Budhaditya Lakshmi Narayana Rajyoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಮಂಗಳನ ವೃಶ್ಚಿಕ ರಾಶಿಯಲ್ಲಿ ಸೂರ್ಯ, ಶುಕ್ರ ಗ್ರಹಗಳ ಜೊತೆ ಬುಧನೂ ಸೇರಿದ್ದು ಒಮ್ಮೆಗೆ ಲಕ್ಷ್ಮಿ ನಾರಾಯಣ ರಾಜಯೋಗದ ಜೊತೆಗೆ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಿದೆ. ಇದರಿಂದ ಕೆಲವು ರಾಶಿಯವರ ಬದುಕಿನಲ್ಲಿ ಡಬಲ್ ಜಾಕ್‌ಪಾಟ್ ಎಂತಲೇ ಹೇಳಲಾಗುತ್ತಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಡಿಸೆಂಬರ್‌ನಲ್ಲಿ ಬುದ್ದಿ, ತರ್ಕ, ವೃತ್ತಿಯ ಅಂಶ ಎನ್ನಲಾಗುವ ಬುಧ, ಆತ್ಮಕಾರಕ ಸೂರ್ಯ, ಧನಕಾರಕ ಶುಕ್ರ ಈ ಮೂರು ಗ್ರಹಗಳು ಕೂಡ ಮಂಗಳ ಅಧಿಪತ್ಯದ ವೃಶ್ಚಿಕ ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದಾರೆ. ಇದರಿಂದ ಬುಧಾದಿತ್ಯ, ಲಕ್ಷ್ಮಿ ನಾರಾಯಣ ರಾಜಯೋಗಗಳು ಸೃಷ್ಟಿಯಾಗಿವೆ.
ವೃಶ್ಚಿಕ ರಾಶಿಯಲ್ಲಿ ಬುಧ-ಆದಿತ್ಯ(ಸೂರ್ಯ) ಸಂಯೋಗದಿಂದ ಬುಧಾದಿತ್ಯ ರಾಜಯೋಗ ಸೃಷ್ಟಿಯಾದರೆ, ಅದೇ ರಾಶಿಯಲ್ಲಿ ಬುಧ ಶುಕ್ರ ಯುತಿಯಿಂದ ಲಕ್ಷ್ಮಿನಾರಾಯಣ ಯೋಗ ರಚನೆಯಾಗಿದೆ. ಗಮನಾರ್ಹವಾಗಿ ಸುಮಾರು 100 ವರ್ಷಗಳ ಬಳಿಕ ವೃಶ್ಚಿಕ ರಾಶಿಯಲ್ಲಿ ಒಟ್ಟಿಗೆ ಡಬಲ್ ರಾಜಯೋಗಗಳು ನಿರ್ಮಾಣವಾಗಲಿವೆ.
ವೃಶ್ಚಿಕ ರಾಶಿಯಲ್ಲಿ ಒಟ್ಟಿಗೆ ನಿರ್ಮಾಣವಾಗಿರುವ ಬುಧಾದಿತ್ಯ, ಲಕ್ಷ್ಮಿ ನಾರಾಯಣ ರಾಜಯೋಗದಂತಹ ಡಬಲ್ ರಾಜಯೋಗ ಪರಿಣಾಮ ಮೇಷದಿಂದ ಮೀನ ರಾಶಿಯವರೆಗೆ ಎಲ್ಲಾ ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಆದರೂ, ಈ ಸಮಯದಲ್ಲಿ ಮೂರು ರಾಶಿಯವರಿಗೆ ಜಾಕ್‌ಪಾಟ್ ಎಂತಲೇ ಹೇಳಲಾಗುತ್ತಿದೆ.
ಬುಧಾದಿತ್ಯ, ಲಕ್ಷ್ಮಿ ನಾರಾಯಣ ರಾಜಯೋಗದಿಂದ ಈ ರಾಶಿಯವರ ಬದುಕಿನಲ್ಲಿ ಕೆಟ್ಟ ದಿನಗಳು ಕಳೆದು ಒಳ್ಳೆಯ ದಿನಗಳು ಆರಂಭವಾಗಲಿವೆ. ಕೌಟುಂಬಿಕ ಸುಖವನ್ನು ಅನುಭವಿಸುವಿರಿ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಬರಬಹುದು. ವೃತ್ತಿಯಲ್ಲಿ ಏಳ್ಗೆಯನ್ನು ಕಾಣುವಿರಿ. ವ್ಯವಹಾರದಲ್ಲಿ ಭರ್ಜರಿ ಲಾಭ ಗಳಿಸುವಿರಿ.
ಸ್ವ ರಾಶಿಯಲ್ಲಿಯೇ ಸೂರ್ಯ, ಬುಧ, ಶುಕ್ರರು ನೆಲೆಸಿರುವುದರಿಂದ ಈ ರಾಶಿಯವರಿಗೆ ಜೀವನದಲ್ಲಿ ಯಾವುದೇ ರಂಗದಲ್ಲಿ ಎದುರಾಗಿದ್ದ ಸಮಸ್ಯೆಗಳು ಬಗೆಹರಿಯಲಿವೆ. ಶತ್ರುಗಳು ನಿಮ್ಮಿಂದ ದೂರವಾಗಲಿದ್ದಾರೆ. ಉದ್ಯೋಗದಲ್ಲಿ ಪ್ರಗತಿ, ಉನ್ನತ ಹುದ್ದೆಯನ್ನು ಅಲಂಕರಿಸುವಿರಿ. ಆದಾಯ ಹೆಚ್ಚಳದಿಂದ ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಯಾಗಲಿದೆ. ಮಕ್ಕಳಿಂದ ಸಂತಸದ ಸುದ್ದಿ ಕೇಳುವಿರಿ.
ಬುಧಾದಿತ್ಯ, ಲಕ್ಷ್ಮಿ ನಾರಾಯಣ ರಾಜಯೋಗಗಳ ಪ್ರಭಾವದಿಂದ ಈ ರಾಶಿಯವರ ಬದುಕಿನಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ವೃತ್ತಿಯಲ್ಲಿ ಪ್ರಗತಿಯ ಹೊಸ ಹೊಸ ಅವಕಾಶಗಳನ್ನು ಪಡೆಯುವಿರಿ. ವಿದೇಶ ವ್ಯವಹಾರದಲ್ಲಿ ಭಾರೀ ಲಾಭಾಂಶವನ್ನು ಗಳಿಸುವಿರಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬಗೆಹರಿದು ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.