Aaradhya Bachchan:ಆರಾಧ್ಯ ಬಚ್ಚನ್‌ಗೆ ಈ ನಟನ ಮೇಲೆ ಕ್ರಶ್ ಇದೆ ಎಂದು ಐಶ್ವರ್ಯ ರೈ ಸಂದರ್ಶನ ಒಂದರಲ್ಲಿ ಬಿಚ್ಚಿಟ್ಟಿದ್ದಾರೆ.
1/11Aaradhya Bachchan:ಇತ್ತೀಚಿನ ದಿನಗಳಲ್ಲಿ ನಟಿ ಐಶ್ವರ್ಯ ರೈ ಹಾಗೂ ಅವರ ಕುಟುಂಬ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ.
2/11ಕೆಲವು ದಿನಗಳ ಹಿಂದೆ ನಟಿ ಐಶ್ವರ್ಯ ರೈ ಹಾಗೂ ಅವರ ಪತಿ ಅಭಿಷೇಕ್ ಬಚ್ಚನ್ ಅವರ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಚರ್ಚೆಗೆ ಕಾರಣವಾಗಿತ್ತು.
3/11ಈ ನಡುವೆ ಇತ್ತೀಚಿನ ದಿನಗಳಲ್ಲಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಹಲವು ಸಂದರ್ಭಗಳಲ್ಲಿ ಜೊತೆಯಾಗಿ ಕಾಣಿಸಿಕೊ೦ಡು ವಿಚ್ಛೇದನ ವದಂತಿಗಳಿಗೆ ತೆರೆ ಎಳೆದಿದ್ದಾರೆ.
4/11ಅಭಿಷೇಕ್ ಬಚ್ಚನ್, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಅವರನ್ನು 2007ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಪ್ರೀತಿಗೆ ಸಂಸಾರಕ್ಕೆ ಸಾಕ್ಷಯಾಗಿ 2011 ರಲ್ಲಿ ಆರಾಧ್ಯ ಬಚ್ಚನ್ ಜನಿಸಿದ್ದಳು.
5/11ಆರಾಧ್ಯ ಬಚ್ಚನ್ ತಮ್ಮ ತಾಯಿಯಂತೆಯೇ ದೊಡ್ಡ ಗುಣ, ಸಂಪ್ರದಾಯ ಹಾಗೂ ಶಿಸ್ತನ್ನು ಬೆಳೆಸಿಕೊಂಡವರು. ತಾಯಿಯ ಹೆಜ್ಜೆಗಳನ್ನು ಅನುಸರಿಸುತ್ತಾ, ದೊಡ್ಡ ಗುಣವನ್ನು ಬೆಳೆಸಿಕೊಂಡವರು.
6/11ನಟಿ ಐಶ್ವರ್ಯ ರೈ ಈ ಮುಂಚೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಮ್ಮ ಆಪ್ತನಾದ ಒಬಬ ನಟನ ಮೇಲೆ ತಮ್ಮ ಮಗಳಿಗೆ ತುಂಬಾ ಪ್ರೀತಿ ಎಂದು ಹೇಳಿದ್ದರು.
7/11ನಟ ರಣಬೀರ್ ಕಪೂರ್ ಎಂದರೆ ಆರಾಧ್ಯ ಬಚ್ಚನ್‌ಗೆ ತುಂಬಾ ಪ್ರೀತಿ ಎಂದು ಐಶ್ವರ್ಯ ರೈ, ಶೂಟಿಂಗ್ ಸೆಟ್‌ನಲ್ಲಿ ಒಮ್ಮೆ ನಡೆದ ಘಟನೆಯನ್ನು ನೆನಪಿಸಿಕೊಂಡರು.
8/11ಈ ಕುರಿತು ಮಾತನಾಡುತ್ತಾ" ಆರಾಧ್ಯ ಬಚ್ಚನ್, ರಣಬೀರ್ ಕಪೂರ್ ಅವರ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ, ರಣಬೀರ್ ಅವರನ್ನು ನೋಡಿದಾಗಲೆಲ್ಲಾ ಆರಾಧ್ಯ ಓಡಿ ಹೋಗಿ ಅವರನ್ನು ತಬ್ಬಿಕೊಳ್ಳುತ್ತಾಳೆ"
9/11"ನಾನು ಮತ್ತು ರಣಬೀರ್ ಕಪೂರ್ ಕೂಡ ಒಳ್ಳೆಯ ಸ್ನೇಹಿತರು. ನಾವಿಬ್ಬರು ಉತ್ತಮ ಒಡನಾಟವನ್ನು ಹೊಂದಿದ್ದೇವೆ. ನಮ್ಮ ಸ್ನೇಹ ಇಂದಿಗೂ ಹಾಗೆಯೇ ಇದೆ. ಒಮ್ಮೆ ರಣಬೀರ್ ಶೂಟಿಂಗ್ ಮಾಡುತ್ತಿದ್ದರು, ಅಭಿಷೇಕ್ ಬಚ್ಚನ್ ಅವರ ಕ್ಯಾಪ್ ಮತ್ತು ಜಾಕೆಟ್ ಧರಿಸಿದ್ದರು. ಆಗ ಆರಾಧ್ಯ ಸೆಟ್‌ಗೆ ಬಂದು ರಣಬೀರ್‌ನನ್ನು ಅಪ್ಪ ಅಭಿಷೇಕ್ ಎಂದು ಭಾವಿಸಿ ಅಪ್ಪಿಕೊಂಡರು."
10/11ರಣಬೀರ್ ಕಪೂರ್ ಅವರನ್ನು ತಬ್ಬಿಕೊಂಡ ನಂತರ, ಅದು ತಮ್ಮ ತಂದೆಯಲ್ಲ ಎಂದು ಅರಿತುಕೊಂಡ ಆರಾಧ್ಯ, ತುಂಬಾ ನಾಚಿಕೆಪಟ್ಟಳು. ಅಂದಿನಿಂದ, ಅಭಿಷೇಕ್.. ನಟ ರಣಬೀರ್ ಕಪೂರ್ ಅವರನ್ನು ತಮ್ಮ ಮಗಳು ಆರಾಧ್ಯ ಅವರ ಮೇಲೆ ಕ್ರಶ್ ಹೊಂದಿದ್ದಾರೆ ಎಂದು ಕೀಟಲೆ ಮಾಡಲು ಪ್ರಾರಂಭಿಸಿದರು.
11/11ಈ ಘಟನೆಯಾದಾಗಿನಿಂದ ಆರಾಧ್ಯ ರಣಬೀರ್‌ನನ್ನು ನೋಡಿದಾಗಲೆಲ್ಲಾ ನಾಚಿಕೆ ಪಡುತ್ತಾಳೆ ಎಂದು ಐಶ್ವರ್ಯ ರೈ ರಣಬೀರ್ ಕಪೂರ್ ಅವರ ಮಗಳಿಗಿರುವ ಸಂಬಂಧದ ಕುರಿತು ಹೇಳಿಕೊಂಡಿದ್ದಾರೆ.