ಶನಿ ಅಮಾವಾಸ್ಯೆ ಸೂರ್ಯ ಗ್ರಹಣದ ಅದ್ಭುತ ಸಂಯೋಗ: ಈ ರಾಶಿಯವರಿಗೆ ಜಾಕ್‌ಪಾಟ್, ಮುಟ್ಟಿದ್ದೆಲ್ಲಾ ಚಿನ್ನ, ಸರ್ವ ಸುಖ ಪ್ರಾಪ್ತಿ

Written ByYashaswini VUpdated byYashaswini V
Published: Mar 21, 2025, 07:38 AM IST|Updated: Mar 21, 2025, 07:38 AM IST

Saturn Transit Solar Eclipse: 2025ರ ಮೊದಲ ಸೂರ್ಯಗ್ರಹಣವು ಶನಿ ಅಮಾವಾಸ್ಯೆಯ ದಿನವೇ ಸಂಭವಿಸಲಿದ್ದು, ಅದ್ಭುತ ಸಂಯೋಗದಿಂದ ಕೆಲವು ರಾಶಿಯವರ ಬದುಕು ಬಂಗಾರವಾಗಲಿದೆ ಎನ್ನಲಾಗುತ್ತಿದೆ. 

Surya Grahan On Shani Amavasya1/8

ಮಾರ್ಚ್ 29, 2025ರಂದು ಶನಿ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಶನಿವಾರದ ಈ ದಿನ ಅಮಾವಾಸ್ಯೆಯೂ ಆಗಿರುವುದರಿಂದ ಇದನ್ನು ಶನಿ ಅಮಾವಾಸ್ಯೆ ಎನ್ನಲಾಗುತ್ತದೆ. ಕಾಕತಾಳೀಯವಾಗಿ ಇದೇ ದಿನ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತಿದೆ. ಜ್ಯೋತಿಷ್ಯ ತಜ್ಞರು ಇದನ್ನು ಭಾಗಶಃ ಸೂರ್ಯಗ್ರಹಣ ಎನ್ನುತ್ತಿದ್ದಾರೆ. 

Solar Eclipse2/8

ಶನಿ ಅಮಾವಾಸ್ಯೆಯ ದಿನವೇ ಉತ್ತರ ಭಾದ್ರಪದ ನಕ್ಷತ್ರದಲ್ಲಿ ಸೂರ್ಯಗ್ರಹಣ ಸಂಭವಿಸುತ್ತಿದೆ. ಹಾಗಾಗಿ, ಈ ನಕ್ಷತ್ರದಲ್ಲಿ ಜನಿಸಿದವರಿಗೆ ವಿಶೇಷ ಲಾಭವಾಗಲಿದೆ, ಜೊತೆಗೆ ಕೆಲವು ರಾಶಿಯವರಿಗೆ ವರ್ಷದ ಮೊದಲ ಸೂರ್ಯಗ್ರಹಣವು ಅದ್ಭುತ ಸಮಯ ಎಂದು ಹೇಳಲಾಗುತ್ತಿದೆ.   

Aries3/8

ಮೇಷ ರಾಶಿ:  ಶನಿ ಅಮಾವಾಸ್ಯೆಯಂದು ಸಂಭವಿಸುತ್ತಿರುವ ಸೂರ್ಯಗ್ರಹಣವು ಈ ರಾಶಿಯವರಿಗೆ ಹಣದ ಹೊಳೆಯನ್ನೇ ಹರಿಸಲಿದೆ. ಅದೃಷ್ಟದ ಸಂಪೂರ್ಣ ಬೆಂಬಲದಿಂದ ವೃತ್ತಿ-ವ್ಯವಹಾರದಲ್ಲಿ ಪ್ರಮುಖ ಕೆಲಸಗಳಲ್ಲಿ ಜಯ ಸಾಧಿಸುವಿರಿ. 

Cancer4/8

ಕರ್ಕಾಟಕ ರಾಶಿ:  ಶನಿ ಅಮಾವಾಸ್ಯೆಯಂದೇ ಸೂರ್ಯಗ್ರಹಣವು ಈ ರಾಶಿಯವರಿಗೆ ಅನುಕೂಲಕರ ಸಮಯ. ಉದ್ಯೋಗ ರಂಗದಲ್ಲಿ ಕೀರ್ತಿ, ಮನ್ನಣೆ ಹೆಚ್ಚಾಗಲಿದೆ. ವ್ಯವಹಾರಸ್ಥರಿಗೆ ಬಂಪರ್ ಆರ್ಥಿಕ ಲಾಭ ಕಂಡು ಬರಲಿದೆ. ಯಾವುದೇ ಕಾನೂನು ವಿವಾದಗಳಲ್ಲಿ ಜಯ ಸಾಧಿಸುವಿರಿ. 

Libra5/8

ತುಲಾ ರಾಶಿ:   ವರ್ಷದ ಮೊದಲ ಸೂರ್ಯಗ್ರಹಣವು ಈ ರಾಶಿಯವರಿಗೆ ಕೌಟುಂಬಿಕ ಸುಖ ಹೆಚ್ಚಿಸುತ್ತದೆ. ವ್ಯವಹಾರದಲ್ಲಿ ಹೂಡಿಕೆಯಿಂದ ಭರ್ಜರಿ ಲಾಭ ಗಳಿಸಬಹುದು. ಹಣಕಾಸಿನ ಸ್ಥಿತಿ ಮೊದಲಿಗಿಂದ ಉತ್ತಮಗೊಳ್ಳಲಿದೆ. 

Capricorn6/8

ಮಕರ ರಾಶಿ:  ಶನಿ ಅಮಾವಾಸ್ಯೆಯ ದಿನ ಸಂಭವಿಸುತ್ತಿರುವ ಸೂರ್ಯಗ್ರಹಣವು ಈ ರಾಶಿಯವರಿಗೆ ಶನಿದೇವನ ವಿಶೇಷ ಆಶೀರ್ವಾದವನ್ನು ನೀಡಲಿದೆ. ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. 

Pisces7/8

ಮೀನ ರಾಶಿ:  ಶನಿ ಸಂಚಾರ, ಸೂರ್ಯಗ್ರಹಣದ ಪ್ರಭಾವದಿಂದ ಈ ರಾಶಿಯವರಿಗೆ ಶನಿಯ ವಿಶೇಷ ಆಶೀರ್ವಾದ ದೊರೆಯಲಿದೆ. ವೃತ್ತಿಯಲ್ಲಿ ಬಡ್ತಿ, ವ್ಯವಹಾರದಲ್ಲಿ ಬಂಪರ್ ಹಣಕಾಸನ್ನು ನಿರೀಕ್ಷಿಸಬಹುದು. ಹೊಸ ಯೋಜನೆಗಳಲ್ಲಿ ಕೈ ಹಾಕುವುದು ಲಾಭದಾಯಕವಾಗಿದೆ. 

Solar Eclipse on Shani Amavasya Prabhav on zodiac signs 8/8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.