Navapancham Rajyoga: ಈ ವರ್ಷ ಅಕ್ಟೋಬರ್ 20, 2025ರಂದು ದೀಪಾವಳಿ ಆಚರಣೆ ಇರಲಿದೆ. ಆದಕ್ಕೂ ಮೊದಲು ಶುಕ್ರ ಸಂಚಾರದಲ್ಲಿನ ಬದಲಾವಣೆಯು ಕೆಲವರ ರಾಶಿಯ ಅದೃಷ್ಟವನ್ನು ಹೊಳೆಯುವಂತೆ ಮಾಡಲಿದೆ. ಅವರ ಜೀವನದಲ್ಲಿ ರಾಜವೈಭೋಗದ ಜೀವನವನ್ನು ಅನುಭವಿಸುವರು.
ವೈದಿಕ ಜ್ಯೋತಿಷ್ಯದಲ್ಲಿ ಪ್ರೀತಿ, ಸುಖ-ಸಂಪತ್ತು, ಐಶ್ವರ್ಯಕಾರಕನಾದ ಶುಕ್ರ ಸದ್ಯ ಕನ್ಯಾ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಯುರೇನಸ್ ವೃಷಭ ರಾಶಿಯಲ್ಲಿದ್ದಾನೆ. ಅಕ್ಟೋಬರ್ 14ರಂದು ಸಂಜೆ ಈ ಎರಡೂ ಗ್ರಹಗಳು ಪರಸ್ಪರ 120 ಡಿಗ್ರಿಗಳಲ್ಲಿ ಸಂಧಿಸಲಿದ್ದಾರೆ. ಇದರಿಂದ ನವಪಂಚಮ ರಾಜಯೋಗ ಆರಂಭವಾಗಲಿದೆ.
ದೀಪಾವಳಿಗೂ ಮೊದಲೇ ನಿರ್ಮಾಣವಾಗಲಿರುವ ಶಕ್ತಿಶಾಲಿ ನವಪಂಚಮ ರಾಜಯೋಗವು ಕೆಲವರ ಜೀವನದಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಅವರ ಬದುಕಿನಲ್ಲಿ ಅಪಾರ ಧನ ಸಂಪತ್ತನ್ನು ಕರುಣಿಸಲಿದೆ ಎನ್ನಲಾಗುತ್ತಿದೆ.
ದೀಪಾವಳಿಗೂ ಮೊದಲು ರಚನೆಯಾಗಲಿರುವ ನವಪಂಚಮ ರಾಜಯೋಗದ ಪ್ರಭಾವದಿಂದ ಮೂರು ರಾಶಿಯವರ ಜೀವನದಲ್ಲಿ ಶುಕ್ರದೆಸೆ ಆರಂಭವಾಗಲಿದೆ. ಅದೃಷ್ಟ ಬಂಗಾರದಂತೆ ಹೊಳೆಯಲಿದೆ ಎನ್ನಲಾಗುತ್ತಿದ್ದು, ಆ ಅದೃಷ್ಟದ ರಾಶಿಗಳೆಂದರೆ...
ನವಪಂಚಮ ರಾಜಯೋಗವು ಈ ರಾಶಿಯವರಿಗೆ ಅಪಾರ ಧನ ಸಂಪತ್ತನ್ನು ಕರುಣಿಸಲಿದೆ. ಈ ವೇಳೆ ನಿಮ್ಮ ಕನಸಿನ ಮನೆ ಖರೀದಿಸುವ ಯೋಗವಿದೆ. ವೃತ್ತಿ ಬದುಕಿನಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲ ದೊರೆಯಲಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ.
ನವಪಂಚಮ ರಾಜಯೋಗವು ಈ ರಾಶಿಯವರಿಗೆ ಅದೃಷ್ಟವನ್ನು ಬೆಳಗಲಿದೆ. ಈ ವೇಳೆ ಶುಕ್ರದೆಸೆಯಿಂದ ಹಠಾತ್ ಧನಲಾಭಾದಿಂದ ಖಜಾನೆ ಭರ್ತಿಯಾಗಲಿದೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಲಕ್ ಅಂತಲೇ ಹೇಳಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ.
ಶಕ್ತಿಶಾಲಿ ನವಪಂಚಮ ರಾಜಯೋಗವು ಈ ರಾಶಿಯವರಿಗೆ ಎಲ್ಲಾ ರೀತಿಯಲ್ಲೂ ಅನುಕೂಲಕರ ಸಂದರ್ಭವನ್ನು ಸೃಷ್ಟಿಸಲಿದೆ. ಉನ್ನತ ವಿದ್ಯಾಭ್ಯಾಸ, ಒಳ್ಳೆಯ ಕೆಲಸಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಅವಕಾಶಗಳು ದೊರೆಯಬಹುದು. ರಾಜಕಾರಣಿಗಳಿಗೆ ಶುಭ ಸಮಯ. ಕನಸಿನ ವಾಹನ ಖರೀದಿಸುವ ಭಾಗ್ಯವೂ ಇದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.