋಯಿನ್..? ಏನ್ ಕಥೆ ಬನ್ನಿ ನೋಡೋಣ..
ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಜನಪ್ರಿಯ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ ಶ್ರೀಲೀಲಾ.. ತಮ್ಮ ನಟನೆಯಿಂದ ಮಾತ್ರವಲ್ಲದೆ ಅದ್ಭುತ ನೃತ್ಯ ಕೌಶಲ್ಯದಿಂದಲೂ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ.
ಅಭಿಮಾನಿಗಳ ಮನಸ್ಸಿನಲ್ಲಿ ಆಳವಾಗಿ ನೆಲೆಯೂರಿರುವ ಈ ನಟಿ ಒಟ್ಟು 12 ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. "ಪುಷ್ಪ" ಚಿತ್ರದಲ್ಲಿ "ಕಿಸ್" ಹಾಡಿಗೆ ಸುಂದರವಾಗಿ ನೃತ್ಯ ಮಾಡುವ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಕನ್ನಡದ ಸುಂದರಿ ಮಿಂಚುತ್ತಿದ್ದಾಳೆ.
ಕಿಸ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸಿನಿ ಜರ್ನಿ ಪ್ರಾರಂಭಿಸಿದ ನಟಿ ಇದೀಗ ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾಳೆ. ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ಮದುವೆಯಾಗ ಶ್ರೀಲೀಲಾ ಎರಡು ಮಕ್ಕಳ ತಾಯಿಯಾದದ್ದು ಹೇಗೆ? ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಹುಟ್ಟಿಕೊಂಡಿದೆ. ಕಾರಣ ತಿಳಿದರೆ ನೀವು ನಿಜವಾಗಿಯೂ ಹೆಮ್ಮೆ ಪಡುತ್ತೀರಿ..
ಇತ್ತೀಚಿಗೆ ನಟಿ ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿದಾಗ, ಅಲ್ಲಿನ ಅಂಗವಿಕಲ ಮಕ್ಕಳನ್ನು ನೋಡಿ ಕಣ್ಣೀರು ಹಾಕಿದರು. ಆ ಮಕ್ಕಳನ್ನು ನನ್ನ ಸ್ವಂತ ಮಕ್ಕಳಂತೆ ನೋಡಿಕೊಳ್ಳುವ ಬಯಕೆ ವ್ಯಕ್ತಪಡಿಸಿದರು.
ಅದಕ್ಕಾಗಿ ಇಬ್ಬರು ಬಡ ಮತ್ತು ಅಂಗವಿಕಲ ಮಕ್ಕಳನ್ನು ದತ್ತು ತೆಗೆದುಕೊಂಡರು. ಅಲ್ಲದೆ, ಆ ಮಕ್ಕಳಿಗೆ "ಶೋಭಿತಾ" ಮತ್ತು "ಗುರು ಶ್ರೀಲೀಲಾ" ಎಂದು ಹೆಸರಿಸಿದ್ದಾರೆ.
ಅಷ್ಟೇ ಅಲ್ಲ, ಅವರನ್ನು ತನ್ನ ಸ್ವಂತ ಮಕ್ಕಳಂತೆ ನೋಡಿಕೊಳ್ಳುವುದಾಗಿ ನಟಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.. ಈ ಸಂತೋಷದ ಸುದ್ದಿಯನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.