Curry Leaves: ಅಡಿಗೆಯಲ್ಲಿ ಒಗ್ಗರಣೆಗೆ ಬಳಸುವ ಖಾದ್ಯದ ರುಚಿ ಹೆಚ್ಚಿಸುವ ಕರಿಬೇವಿನ ಸೊಪ್ಪು ಆರೋಗ್ಯಕ್ಕೂ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
Curry Leaves Benefits: ಮಧುಮೇಹ ನಿಯಂತ್ರಣದಿಂದ ಹಿಡಿದು ದೃಷ್ಟಿ ಸುಧಾರಣೆವರೆಗೂ ಹಲವು ರೀತಿಯಲ್ಲಿ ಕರಿಬೇವಿನ ಸೊಪ್ಪು ಪ್ರಯೋಜನಕಾರಿ ಆಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಭಾರತೀಯ ಅಡುಗೆಗಳಲ್ಲಿ ಆಹಾರದ ರುಚಿ, ಸುವಾಸನೆ ಹೆಚ್ಚಿಸುವ ಕರಿಬೇವಿನ ಸೊಪ್ಪು ವಿಟಮಿನ್ ಎ, ಬಿ, ಸಿ, ಇ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೆಗ್ನೀಸಿಯಮ್ ನಂತಹ ಹಲವು ಪೋಷಕಾಂಶಗಳ ಗಣಿ. ಸಿಹಿ ಬೇವು ಎಂತಲೇ ಕರೆಯಲ್ಪಡುವ ಈ ಕರಿಬೇವಿನ ಒಂದೆರಡು ಎಲೆಗಳನ್ನು ತೊಳೆದು ಖಾಲಿ ಹೊಟ್ಟೆಯಲ್ಲಿ ಜಗಿಯುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗಲಿದೆ. ನಿತ್ಯ ಎರಡು ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಸಿಗುವ ಪ್ರಯೋಜನಗಳೆಂದರೆ...
ನಿತ್ಯ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ಜಗಿಡು ತಿನ್ನುವುದರಿಂದ ಇದರಲ್ಲಿರುವ ಮಧುಮೇಹ ವಿರೋಧಿ ಅಂಶಗಳು ದೇಹದಲ್ಲಿ ಇನ್ಸುಲಿನ್ ಅಂಶವನ್ನು ಹೆಚ್ಚಿಸುವ ಮೂಲಕ ಬ್ಲಡ್ ಶುಗರ್ ಕಂಟ್ರೋಲ್ ನಲ್ಲಿಡಲು ಸಹಾಯಕವಾಗಿದೆ.
ಕರಿಬೇವಿನ ಸೊಪ್ಪು ಚಯಾಪಚಯವನ್ನು ಹೆಚ್ಚಿಸುತ್ತದೆ. ಇರಲ್ಲಿರುವ ಫೈಬರ್, ಉತ್ಕರ್ಷಣ ನಿರೋಧಕಗಳು ಹಸಿವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಆಗಿದ್ದು, ತೂಕ ಇಳಿಕೆಯನ್ನು ವೇಗಗೊಳಿಸುತ್ತದೆ.
ನಿತ್ಯ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಫೈಬರ್ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ (ಎಚ್‌ಡಿಎಲ್) ಹೆಚ್ಚಿಸುತ್ತದೆ. ಇದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.
ಕರಿಬೇವಿನ ಎಲೆಗಳಲ್ಲಿರುವ ಪೋಷಕಂಶಗಳು ನೆತ್ತಿಯಲ್ಲಿ ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ನೆತ್ತಿಯನ್ನು ಆರೋಗ್ಯವಾಗಿರಿಸುತ್ತದೆ. ಕೂಡಲ ಬೆಳವಣಿಗೆಗೆ ಸಹಕಾರಿ ಆಗಿದೆ. ಇದಲ್ಲದೆ, ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಕಾಂತಿಯುತವಾಗಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.