ಡಿವೋರ್ಸ್‌ ವದಂತಿ ಬಗ್ಗೆ ಕೊನೆಗೂ ಮೌನಮುರಿದ ಐಶ್ವರ್ಯಾ ರೈ! ಆಡುವವರ ಬಾಯಿಮುಚ್ಚಿಸಿತು ವಿಶ್ವಸುಂದರಿ ಹಂಚಿಕೊಂಡ ʼಪವರ್ಫುಲ್‌ʼ ಪೋಸ್ಟ್‌

Fri, 22 Nov 2024-9:04 pm,

ಕಳೆದ ಕೆಲವು ತಿಂಗಳಿಂದ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಗ್ಗೆ ಅನೇಕ ಊಹಾಪೋಹಗಳು ಅಂತರ್ಜಾಲದಲ್ಲಿ ಹರಡಿಕೊಂಡಿವೆ. ಕೆಲವರು ಅಭಿಷೇಕ್, ಅವರ ಸಹನಟಿ ನಿಮ್ರತ್ ಕೌರ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳುತ್ತಿದ್ದಾರೆ. ಆದರೆ ಇಡೀ ಬಚ್ಚನ್ ಕುಟುಂಬ ಇಂತಹ ನಕಾರಾತ್ಮಕ ವರದಿಗಳ ಬಗ್ಗೆ ತುಟಿ ಬಿಚ್ಚಿಲ್ಲ.

ಇದೀಗ, ಅಭಿಷೇಕ್ ಜೊತೆಗಿನ ವಿಚ್ಛೇದನದ ಬಗ್ಗೆ ವದಂತಿಗಳಿಗೆ ಐಶ್ವರ್ಯಾ ಅಂತಿಮವಾಗಿ ಪ್ರತಿಕ್ರಿಯಿಸಿದ್ದಾರೆ. ನವೆಂಬರ್ 20 ರಂದು, ಮಾಜಿ ವಿಶ್ವ ಸುಂದರಿ ತನ್ನ ತಾಯಿ ವೃಂದಾ ರೈ ಮತ್ತು ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಫೋಟೋ ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಎರಡು ವಿಶೇಷ ಸಂದರ್ಭಗಳಲ್ಲಿ ನೆನಪಿಸಿಕೊಂಡಿದ್ದರು.

 

ಅದರಲ್ಲಿ ಒಂದು ಅವರ ತಂದೆ ಕೃಷ್ಣರಾಜ್ ರೈ ಅವರ ಜನ್ಮದಿನ ಮತ್ತು ಎರಡನೆಯದು ಆರಾಧ್ಯ ಜನ್ಮದಿನ. ಆರಾಧ್ಯ ನವೆಂಬರ್ 16 ರಂದು 13 ನೇ ವರ್ಷಕ್ಕೆ ಕಾಲಿಟ್ಟಿದ್ದರು. ಈ ಸಂದರ್ಭದಲ್ಲಿ ತೆಗೆದ ಫೋಟೋಗೆ ಅದ್ಭುತ ಕ್ಯಾಪ್ಶನ್‌ ನೀಡಿದ್ದ ನಟಿ, "ನನ್ನ ಪ್ರೀತಿಯ ಅಪ್ಪ ಮತ್ತು ನನ್ನ ಪ್ರೀತಿಯ ಆರಾಧ್ಯಗೆ ಹುಟ್ಟುಹಬ್ಬದ ಶುಭಾಶಯಗಳು, ನನ್ನ ಹೃದಯ, ನನ್ನ ಆತ್ಮ, ಎಂದೆಂದಿಗೂ ನೀವೇ.. ಎಲ್ಲವನ್ನು ಮೀರಿದ ಪ್ರೀತಿಗೆ ಜನ್ಮದಿನದ ಶುಭಾಶಯಗಳು" ಎಂದು ಬರೆದಿದ್ದಾರೆ.

 

ಇನ್ನೊಂದೆಡೆ ಈ ಸಂದರ್ಭದಲ್ಲಿ ಒಂದಷ್ಟು ಫೋಟೋಗಳನ್ನು ಐಶ್‌ ಹಂಚಿಕೊಂಡಿದ್ದರು. ಅದರಲ್ಲಿ ಕೊನೆಯ ಫೋಟೋದಲ್ಲಿ, ಐಶ್ವರ್ಯಾ ತನ್ನ ಮಗಳು ಆರಾಧ್ಯ ಜೊತೆ ಪೋಸ್ ನೀಡಿ ಅವಳ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಈ ಚಿತ್ರದಲ್ಲಿ ಅವರು ತಮ್ಮ ಮದುವೆ ರಿಂಗ್‌ ಧರಿಸಿರುವುದು ಕಂಡುಬಂದಿದೆ. ಈ ರೀತಿ ರಿಂಗ್‌ ಅನ್ನು ತೋರಿಸುವ ಮೂಲಕ ಅಭಿಷೇಕ್‌ ಜೊತೆಗಿನ ಡಿವೋರ್ಸ್‌ ವದಂತಿಗೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ.

 

ಅಂದಹಾಗೆ ಈ ರಿಂಗ್‌ ದಕ್ಷಿಣ ಭಾರತದ ಕೆಲವೊಂದು ಸಮುದಾಯದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಳಿಯಕಟ್ಟು ಎಂಬ ಸಂಪ್ರದಾಯವನ್ನು ಪಾಲಿಸಿಕೊಂಡು ಬರುವ ಸಮುದಾಯವು, ಮದುವೆ ಸಂದರ್ಭದಲ್ಲಿ ವಧುವಿಗೆ ಈ ಉಂಗುರವನ್ನು ತೊಡಿಸುತ್ತಾರೆ. ಮದುವೆಯಾಗಿ ಮನೆಬಿಟ್ಟರೂ ಸಹ, ತಾನು ಹುಟ್ಟಿದ ಮನೆಗೆ ಇನ್ನೂ ಕೂಡ ಆಕೆ ಸಂಬಂಧಪಟ್ಟವಳು ಎಂಬುದನ್ನು ಸೂಚಿಸುವ ಉಂಗುರ ಇದಾಗಿದೆ. ಉಡುಪಿ- ದಕ್ಷಿಣ ಕನ್ನಡದ ಬಂಟ ಸಮುದಾಯದಲ್ಲಿ ಇದು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಇನ್ನುಳಿದಂತೆ ಕೆಲ ಸಮುದಾಯದಲ್ಲೂ ಈ ಉಂಗುರ ಧರಿಸುತ್ತಾರೆ.

ಅಂದಹಾಗೆ ಐಶ್ವರ್ಯಾ ರೈ ದಕ್ಷಿಣ ಕನ್ನಡದ ಬಂಟ ಸಮುದಾಯದವರಾಗಿರುವ ಕಾರಣ, ಮದುವೆ ಉಂಗುರವಾಗಿ ಇದನ್ನು ತೊಟ್ಟಿದ್ದಾರೆ. ಮದುವೆಯಾದ ಹೆಣ್ಣಷ್ಟೇ ಈ ಉಂಗುರವನ್ನು ಧರಿಸುವುದಾಗಿದ್ದು, ತಾಳಿ ಮತ್ತು ಕಾಲುಂಗುರಕ್ಕೆ ಇರುವ ಪ್ರಾಮುಖ್ಯತೆಗಿಂತ ಕೊಂಚ ಹೆಚ್ಚಿನ ಪ್ರಾಮುಖ್ಯತೆಯನ್ನು ಈ ಉಂಗುರಕ್ಕೆ ನೀಡಲಾಗುತ್ತದೆ. ಈ ಉಂಗುರವನ್ನು ಒಡ್ಡಿಂಗಿಲ, ಒಡ್ಡುಂಗರ ಎಂದೆಲ್ಲಾ ಕರೆಯಲಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link