Actress Sridevi sister : ನಟಿ ಶ್ರೀದೇವಿ.. ಯಾರಿಗೆ ಗೊತ್ತಿಲ್ಲ ಹೇಳಿ.. ತಮ್ಮ ಅಮೋಘ ಸೌಂದರ್ಯ ಮತ್ತು ಅದ್ಬುತ ನಟನೆಯ ಮೂಲಕ ಭಾರತೀಯ ಸಿನಿರಂಗದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಅಂದಹಾಗೆ ಶ್ರೀದೇವಿಯವರ ತಂಗಿಯನ್ನು ಎಂದಾದರೂ ನೀವು ಕಂಡೀರಾ..? ಇಲ್ಲಿದೆ ನೋಡಿ.. ವೈರಲ್ ಫೋಟೋ..
ನಟಿ ಶ್ರೀದೇವಿ ಒಂದು ಕಾಲದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೀರ್ತಿ ಪತಾಕೆ ಹಾರಿಸಿ, ಸೂಪರ್ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು..
ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಲೇ ಸೌತ್ ಸಿನಿರಂಗಕ್ಕೆ ಕಾಲಿಟ್ಟು, ನಂತರ ಭಾರತದಾದ್ಯಂತ ಪ್ರಸಿದ್ಧರಾದರು. ಇಂದಿಗೂ ಈಕೆ 90ರ ದಶಕದ ಸಿನಿ ಅಭಿಮಾನಿಗಳ ನೆಚ್ಚಿನ ತಾರೆ.
ಫೆಬ್ರವರಿ 24, 2018 ರಂದು ದುಬೈನ ಹೋಟೆಲ್ ಕೋಣೆಯಲ್ಲಿ ಶ್ರೀದೇವಿಯವರು ಶವವಾಗಿ ಪತ್ತೆಯಾಗಿದ್ದರು. ಇದು ಭಾರತೀಯ ಚಲನಚಿತ್ರೋದ್ಯಮವನ್ನು ತೀವ್ರವಾಗಿ ಆಘಾತಗೊಳಿಸಿತು.
ನಟಿ ಶ್ರೀದೇವಿ ನಿಧನರಾಗಿ ಹಲವು ವರ್ಷಗಳೇ ಕಳೆದರೂ ಯಾವುದರೊಂದು ವಿಚಾರವಾಗಿ ಅವರ ಹೆಸರು ಟ್ರೆಂಡ್‌ನಲ್ಲಿ ಇರುತ್ತದೆ..
ಶ್ರೀದೇವಿಯವರ ಮೊದಲ ಮಗಳು ಜಾನ್ವಿ ಕಪೂರ್ ತಮ್ಮ ತಾಯಿಯಂತೆಯೇ ಸೌಂದರ್ಯವತಿ, ಇದೀಗ ಈಕೆಯೂ ಸ್ಟಾರ್ ಹೀರೋಯಿನ್..
ನೀವು ಬಹುಶಃ ನಟಿ ಶ್ರೀದೇವಿಯವರ ಪತಿ ಮತ್ತು ಪುತ್ರಿಯರನ್ನು ಬಹಳಷ್ಟು ನೋಡಿರಬಹುದು, ಆದರೆ ನೀವು ಬಹುಶಃ ಅವರ ತಂಗಿ ಶ್ರೀಲತಾಳನ್ನು ನೋಡಿಲ್ಲ ಅನಿಸುತ್ತೆ.
ನಟಿ ಶ್ರೀದೇವಿ ತಮ್ಮ ತಂಗಿ ಶ್ರೀಲತಾ ಜೊತೆಗಿರುವ ಸುಂದರ ಫೋಟೋವೊಂದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಫೋಟೋವನ್ನು ನೋಡಿದ ಜನರು ಅಕ್ಕ-ತಂಗಿ ಇಬ್ಬರೂ ಕ್ಯೂಟಾಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.