ಕ್ರೀಡಾಪಟುವಾಗಿದ್ದರೂ ಡಿವೋರ್ಸ್‌ ಬಳಿಕ ಇಂಥಾ ಸ್ಥಿತಿಗೆ ತಲುಪಿದ್ರು ಸಾನಿಯಾ! ಸಂಗಾತಿ ಕಳೆದುಕೊಂಡವರೊಂದಿಗೆ ಆಸರೆಯಾಗಿ ನಿಂತಿದ್ದು ಈ ನಟಿ..

Sania Mirza life struggles: ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನದ ನಂತರ ತನಗೆ ಏನಾಯಿತು ಎಂದು ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.  

1 /6

ಹೈದರಾಬಾದ್ ನಿವಾಸಿಯಾಗಿರುವ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಆದರೆ, ಆ ನಂತರದ ಅನುಭವಗಳನ್ನು ಬಾಲಿವುಡ್ ನೃತ್ಯ ನಿರ್ದೇಶಕಿ ಫರಾ ಖಾನ್ ಅವರೊಂದಿಗಿನ ಸಂದರ್ಶನದಲ್ಲಿ ಹಂಚಿಕೊಂಡರು.   

2 /6

ಫರಾ ಖಾನ್ ಮತ್ತು ಸಾನಿಯಾ ಮಿರ್ಜಾ ಆಪ್ತ ಸ್ನೇಹಿತರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದ ನಂತರ, ಸಾನಿಯಾ ಮಿರ್ಜಾ ತಮಗೆ ಪ್ಯಾನಿಕ್ ಅಟ್ಯಾಕ್ ಉಂಟಾಗಿದೆ ಎಂದರು.. ಆ ಪರಿಸ್ಥಿತಿಯಲ್ಲಿ ಅವರನ್ನು ನೋಡಿದಾಗ ತನಗೆ ಭಯವಾಯಿತು ಎಂದು ಫರಾ ಹೇಳಿದರು.    

3 /6

ಈ ಸಂದರ್ಶನದಲ್ಲಿ, ʼಆ ಸಮಯದಲ್ಲಿ ನಾನು ಖಂಡಿತವಾಗಿಯೂ ಸಾನಿಯಾ ಮಿರ್ಜಾ ಜೊತೆ ಇರಲು ನಿರ್ಧರಿಸಿದ್ದೆ.. ಅಂದು ಶೂಟಿಂಗ್‌ ಸೆಟ್‌ನಲ್ಲಿದ್ದ ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿರುವಾಗ ಸಾನಿಯಾ ತೀವ್ರ ಆತಂಕಗೊಂಡಿದ್ದರು.. ಇದರಿಂದ ಭಯಬಿದ್ದು ನಾನು ತಕ್ಷಣ ಸಾನಿಯಾ ಬಳಿಗೆ ಓಡಿದೆʼ ಎಂದು ಹೇಳಿದರು.    

4 /6

ʼಸಾನಿಯಾ ಮಿರ್ಜಾಳನ್ನು ನೋಡಿದ ನಂತರ ನೀವು ಯಾಕೆ ಇಷ್ಟೊಂದು ನಡುಗುತ್ತಿದ್ದೀರಿ? ನೀವು ಈ ರೀತಿಯ ಪ್ಯಾನಿಕ್ ಅಟ್ಯಾಕ್ ಅನ್ನು ಮೊದಲು ನೋಡಿಲ್ಲ ಎಂದೆ..ʼ ಎಂದು ಫರಾ ಖಾನ್ ಹೇಳಿದರು.. ಇದೀಗ ಅವರು ಬಹಿರಂಗಪಡಿಸಿದ ಈ ವಿಚಾರಗಳು ಎಲ್ಲೆಡೆ ವೈರಲ್‌ ಆಗುತ್ತಿವೆ..  

5 /6

ಇನ್ನು ಟಾಪ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾದರು. ನಂತರ ಅವರು 2023 ರಲ್ಲಿ ಬೇರ್ಪಟ್ಟರು. ವಿಚ್ಛೇದನದ ಒಂದು ತಿಂಗಳೊಳಗೆ ಶೋಯೆಬ್ ಮಲಿಕ್ ಕೂಡ ಮೂರನೇ ಬಾರಿಗೆ ವಿವಾಹವಾದರು. ಪ್ರಸ್ತುತ, ಸಾನಿಯಾ ತನ್ನ ಮಗನನ್ನು ಒಂಟಿ ತಾಯಿಯಾಗಿ ಬೆಳೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.    

6 /6

ಸಂದರ್ಶನದಲ್ಲಿ, ಸಾನಿಯಾ ಮಿರ್ಜಾ ಒಂಟಿ ತಾಯಿಯ ಅನುಭವಗಳು, ಜವಾಬ್ದಾರಿಗಳು, ತಾಯ್ತನ ಮತ್ತು ಶಿಕ್ಷಣದ ಬಗ್ಗೆ ಮಾತನಾಡಿದ್ದರು.. ತನ್ನ ಜೀವನದ ಅತ್ಯಂತ ಸೂಕ್ಷ್ಮ ಸಮಯದಲ್ಲಿ ಫರಾ ತನ್ನ ಪಕ್ಕದಲ್ಲಿರು ಎಂದು  ತಮ್ಮ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ದರು.. ಸದ್ಯ ಸಾನಿಯಾ ಮಿರ್ಜಾ ತನ್ನ ಮಗನೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದಾರೆ.